ಶ್ರೀಮಂತರಾಗಲು ನಾವೆಲ್ಲರೂ ಕಲಿಯಲೇಬೇಕು!: ಮನಿಮಾತು

Money Mathu
Published on

ಎಲ್ಲಾ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಇಡಬೇಡಿ. ಈ ಮಾತನ್ನು ಹೇಳಿದ್ದು ಹೂಡಿಕೆ ತಜ್ಞ ವಾರನ್ ಬಫೆಟ್. ಹಣ ಹೂಡಿಕೆ ಮಾಡುವಾಗ ವೈವಿಧ್ಯತೆ ಕಾಯ್ದುಕೊಳ್ಳುವುದು ಬಳಹ ಮುಖ್ಯ ಎನ್ನುವುದು ಈ ಮಾತಿನ ಒಳ ಅರ್ಥ. ಹೂಡಿಕೆಯಲ್ಲಿ ವೈವಿಧ್ಯತೆ ಕಾಯ್ದುಕೊಳ್ಳುವ ವಿಚಾರ ಹಾಗಿರಲಿ, ಸಾಮಾನ್ಯ ಹೂಡಿಕೆಗಳ ಬಗ್ಗೆಯೂ ನಮ್ಮ ಬಹುತೇಕ ಮಂದಿಗೆ ತಿಳಿದಿಲ್ಲ. ಅಂಗನವಾಡಿ ಹಂತದಿಂದ ಪದವಿ ವರೆಗೆ ಸುಮಾರು 18 ವರ್ಷಗಳ ಕಾಲ ನಾವು ವಿದ್ಯಾಭ್ಯಾಸ ಮಾಡುತ್ತೇವೆ. ಆದರೆ ಶಿಕ್ಷಣದ ಯಾವ ಹಂತದಲ್ಲೂ ನಮಗೆ ಹಣಕಾಸು ನಿರ್ವಹಣೆಯ ಬಗ್ಗೆ ಕಲಿಯಲು ಸಿಗುವುದಿಲ್ಲ. ಶ್ರೀಮಂತರಾಗಲಿ, ಮಧ್ಯಮ ವರ್ಗದವರಾಗಲಿ, ಬಡವರಾಗಲಿ ಪ್ರತಿಯೊಬ್ಬರಿಗೂ ಹಣಕಾಸು ನಿರ್ವಹಣೆ ಅನ್ನೋದು ಬಹಳ ಮುಖ್ಯ ಸಂಗತಿ. ಈ ವಿಚಾರ ಗಮನದಲ್ಲಿಟ್ಟುಕೊಂಡು ಇಂಡಿಯನ್ ಮನಿ ಡಾಟ್ ಕಾಂ, ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಹಣಕಾಸು ನಿರ್ವಹಣೆ ಬಗ್ಗೆ ಹತ್ತಾರು ಕೋರ್ಸ್​ಗಳನ್ನು ರೂಪಿಸಿದೆ. ಪ್ರತಿ ಕೋರ್ಸ್ ಸಹ ಹೂಡಿಕೆ ಬಗ್ಗೆ ನಿಮಗಿರುವ ಅರಿವನ್ನು ವಿಸ್ತಾರಗೊಳಿಸುವ ನಿಟ್ಟಿನಲ್ಲಿ ಪೂರಕವಾಗಿದೆ.

ಫೈನಾನ್ಸಿಯಲ್ ಫ್ರೀಡಂ ಕೋರ್ಸ್: ಹಣಕಾಸು ನಿರ್ವಹಣೆಗೆ ಬೇಕಿರುವ ಭದ್ರ ಬುನಾದಿಯನ್ನು ಫೈನಾನ್ಸಿಯಲ್ ಫ್ರೀಡಂ ಕೋರ್ಸ್ ಒದಗಿಸುತ್ತದೆ. ಪ್ರತಿಯೊಬ್ಬರೂ ಆದಾಯ ಹೆಚ್ಚಿಕೊಳ್ಳೋದು ಹೇಗೆ, ಖರ್ಚು ವೆಚ್ಚಗಳನ್ನು ಹೇಗೆ ನಿಭಾಯಿಸಬೇಕು, ತೆರಿಗೆ ಉಳಿತಾಯ ಮಾಡುವುದು ಹೇಗೆ, ಯಾವ ಇನ್ಶೂರೆನ್ಸ್ ಮಾಡಿಸಬೇಕು, ಯಾವುದನ್ನು ಮಾಡಿಸಬಾರದು, ಹೂಡಿಕೆಯನ್ನು ಯಾವ ಹಂತದಿಂದ ಆರಂಭಿಸಬೇಕು, ವಿಲ್ ಬರೆಯುವುದು ಹೇಗೆ, ಹೀಗೆ ಹಣಕಾಸು ನಿರ್ವಹಣೆ ಬಗ್ಗೆ ಎಲ್ಲ ರೀತಿಯ ಸಮಗ್ರ ಮಾಹಿತಿ ಈ ಕೋರ್ಸ್​ನಲ್ಲಿದೆ. ಹಣಕಾಸು ನಿರ್ವಹಣೆ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ಕಲಿತು ರೂಢಿಸಿಕೊಳ್ಳುವ ಆಸಕ್ತಿಯಿದೆ ಎನ್ನುವವರ ಪಾಲಿಗೆ ಮಾಹಿತಿಯ ಕಣಜ ಫೈನಾನ್ಸಿಯಲ್ ಫ್ರೀಡಂ ಕೋರ್ಸ್.

ಸ್ಟಾಕ್ ಮಾರ್ಕೆಟ್ ಕೋರ್ಸ್: ಕಳೆದ ವರ್ಷ 80 ರೂಪಾಯಿ ಇದ್ದ ಅಡುಗೆ ಎಣ್ಣೆ ಬೆಲೆ ಈಗ 180 ರೂಪಾಯಿ ಆಗಿದೆ. ಆದರೆ ನಿಮ್ಮ ಸಂಬಳ ಅಷ್ಟರ ಮಟ್ಟಿಗೆ ಜಾಸ್ತಿ ಆಗಿದೆಯಾ? ಖಂಡಿತ ಇಲ್ಲ. ನೀವು ಮಲಗಿರುವಾಗಲೂ ನಿಮ್ಮ ಹಣ ನಿಮಗಾಗಿ ದುಡಿಯುವಂತಾಗಬೇಕು ಅಂದ್ರೆ ಷೇರು ಮಾರುಕಟ್ಟೆ ಹೂಡಿಕೆಯನ್ನು ನೀವು ಕಡೆಗಣಿಸಬಾರದು. ಹಾಗೆಂದ ಮಾತ್ರಕ್ಕೆ ಷೇರು ಮಾರುಕಟ್ಟೆಯ ಪೂರ್ವಾಪರ ತಿಳಿಯದೆ ಹೂಡಿಕೆ ಮಾಡಿದರೆ ದೊಡ್ಡ ಮಟ್ಟದ ನಷ್ಟವೂ ನಿಮಗೆ ಉಂಟಾಗುತ್ತದೆ. ಅರಿತು ಹೂಡಿಕೆ ಮಾಡಿದರೆ ಷೇರು ಮಾರುಕಟ್ಟೆಯಲ್ಲಿ ಪರ್ಯಾಯ ಆದಾಯ ಕಂಡುಕೊಳ್ಳಲು ಸಾಧ್ಯವಿದೆ. ಇದನ್ನು ಎಲ್ಲರಿಗೂ ಕಲಿಸುವ ಸಲುವಾಗಿ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಸ್ಟಾಕ್ ಮಾರ್ಕೆಟ್ ಕೋರ್ಸ್ ರೂಪಿಸಲಾಗಿದೆ.

ಮ್ಯೂಚುವಲ್ ಫಂಡ್ ಕೋರ್ಸ್: ಷೇರು ಮಾರುಕಟ್ಟೆ ಬಗ್ಗೆ ನಮಗೆ ತಿಳಿದಿಲ್ಲ, ಆದರೆ ಷೇರುಗಳಲ್ಲಿ ಪರೋಕ್ಷವಾಗಿ ಹೂಡಿಕೆ ಮಾಡಲು ನಾವು ಉತ್ಸಕರಾಗಿದ್ದೇವೆ ಎನ್ನುವವರಿಗಾಗೇ ನಾವು ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಮ್ಯೂಚುವಲ್ ಫಂಡ್ ಕೋರ್ಸ್ ವಿನ್ಯಾಸ ಮಾಡಿದ್ದೇವೆ. ಮ್ಯೂಚುವಲ್ ಫಂಡ್ ಹೂಡಿಕೆಯನ್ನು 500 ರೂಪಾಯಿಯಿಂದಲೂ ಆರಂಭಿಸಬಹುದು. ಅದು ಹೇಗೆ ಅನ್ನೋದನ್ನು ಕೋರ್ಸ್​ನಿಂದಲೇ ತಿಳಿಯಿರಿ.

ಹೆಲ್ತ್ ಇನ್ಶೂರೆನ್ಸ್ ಕೋರ್ಸ್: ಕುಟುಂಬದಲ್ಲಿ ಧುತ್ತೆಂದು ಬರುವ ಆರೋಗ್ಯ ಸಮಸ್ಯೆಗಳ ನಿರ್ವಹಣೆಗೆ ಹೆಲ್ತ್ ಇನ್ಶೂರೆನ್ಸ್ ಅತ್ಯಗತ್ಯ. ಕೋವಿಡ್ ಬಂದ ನಂತರದಲ್ಲಿ ಹೆಲ್ತ್ ಇನ್ಶೂರೆನ್ಸ್ನ ಮಹತ್ವ ಪ್ರತಿಯೊಬ್ಬರಿಗೂ ಅರ್ಥವಾಗಿದೆ. ಅನಾರೋಗ್ಯಕ್ಕೆ ಒಳಗಾದಾಗ ದುಡಿದ ದುಡ್ಡನ್ನೆಲ್ಲಾ ಆಸ್ಪತ್ರೆಗೆ ಕಟ್ಟುವ ಬದಲು, ಗಳಿಸಿದ ಹಣದಲ್ಲಿ ಒಂದಷ್ಟು ಹಣವನ್ನು ಹೆಲ್ತ್ ಇನ್ಶೂರೆನ್ಸ್ಗೆ ಮೀಸಲಿಡುವುದು ಒಳ್ಳೆಯದಲ್ಲವೇ? ಅದೇನೋ ಸರಿ ಆದ್ರೆ ಯಾವ ಹೆಲ್ತ್ ಇನ್ಶೂರೆನ್ಸ್ ತಗೋಬೇಕು, ಯಾವುದರಿಂದ ಅನುಕೂಲ ಜಾಸ್ತಿ ಅನ್ನೋ ಪ್ರಶ್ನೆ ಇದ್ದೇ ಇರುತ್ತೆ. ಇದಕ್ಕೆ ಉತ್ತರ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿರುವ ಹೆಲ್ತ್ ಇನ್ಶೂರೆನ್ಸ್ ಕೋರ್ಸ್​ನಲ್ಲಿದೆ.

ಟರ್ಮ್ ಲೈಫ್ ಇನ್ಶೂರೆನ್ಸ್ ಕೋರ್ಸ್: ಕರೊನಾದಿಂದಾಗಿ ಪ್ರೀತಿ ಪಾತ್ರರನ್ನು ಕಳೆದುಕೊಂಡು ಅನೇಕ ಕುಟುಂಬಗಳಿಗೆ ಆಧಾರ ಸ್ತಂಭಗಳೇ ಇಲ್ಲದಂತಾಗಿದೆ. ಮನೆಯ ಯಜಮಾನನನ್ನು ಕಳೆದುಕೊಂಡು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಎನ್ನುವುದು ನಿಜ. ಆದ್ರೆ ನಮ್ಮ ಮರಣದ ನಂತರ ನಮ್ಮ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದು ಅಲ್ಲವೇ? ಇದನ್ನು ಮನದಟ್ಟು ಮಾಡುವ ಸಲುವಾಗಿಯೇ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಸೂಕ್ತ ಟಮ್ರ್ ಲೈಫ್ ಇನ್ಶೂರೆನ್ಸ್ ಆಯ್ಕೆ ಹೇಗೆ ಎನ್ನುವ ಬಗ್ಗೆ ಒಂದು ಕೋರ್ಸ್ ವಿನ್ಯಾಸಗೊಳಿಸಲಾಗಿದೆ.

ಆದಾಯ ಹೆಚ್ಚಿಸುವ ಕೃಷಿ ಕೋರ್ಸ್​ಗಳು: ಕೃಷಿಕರ ಬದುಕನ್ನು ಹಸನಾಗಿಸಲು ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ವ್ಯವಸಾಯ ಮತ್ತು ಅದಕ್ಕೆ ಸಂಬಂಧಿಸಿದ ಉಪಕಸುಬುಗಳ ಬಗ್ಗೆ ಅನೇಕ ಕೋರ್ಸ್​ಗಳನ್ನು ವಿನ್ಯಾಸಗೊಳಿಸಲಾಗಿದೆ. ಸಮಗ್ರ ಕೃಷಿ, ಒಂದು ಎಕರೆಯಲ್ಲಿ ಒಂದು ಲಕ್ಷ ಆದಾಯ ಗಳಿಸುವುದು, ಅರಣ್ಯ ಕೃಷಿ. ಜೇನು ಕೃಷಿ, ಡ್ರಾ್ಯಗನ್ ಫೂ›ಟ್ ಕೃಷಿ, ಹೈನುಗಾರಿಕೆ, ಕುರಿ ಸಾಕಣೆ, ಕೋಳಿ ಸಾಕಣೆ ಸೇರಿ ಹತ್ತು ಹಲವು ಮಾಹಿತಿಪೂರ್ಣ ಕೋರ್ಸ್​ಗಳು ಇಲ್ಲಿವೆ.

ಆದಾಯ ಹೆಚ್ಚಿಸುವ ಬಿಸಿನೆಸ್ ಕೋರ್ಸ್​ಗಳು: ಕೆಲಸ ಹೋಯ್ತು ಅನ್ನೋ ಚಿಂತೆ ಬಿಟ್ಟು ಬದುಕು ಕಟ್ಟಿಕೊಳ್ಳುವುದು ಬಹಳ ಮುಖ್ಯ. ಅಂತಹವರಿಗಾಗೇ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಬಿಸಿನೆಸ್ ಕೋರ್ಸ್​ಗಳನ್ನು ವಿನ್ಯಾಸಗೊಳಿಸಲಾಗಿದೆ. ಮನೆಯಿಂದ ಬಿಸಿನೆಸ್ ಶುರು ಮಾಡೋದು ಹೇಗೆ, ಓದುವಾಗಲೇ ದುಡಿಮೆಯ ಮಾರ್ಗ ಕಂಡು ಕೊಳ್ಳುವುದು ಹೇಗೆ, ಗಾಣದ ಎಣ್ಣೆ ಬಿಸಿನೆಸ್ ಮಾಡೋದು ಹೇಗೆ, ಹಳ್ಳಿಯಿಂದ ಬಿಸಿನೆಸ್ ಕಟ್ಟೋದು ಹೇಗೆ, ಸೂಪರ್ ಮಾರ್ಕೆಟ್ ಬಿಸಿನೆಸ್ ಮಾಡೋದು ಹೇಗೆ, ತರಕಾರಿ ಅಂಗಡಿ ಬಿಸಿನೆಸ್ ಮಾಡೋದು ಹೇಗೆ, ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್ ಕಟ್ಟೋದು ಹೇಗೆ, ಸ್ಟೇಷನರಿ ಬಿಸಿನೆಸ್ ಆರಂಭಿ ಸೋದು ಹೇಗೆ ಎನ್ನುವುದು ಸೇರಿ ನೂರಾರು ಬಿಸಿನೆಸ್ ಕೋರ್ಸ್​ಗಳು ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿವೆ.

ಎನ್​ಪಿಎಸ್, ಪಿಪಿಎಫ್, ಪೋಸ್ಟ್ ಆಫೀಸ್ ಹೂಡಿಕೆ ಕೋರ್ಸ್.. ಇಷ್ಟೇ ಅಲ್ಲ, ಎನ್​ಪಿಎಸ್ ಹೂಡಿಕೆ, ಪಿಪಿಎಫ್ ಹೂಡಿಕೆ, ಪೋಸ್ಟ್ ಆಫೀಸ್ ಹೂಡಿಕೆ ಮಾಡುವುದು ಹೇಗೆ ಎನ್ನುವುದರ ಬಗ್ಗೆಯೂ ವಿಸõತವಾದ ಕೋರ್ಸ್​ಗಳಿವೆ. ಯಾವುದೇ ಹೂಡಿಕೆ ಮಾಡುವ ಮುನ್ನ ಅವನ್ನು ಕಲಿತು, ಅರಿತು ಮುನ್ನಡೆಯುವುದು ಮುಖ್ಯ. ಆಗ ನೀವು ನಿಮ್ಮ ಹೂಡಿಕೆಯಿಂದ ಹೆಚ್ಚು ಲಾಭ ಗಳಿಸಬಹುದು. ಈ ದೃಷ್ಟಿಯಲ್ಲಿ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ವಿವಿಧ ಕೋರ್ಸ್ ರೂಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net