ಈ ಶಾಲೆಯಲ್ಲಿ ಸಣ್ಣ ಮಳೆ ಬಂದರೂ ಸಾಕು, ನಿಲ್ಲುತ್ತೆ ಗಲೀಜು ನೀರು!

water
Published on

ವಿಜಯನಗರ: ಸಣ್ಣ ಮಳೆಗೆ ಕಾಲುವೆಯಂತೆ ಮಳೆ ನೀರು ಹರಿಯುತ್ತದೆ. ಇದು ಹೊಸಪೇಟೆಯ ಸರ್ಕಾರಿ ಶಾಲೆಯ ದುಸ್ಥತಿ.

ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದ ಚಪ್ಪರದಳ್ಳಿಯ ಕೊರಗಲ್ ಗೋಪಾಲ ಶೆಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಳೆಯಿಂದಾಗಿ ಆವರಣದಲ್ಲಿ ಹೊಂಡವೇ ನಿರ್ಮಾಣವಾಗುತ್ತದೆ.

ಶಾಲೆಗೆ ಹೋಗಲು ಇರುವ ಸಣ್ಣ ದ್ವಾರದಲ್ಲೂ ನೀರು ನಿಲ್ಲುತ್ತಿದೆ. ಈ ಶಾಲೆಯ ಪರಿಸ್ಥಿತಿ ಯಾವ ಮಟ್ಟದಲ್ಲಿದೆ ಎಂದರೆ ನಿಂತ ನೀರಿಗೆ ಶೌಚಾಲಯದ ನೀರೂ ಸೇರಿಕೊಳ್ಳುತ್ತಿದೆ.

ಇದರಿಂದಾಗಿ ಮಕ್ಕಳಿಗೆ ತೀವ್ರ ಸಮಸ್ಯೆ ಎದುರಾಗುತ್ತಿದ್ದು, ಆರೋಗ್ಯ ಸಮಸ್ಯೆಗಳೂ ಎದುರಾಗಬಹುದು. ಇದನ್ನು ಸಂಬಂಧಿಸಿದ ಇಲಾಖೆ ಸರಿಪಡಿಸಬೇಕು ಎಂದು ಪೊಷಕರು ಒತ್ತಾಯಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net