ಲಿಂಗನಮಕ್ಕಿ ಡ್ಯಾಂನಿಂದ ನೀರು ಬಿಡುಗಡೆ ಇಂದು

linganamakki (3)
ಲಿಂಗನಮಕ್ಕಿ ಜಲಾಶಯ.
Published on

ಕಾರ್ಗಲ್: ಲಿಂಗನಮಕ್ಕಿ ಜಲಾಶಯ ಗರಿಷ್ಠ ಮಟ್ಟದ ಸನಿಹಕ್ಕೆ ತಲುಪಿದ್ದು, ಅಣೆಕಟ್ಟು ಹಾಗೂ ಶರಾವತಿ ನದಿಪಾತ್ರದ ನಿವಾಸಿಗಳ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಮಂಗಳವಾರ ಬೆಳಗ್ಗೆ ಲಿಂಗನಮಕ್ಕಿ ಜಲಾಶಯದಿಂದ ನೀರನ್ನು ಹೊರಬಿಡಲು ಕೆಪಿಸಿ ನಿರ್ಧರಿಸಿದೆ.

ಶರಾವತಿ ಕಣಿವೆ ವ್ಯಾಪ್ತಿಯ ನಿವಾಸಿಗಳಿಗೆ ಈಗಾಗಲೇ ಕೆಪಿಸಿಯಿಂದ ಮೂರು ನೋಟಿಸ್‌ಗಳ ಮೂಲಕ ಎಚ್ಚರಿಕೆ ನೀಡಲಾಗಿದೆ. ಸೋಮವಾರ ಧ್ವನಿವರ್ಧಕದ ಮೂಲಕವೂ ಕೂಡ ಸ್ಥಳೀಯವಾಗಿ ಪ್ರಚಾರ ಮಾಡಲಾಗಿದೆ.

1819 ಅಡಿ ಗರಿಷ್ಠ ಮಟ್ಟ ಹೊಂದಿರುವ ಲಿಂಗನಮಕ್ಕಿ ಜಲಾಶಯವು ಸೋಮವಾರ ಸಂಜೆ ಹೊತ್ತಿಗೆ ನೀರಿನ ಸಂಗ್ರಹದ ಮಟ್ಟವು 1815.55 ಅಡಿ ತಲುಪಿದೆ. ಜಲಾನಯನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೂರು ಅಡಿಗಳ ಅಂತರ ಕಾಯ್ದುಕೊಂಡು 1816 ಅಡಿಗಳ ಮಟ್ಟಕ್ಕೆ ರೇಡಿಯಲ್ ಗೇಟ್‌ಗಳನ್ನು ತೆರೆದು ನೀರನ್ನು ನದಿಗೆ ಬಿಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಲಿಂಗನಮಕ್ಕಿ ಅಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ಆರ್.ಶಿವಕುಮಾರ್ ತಿಳಿಸಿದರು.

ಶರಾವತಿ ನದಿ ತೀರದ ಮರಳುಕೋರೆ, ಯಡ್ಡಳ್ಳಿ ಮುಂತಾದ ಪ್ರವಾಹ ಉಂಟಾಗುವ ಸ್ಥಳಗಳನ್ನು ಗುರುತಿಸಿ ಎಚ್ಚರಿಕೆ ನೀಡಲಾಗಿದೆ. ಜಲಾಶಯದಿಂದ 50 ಸಾವಿರಕ್ಕೂ ಅಧಿಕ ಪ್ರಮಾಣದಲ್ಲಿ ನೀರು ಹೊರಬಿಟ್ಟಾಗ ಮಾತ್ರ ಈ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಕಡಿತವಾಗಲಿದೆ ಎಂದು ಮಾಹಿತಿ ನೀಡಿದರು. ಸದ್ಯಕ್ಕೆ ಜಲಾಶಯದಿಂದ 20 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುವುದು. ಒಳಹರಿವನ್ನು ಗಮನಿಸಿ ಹಂತ ಹಂತವಾಗಿ ಹೆಚ್ಚಿಸುವ ಬಗ್ಗೆ ಚಿಂತಿಸಲಾಗಿದೆ ಎಂದರು.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net