ನೀರಿನ ಗುಂಡಿಯಲ್ಲಿ ಬಿದ್ದು 4 ವರ್ಷದ ಬಾಲಕ ಸಾವು

Crime Logo
Published on

ಶಿಗ್ಗಾಂವಿ: ನೀರಿನ ಗುಂಡಿಯಲ್ಲಿ ಬಿದ್ದು 4 ವರ್ಷದ ಬಾಲಕ ಮೃತಪಟ್ಟ ಘಟನೆ ತಾಲೂಕಿನ ತಡಸ ಗ್ರಾಮದ ಮದಿನಾ ನಗರದಲ್ಲಿ ಬುಧವಾರ ಸಂಭವಿಸಿದೆ.
ಇಮ್ರಾನ್ ನಯೀಮ್ ಕೊಲ್ಲಾಪುರ (4) ಬಾಲಕ.
ಈತ ಮನೆಯಿಂದ ಆಟವಾಡುತ್ತ ಹೋಗಿ ಪಕ್ಕದಲ್ಲಿದ್ದ ನೀರಿನ ಗುಂಡಿಯಲ್ಲಿ ಬಿದ್ದಿದ್ದಾನೆ. ಇದರಿಂದಾಗಿ ನೀರು ಕುಡಿದು ಉಸಿರುಗಟ್ಟಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net