ಪುಣೆಯಲ್ಲಿ ರೈಲಿನಿಂದ ಇಳಿಯುವಾಗ ಆಯತಪ್ಪಿ ಬಿದ್ದು ಗದಗ ಯೋಧ ಸಾವು

gadag yodha jan 06 2020
Published on

ಗದಗ: ರಜೆ ಮುಗಿಸಿ ಸೇವೆಗೆ ಮರಳಿದ್ದ ಜಿಲ್ಲೆಯ ಯೋಧ ರೈಲು ಇಳಿಯುವಾಗ ಕಾಲು ಜಾರಿ ಮೃತಪಟ್ಟಿರುವ ಘಟನೆ ಪುಣೆ ರೈಲು ನಿಲ್ದಾಣದಲ್ಲಿ ನಡೆದಿದೆ.

ಗದಗ ಜಿಲ್ಲೆಯ ಮುಳಗುಂದ ಪಟ್ಟಣದ ಶಂಕರಯ್ಯ ಹಿರೇಮಠ (34) ಮೃತಪಟ್ಟ ಯೋಧ.

ಶಕರಯ್ಯ 15 ದಿನಗಳ ಕಾಲ ರಜೆ ಹಾಕಿ ಮುಳಗುಂದಕ್ಕೆ ಬಂದಿದ್ದರು. ರಜೆ ಮುಗಿಸಿ ಪುಣೆಗೆ ರೈಲಿನಲ್ಲಿ ತೆರಳಿದ್ದರು. ನಿಲ್ದಾಣದಲ್ಲಿ ರೈಲಿನಲ್ಲಿ ಇಳಿಯುವಾಗ ಆಯತಪ್ಪಿ ಕೆಳಕ್ಕೆ ಬಿದ್ದು ಮೃತಪಟ್ಟರು ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಪತ್ನಿ ಸಾವಿತ್ರಿ, ಪುತ್ರ ಚೇತನ ಹಾಗೂ ತಂದೆ ತಾಯಿಯನ್ನು ಅಗಲಿದ್ದಾರೆ. ಶಂಕರಯ್ಯ ಅವರು 14 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಇನ್ನು ಕೇವಲ 9 ತಿಂಗಳು ಮಾತ್ರ ಸೇವಾ ಅವಧಿ ಇತ್ತು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net