ಬೀಡಿ ಸಿಗರೇಟ್ ಇಲ್ಲದೆ ನಮ್ಗೆ ಇರೋದಕ್ಕೆ ಆಗುತ್ತಿಲ್ಲ

jail conviction rapist 20years dj koppal
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ನಟ ದರ್ಶನ್ ಸಿಗರೇಟ್ ಸೇದುವ ಫೋಟೊ ವೈರಲ್ ಆದ ಬಳಿಕ ಪರಪ್ಪನ ಅಗ್ರಹಾರ ಜೈಲಿನ ಚಿತ್ರಣವೇ ಬದಲಾಗಿದೆ.
ದರ್ಶನ್‌ಗೆ ರಾಜಾತಿಥ್ಯ ನೀಡಿದಕ್ಕೆ ೯ ಮಂದಿಯನ್ನು ಅಮಾನತು ಮಾಡಿದಕ್ಕೆ ಈ ಹಿಂದೆ ಜೈಲು ಸಿಬ್ಬಂದಿ ಪ್ರತಿಭಟಿಸಿದ್ದರು. ಮತ್ತೊಂದೆಡೆ ಇದೀಗ ಕೈದಿಗಳಿಂದಲೂ ಧರಣಿ ನಡೆದಿದೆ ಎನ್ನಲಾಗಿದೆ. ನಮಗೆ ಬೀಡಿ, ಸಿಗರೇಟ್ ಸಿಗುತ್ತಿಲ್ಲ. ಬೀಡಿ ಸಿಗರೇಟ್ ಇಲ್ಲದೆ ನಮ್ಗೆ ಇರೋದಕ್ಕೆ ಆಗುತ್ತಿಲ್ಲ ಎಂದು ಪ್ರತಿಭಟಿಸಿದ್ದಾರೆ. ಕೈದಿಗಳಿಗೆ ಸಮಾಧಾನ ಪಡಿಸಲು ಜೈಲಿನ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ದರ್ಶನ್ ರೌಡಿಶೀಟರ್‌ಗಳ ಜತೆ ಜೈಲಿನಲ್ಲಿ ಕುಳಿತು ಕಾಫಿ ಕುಡಿಯುತ್ತಾ ಸಿಗರೇಟ್ ಸೇದುತ್ತಿದ್ದ ಫೋಟೊ ವೈರಲ್ ಆಗಿತ್ತು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಆ ಬಳಿಕ ಎಚ್ಚೆತ್ತ ಜೈಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಹಾಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಜೈಲಿನಲ್ಲಿ ಬೀಡಿ, ಸಿಗರೇಟ್ ಸಂಪೂರ್ಣ ಬಂದ್ ಆಗಿದೆ. ಇದರಿಂದ ಧೂಮಪಾನದ ಚಟವಿರುವ ಕೈದಿಗಳು ಪರದಾಡುವಂತಾಗಿದೆ.
ಎರಡ್ಮೂರು ದಿನಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ!
ರೇಣುಕಸ್ವಾಮಿ ಕೊಲೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಕಾಮಾಕ್ಷಿಪಾಳ್ಯ ಪೊಲೀಸರು ಇನ್ನು ಎರಡ್ಮೂರು ದಿನಗಳಲ್ಲಿ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸುವ ಸಾಧ್ಯತೆ ಇದೆೆ. ಯಾವುದೇ ಪ್ರಕರಣದ ಎ್ಐಆರ್ ದಾಖಲಾದ ನಂತರ ತನಿಖೆ ನಡೆಸಿ ೩ ತಿಂಗಳೊಳಗೆ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಬೇಕು ಎಂಬ ನಿಯಮವಿದೆ. ರೇಣುಕಸ್ವಾಮಿ ಕೊಲೆ ನಡೆದು ಸೆ.೮ ಕ್ಕೆ ೩ ತಿಂಗಳು ಆಗಲಿದೆ. ಹೀಗಾಗಿ ಸೆ.೮ ರ ಒಳಗಾಗಿ ಪೊಲೀಸರು ಕೋರ್ಟ್‌ಗೆ ಚಾರ್ಚ್‌ಶೀಟ್ ಸಲ್ಲಿಸಬೇಕಾಗಿದ್ದು, ಹೀಗಾಗಿ ಈ ವಾರದಲ್ಲಿಯೇ ದೋಷಾರೋಪಣೆ ಪಟ್ಟಿಯನ್ನು ಪೊಲೀಸರು ಕೋರ್ಟ್ ಸಲ್ಲಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net