

Pre-Wedding Shoot :ಇತ್ತೀಚಿನ ದಿನಗಳಲ್ಲಿ, ಸಂಗೀತ, ಅರಿಶಿಣ ಶಾಸ್ತ್ರ ಮತ್ತು ಆರತಕ್ಷತೆಯ ಜೊತೆಗೆ, ವಿವಾಹಪೂರ್ವ ಫೋಟೋ ಶೂಟ್‌ಗಳು ಮದುವೆಯ ಪ್ರಮುಖ ಭಾಗವಾಗಿದೆ. ಇತ್ತೀಚೆಗೆ ದಂಪತಿ ವಿವಾಹಪೂರ್ವ ( ಪ್ರೀ-ವೆಡ್ಡಿಂಗ್ ಶೂಟ್ ) ವೀಡಿಯೊವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಟೀಕೆ ವ್ಯಕ್ತವಾಗುತ್ತಿದೆ.
ಈ ವಿಡಿಯೋದಲ್ಲಿ, ಈ ಜೋಡಿಗಳು ಈಜುಡುಗೆಗಳಲ್ಲಿ ಚುಂಬಿಸುತ್ತಿರುವುದು ಕಂಡುಬರುತ್ತದೆ. ಕ್ಯಾಮೆರಾಮನ್ ನೀರಿನಲ್ಲಿ ಮತ್ತು ಹೊರಗಿನಿಂದ ವೀಡಿಯೊವನ್ನು ಬಹಳ ಸೃಜನಾತ್ಮಕವಾಗಿ ಚಿತ್ರೀಕರಿಸಿದ್ದರೂ, ಈಜುಕೊಳದಲ್ಲಿ ಪ್ರಣಯದ ಮಿತಿಗಳನ್ನು ಮೀರಿ ಹೋಗುವುದನ್ನು ನೋಡಲಾಗುತ್ತಿದ್ದು, ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ವೀಡಿಯೊ ಬಿಡುಗಡೆಯಾದ ತಕ್ಷಣ ನೆಟಿಜನ್‌ಗಳಿಂದ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆಯಿತು. "ಇದು ವಿವಾಹಪೂರ್ವ ಚಿತ್ರೀಕರಣವಲ್ಲ.. ಇದು ಮೊದಲ ರಾತ್ರಿಯ ವೀಡಿಯೊದಂತೆ ಕಾಣುತ್ತದೆ!" ಅನೇಕರು ಆಕ್ಷೇಪಣೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ವಿಡಿಯೋ ಎಲ್ಲಿ ಚಿತ್ರೀಕರಿಸಿದ್ದು, ಅಸಲಿಗೆ ಈ ಜೋಡಿ ಯಾರು ಎನ್ನುವ ಯಾವುದೇ ಮಾಹಿತಿಯೂ ಲಭ್ಯವಿಲ್ಲ.
ವಿವಾಹ ಪೂರ್ವ ಚಿತ್ರೀಕರಣವು ದಂಪತಿಗಳ ನಡುವಿನ ಪ್ರೀತಿ ಮತ್ತು ಸಂಬಂಧವನ್ನು ಪ್ರದರ್ಶಿಸಲು ಒಂದು ಅವಕಾಶ. ಅದು ಮಿತಿಗಳನ್ನು ದಾಟಿ ಅಸಭ್ಯವಾದಾಗ ಸಮಸ್ಯೆಗಳು ಉದ್ಭವಿಸುತ್ತವೆ. ಸಂಪ್ರದಾಯಗಳನ್ನು ಗೌರವಿಸುವುದು ಮತ್ತು ಸಮಾಜವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಪ್ರತಿಯೊಬ್ಬ ದಂಪತಿ ಜವಾಬ್ದಾರಿಯಾಗಿದೆ.