ಆ ಸ್ಟಾರ್​ ನಟನನ್ನು ನಾವಿಬ್ಬರೂ ಡೇಟಿಂಗ್​ ಮಾಡ್ತಿದ್ವಿ! ಬಾಲಿವುಡ್​ ಹೀರೋಯಿನ್​ಗಳ ಅಚ್ಚರಿ ಹೇಳಿಕೆ ವೈರಲ್​

ಕಾಜೋಲ್​ ಮತ್ತು ಟ್ವಿಂಕಲ್​ ಖನ್ನಾ
ಕಾಜೋಲ್​ ಮತ್ತು ಟ್ವಿಂಕಲ್​ ಖನ್ನಾ
Published on

ಪ್ರಮುಖ ಮುಖ್ಯಾಂಶಗಳು

  • 'ಟೂ ಮಚ್ ವಿತ್ ಕಾಜೋಲ್ ಅಂಡ್ ಟ್ವಿಂಕಲ್' ಟಾಕ್ ಶೋ
  • ಅದನ್ನು ಮರೆಯುವ ಮುನ್ನವೇ ಮತ್ತೊಂದು ಶಾಕಿಂಗ್ ಹೇಳಿಕೆ
  • ದಾಂಪತ್ಯಕ್ಕೂ ಮೊದಲು ಬಾಲಿವುಡ್​ನ ಒಬ್ಬ ಸ್ಟಾರ್ ನಟನೊಂದಿಗೆ ಡೇಟಿಂಗ್
ಮುಂಬೈ: ಬಾಲಿವುಡ್ ಚಿತ್ರರಂಗದ ಹಿರಿಯ ನಟಿಯರಾದ ಟ್ವಿಂಕಲ್ ಖನ್ನಾ ಮತ್ತು ಕಾಜೋಲ್ ಜತೆಗೂಡಿ ನಡೆಸಿಕೊಡುವ 'ಟೂ ಮಚ್ ವಿತ್ ಕಾಜೋಲ್ ಅಂಡ್ ಟ್ವಿಂಕಲ್' ಟಾಕ್ ಶೋ ಸದ್ಯ ಹಿಂದಿ ವೀಕ್ಷಕರ ಗಮನ ಸೆಳೆಯುವಲ್ಲಿ ಮುಂಚೂಣಿಯಲ್ಲಿದೆ. ಈ ಕಾರ್ಯಕ್ರಮದಲ್ಲಿ ಇವರಿಬ್ಬರು ಮಾತನಾಡುವ ಕೆಲವು ವಿಚಾರಗಳು ಜಾಲತಾಣಗಳಲ್ಲಿ ಸಖತ್ ವೈರಲ್​ ಆಗ್ತಿವೆ. ಅಂತೆಯೇ ಇಲ್ಲೊಂದು ವಿಷಯ ಸದ್ಯ ಸಿನಿಪ್ರಿಯರ ಹುಬ್ಬೇರಿಸಿದೆ.

ಅಚ್ಚರಿ ಹೇಳಿಕೆಗಳೇ ಹೆಚ್ಚು! 

ಇತ್ತೀಚಿನ ಸಂಚಿಕೆಯೊಂದರಲ್ಲಿ, ಕಾಜೋಲ್​, "ದಾಂಪತ್ಯ ಸಂಬಂಧಕ್ಕೂ ಒಂದು ಮುಕ್ತಾಯ ದಿನಾಂಕ ಇರಬೇಕು" ಎಂಬ ಹೇಳಿಕೆ ನೆಟ್ಟಿಗರ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿತ್ತು. ಈ ಕಮೆಂಟ್​ ಮರೆಯುವ ಮುನ್ನವೇ ಮತ್ತೊಂದು ಶಾಕಿಂಗ್ ಹೇಳಿಕೆ ನೀಡಿರುವ ನಟಿಮಣಿಯರು, ಅಂದು ನಾವು ಆ ಒಬ್ಬ ಸ್ಟಾರ್​ ನಟನನ್ನು ಇಷ್ಟಪಟ್ಟಿದ್ದೆವು ಎಂದಿದ್ದಾರೆ. 

ದಾಂಪತ್ಯಕ್ಕೂ ಮೊದಲು...

ಖನ್ನಾ ಹಾಗೂ ಕಾಜೋಲ್​ ತಮ್ಮ ದಾಂಪತ್ಯಕ್ಕೂ ಮೊದಲು ಬಾಲಿವುಡ್​ನ ಒಬ್ಬ ಸ್ಟಾರ್ ನಟನೊಂದಿಗೆ ಡೇಟಿಂಗ್ ಮಾಡುತ್ತಿದ್ದರಂತೆ. ನಟಿಮಣಿಯರ ಈ ಹೇಳಿಕೆ ಸದ್ಯ ಬಾಲಿವುಡ್ ಅಂಗಳದಲ್ಲಿ ಸಾಕಷ್ಟು ಊಹಾಪೋಹ, ಗೊಂದಲಗಳಿಗೆ ದಾರಿ ಮಾಡಿಕೊಟ್ಟಿದೆ. ಆದಾಗ್ಯೂ, ಈ ಜೋಡಿ ತಾವು ಯಾವ ಹೀರೋನನ್ನು ಡೇಟ್​ ಮಾಡುತ್ತಿದ್ದೆವು ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ.

ಇಬ್ಬರು ಸ್ಟಾರ್​ ನಟರ ಹೆಸರು ಮುನ್ನೆಲೆಗೆ

ಕಾಜೋಲ್ ಮತ್ತು ಖನ್ನಾ ಹೇಳಿಕೆ ವೈರಲ್ ಆಗ್ತಿದ್ದಂತೆ ನೆಟ್ಟಿಗರು, ಅಕ್ಷಯ್ ಕುಮಾರ್ ಅಥವಾ ಅಭಿಷೇಕ್ ಬಚ್ಚನ್ ಇರಬೇಕು ಎಂದು ಕಮೆಂಟ್​ಗಳಲ್ಲಿ ಅಭಿಪ್ರಾಯಿಸಿದ್ದಾರೆ. ಏಕೆಂದರೆ, ಅಕ್ಷಯ್ ಕುಮಾರ್ ಈ ಹಿಂದೆ ರವೀನಾ ಟಂಡನ್ ಮತ್ತು ಶಿಲ್ಪಾ ಶೆಟ್ಟಿ ಅವರಂತಹ ಸ್ಟಾರ್​ ನಾಯಕಿಯರೊಂದಿಗೆ ಡೇಟಿಂಗ್​ನಲ್ಲಿದ್ದರು. ಮತ್ತೊಂದೆಡೆ, ಕಾಜೋಲ್ ಅವರ ಪತಿ ಅಜಯ್ ದೇವಗನ್, ಕರಿಷ್ಮಾ ಕಪೂರ್ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಆ ಸಮಯದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು.
ಈ ಹಿನ್ನೆಲೆಯಲ್ಲಿ, ಕಾಜೋಲ್-ಟ್ವಿಂಕಲ್ ತಮ್ಮ ಹಿಂದಿನ ಪ್ರೇಮ ಸಂಬಂಧಗಳ ಬಗ್ಗೆ ಬಹಿರಂಗವಾಗಿ ಮಾತನಾಡುವ ಮೂಲಕ ಹಿಂದಿ ವೀಕ್ಷಕರಲ್ಲಿ ಹಾಗೂ ಅವರ ಅಭಿಮಾನಿಗಳಲ್ಲಿ ಭಾರೀ ಅಚ್ಚರಿಗೆ ಕಾರಣವಾಗಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net