VIDEO | "ಬಂಗ್ಲಾ ಚಾಯಿ ಬಿಜೆಪಿ ಸರ್ಕಾರ್" : ಪ್ರಧಾನಿ ಮೋದಿ

modi
Published on

ಕೊಲ್ಕತಾ : ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ಬಿರುಸಿನಿಂದ ಸಾಗಿದೆ. ಆಡಳಿತಾರೂಢ ಟಿಎಂಸಿ ಸರ್ಕಾರವನ್ನು ಮಣಿಸಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಬಿಜೆಪಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಈ ಪ್ರಯತ್ನದಲ್ಲಿ ಬಿಜೆಪಿಯ ಸ್ಟಾರ್ ಕಾಂಪೇನರ್ ಆಗಿ ಭಾಗವಹಿಸುತ್ತಿದ್ದಾರೆ, ಪ್ರಧಾನಿ ನರೇಂದ್ರ ಮೋದಿ.

ಬಂಗಾಳದ ಕೊಂಟಾಯ್​ನಲ್ಲಿ ಇಂದು ನಡೆದ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ಪರ ಪ್ರಚಾರ ಭಾಷಣ ಮಾಡಿದ ಮೋದಿ ಅವರು, "ಬಂಗ್ಲಾ ಚಾಯಿ ಬಿಜೆಪಿ ಸರ್ಕಾರ್" (ಬಂಗಾಳಕ್ಕೆ ಬೇಕು ಬಿಜೆಪಿ ಸರ್ಕಾರ ಎಂಬರ್ಥ) ಎಂದು ಘೋಷಣೆ ಕೂಗಿಸಿದರು. ರಾಜ್ಯದ ಅಭಿವೃದ್ಧಿಗಾಗಿ ದುಡಿಯುವ ಬದ್ಧತೆ ಮತ್ತು ಸಂಕಲ್ಪವನ್ನು ಬಿಜೆಪಿ ಹೊಂದಿದೆ ಎಂದು ಸಾರಿದರು. ಮೋದಿ ಅವರ ಭಾಷಣದ ವಿಡಿಯೋ ತುಣುಕು ಇಲ್ಲಿದೆ -

ಈ ಸಂದರ್ಭದಲ್ಲಿ, ಟಿಎಂಸಿಯ ಆಟ ಮುಗಿಸಬೇಕೆಂದು ಬಂಗಾಳದ ಸ್ವಾಭಿಮಾನಿ ಮಹಿಳೆಯರು ನಿರ್ಧಾರ ಮಾಡಿದ್ದಾರೆ ಎಂದರು. "ಟಿಎಂಸಿಯೆರ್ ಖೇಲಾ ಶೇಷ್​ ಹೋಬೇ, ಬಿಕಾಶ್ ಆರಂಭೊ ಹೋಬೆ" (ಆಟ ಮುಗಿಯಲಿದೆ, ಇನ್ನು ವಿಕಾಸ ಆರಂಭವಾಗಲಿದೆ ಎಂಬರ್ಥ) ಎಂಬುದು ಜನರ ಆಶಯ ಎಂದು ಬಂಗಾಳಿ ಶಬ್ದಗಳನ್ನು ಆಡಿದ ಮೋದಿ, ಬಿಜೆಪಿಯು ಬಂಗಾಳದ ಭವಿಷ್ಯಕ್ಕಾಗಿ ನಿಷ್ಠೆಯಿಂದ ಶ್ರಮಿಸಲಿದೆ ಎಂದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net