ನಾವು ಯಾವತ್ತೂ ನೆಹರೂ ಅವರನ್ನು ಮೋದಿಯವರೊಂದಿಗೆ ಹೋಲಿಸಿಯೇ ಇಲ್ಲ: ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ತಿರುಗೇಟು

Joshi
Published on

ಹುಬ್ಬಳ್ಳಿ: ಸಿದ್ದರಾಮಯ್ಯ ವೈಚಾರಿಕತೆ ಇರೋ ನಾಯಕ.ಸಾಕಷ್ಟು ಬಜೆಟ್ ಮಂಡಿಸಿದವರು,ಅವರ ವೈಚಾರಿಕತೆ ಅವರಿಗಿರಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾವು ಯಾವತ್ತು ನೆಹರು ಅವರನ್ನ ಮೋದಿಯವರ ಜೊತೆ ಹೋಲಿಸಿಯೇ ಇಲ್ಲ, ಮೋದಿ ಅವರಿಗೆ ಸರಿಸಾಟಿಯಾಗಲು ಸಾಧ್ಯವಿಲ್ಲ.

ಸಿದ್ದರಾಮಯ್ಯ ಅವರಿಗೆ ಆರ್​​ಎಸ್​​ಎಸ್​​ ಬಗ್ಗೆ ಗೊತ್ತಿಲ್ಲ ಅಂದರೆ ಅವರ ಮೇಲೆ ಅನುಕಂಪವಿದೆ. ಗೊತ್ತಿದ್ದರೂ, ನಾಟಕ ಮಾಡ್ತಿದ್ದಾರೆ. ಆರ್​ಎಸ್​​ಎಸ್​​ ಸ್ಥಾಪಿಸಿದ ಹೆಗಡೆವಾರ್​ ಅವರು ದೇಶದ ಅಪ್ರತಿಮ ನಾಯಕ. ಮುಸ್ಲಿಂ ತುಷ್ಟಿಕರಣಕ್ಕೋಸ್ಕರ ಬಾಯಿಗೆ ಬಂದ ಹಾಗೆ ಸಿದ್ದರಾಮಯ್ಯ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಹೆಡ್ಗೆವಾರ್ ಯಾರು ಏನು ಮಾಡಿದ್ರು ಅನ್ನೋದನ್ನು ಸರಿಯಾಗಿ ತಿಳಿದುಕೊಳ್ಳಲಿ, ಅವರು ಸೇವದಳದಲ್ಲಿದ್ದರು ಎನ್ನುವುದೂ ಗೊತ್ತಿಲ್ವಾ, ಅವರು ಜನ್ಮಜಾತ ದೇಶಭಕ್ತರು. ಸಿದ್ದರಾಮಯ್ಯ ಅವರು ತಾವೊಬ್ಬರೇ ತಜ್ಞರು ಅಂದುಕೊಂಡಿದ್ದಾರೆ. ಅದರಿಂದ ಹೊರಗೆ ಬರಲಿ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯನವರೇ ಜನ ನಿಮ್ಮನ್ನ ತಿರಸ್ಕರಿಸಿದ್ದಾರೆ.ಯುಪಿನಲ್ಲಿ 388 ಕ್ಷೇತ್ರದ ನಿಮ್ಮ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.ಜನ ನಿಮ್ಮನ್ನ ಮೂಲೆಯಲ್ಲಿ ತಳ್ಳಿದ್ದಾರೆ ಎಂದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net