

ಮುಂಬೈ: ನಟ, ನಟಿಯರು ತಮ್ಮ ಫಿಟ್ ದೇಹಕ್ಕೆ ಹೆಸರುವಾಸಿಯಾಗಿದ್ದಾರೆ. ವರ್ಕ್‌ಔಟ್ ಮಾಡುವುದು, ತಮ್ಮ ಆಹಾರಕ್ರಮದ ಬಗ್ಗೆ ಕಾಳಜಿ ವಹಿಸುವುದು ಮುಂತಾದ ವ್ಯಾಪಕ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ.
17 ನೇ ವಯಸ್ಸಿನಲ್ಲಿ, ನಾನು ಅನಾರೋಗ್ಯದಿಂದ ಬಳಲುತ್ತಿದ್ದೆ. ತೀವ್ರ ಜ್ವರ ಅನುಭವಿಸಿದೆ, ಅದು ಕೇವಲ ಎಂಟು ದಿನಗಳಲ್ಲಿ 10 ಕಿಲೋಗಳಷ್ಟು ದೇಹದ ತೂಕವನ್ನು ಕಳೆದುಕೊಳ್ಳುವಂತೆ ಮಾಡಿತು. 17 ನೇ ವಯಸ್ಸಿನಲ್ಲಿ, ನಾನು 65 ಕೆಜಿಯಿಂದ 55 ಕೆಜಿಗೆ ಇಳಿದೆ. ಆರೋಗ್ಯಕರ ಜೀವನಶೈಲಿಯನ್ನು ಸ್ವತಃ ನಿರ್ವಹಿಸುವುದು ಒಂದು ಸವಾಲಾಗಿತ್ತು.
ಈ ರೋಗ ನನ್ನ ಶಾಲಾ ಜೀವನದ ಮೇಲೆ ಪರಿಣಾಮ ಬೀರಿತು. “ನಾನು ಶಾಲೆಯಲ್ಲಿ ಸಾಕಷ್ಟು ಸಕ್ರಿಯನಾಗಿದ್ದೆ, ಪ್ರತಿಯೊಂದು ಕ್ರೀಡೆಯನ್ನು ಆಡುತ್ತಿದ್ದೆ ಮತ್ತು ಮಧುಮೇಹದ ನಂತರ ನನ್ನಿಂದ ಇದ್ಯಾವುದೂ ಸಾಧ್ಯವಾಗಲಿಲ್ಲ. ನನಗೆ ಕ್ರೀಡೆಯ ಮೇಲೆ ಇದ್ದ ಉತ್ಸಾಹವನ್ನು ಸಂಪೂರ್ಣವಾಗಿ ಕ್ಷೀಣಿಸಿತು" ಎಂದು ಹೇಳುತ್ತಾ ಬೇಸರ ವ್ಯಕ್ತಪಡಿಸಿದ್ದಾರೆ.
"ಮಧುಮೇಹದೊಂದಿಗಿನ ಹೋರಾಟವು ಮನರಂಜನಾ ಉದ್ಯಮದಲ್ಲಿ ತನ್ನ ವೃತ್ತಿಜೀವನವನ್ನು ಅಡ್ಡಿಪಡಿಸಲು ಎಂದಿಗೂ ಬಿಡಲಿಲ್ಲ. ನಾನು 24 ವರ್ಷಗಳಿಂದ ಮಧುಮೇಹದ ಜತೆಗೆ ವೃತ್ತಿಜೀವನವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದೇನೆ. ನಾನು 17 ವರ್ಷ ವಯಸ್ಸಿನಿಂದಲೂ ಇನ್ಸುಲಿನ್ ಅನ್ನು ಬಳಸುತ್ತಿದ್ದೇನೆ ಮತ್ತು ಈಗ ನನಗೆ 41 ವರ್ಷ ವಯಸ್ಸಾಗಿದೆ" ಎಂದಿದ್ದಾರೆ.
ಇನ್ಸುಲಿನ್ ಎಂದರೆನು?: ಸಕ್ಕರೆ ಕಾಯಿಲೆ ಇರುವವರಿಗೆ ತಾವು ತೆಗೆದುಕೊಳ್ಳುತ್ತಾರೆ.ಇನ್ಸುಲಿನ್ ರಕ್ತದಿಂದ ಜೀವಕೋಶಗಳಿಗೆ ಗ್ಲೂಕೋಸ್ ಅನ್ನು ಸಾಗಿಸಲು ಮೇದೋಜ್ಜೀರಕ ಗ್ರಂಥಿಯಿಂದ ಬಿಡುಗಡೆ ಮಾಡಲಾದ ಪ್ರಬಲವಾದ ಹಾರ್ಮೋನ್ ಆಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಾಮಾನ್ಯ ಸ್ಥಿತಿಯಲ್ಲಿಡುತ್ತದೆ.