ಮುಂಬೈನ ಬೀದಿಗಳಲ್ಲಿ ಭಿಕ್ಷುಕನಂತೆ ಅಲೆದಾಟ; 1,800 ಕೋಟಿ ರೂ. ಒಡೆಯ, ಬಾಲಿವುಡ್​ ಸೂಪರ್​ ಸ್ಟಾರ್​ಗೆ ಇದೆಂಥಾ ಪರಿಸ್ಥಿತಿ!​ | Bollywood

dk (39) (1)
Published on

ಮುಂಬೈ: ಬಾಲಿವುಡ್​(Bollywood) ಸ್ಟಾರ್​ಗಳ ಪೈಕಿ ಶಾರುಖ್​ಖಾನ್​, ಸಲ್ಮಾನ್​ ಖಾನ್, ಅಕ್ಷಯ್​ ಕುಮಾರ್​, ಅಜಯ್​ದೇವಗನ್​​, ಸೈಫ್​ ಅಲಿಖಾನ್​​ ದೊಡ್ಡ ಸ್ಟಾರ್​ಗಳ ಪಟ್ಟಿ ತೆರೆದುಕೊಳ್ಳುತ್ತದೆ. ಇವರ ಸಾಮಕಾಲೀನ ನಟರೊಬ್ಬರು ಇದೀಗ ಮುಂಬೈನ ಬೀದಿಗಳಲ್ಲಿ ಭಿಕ್ಷುಕರಂತೆ ಅಲೆದಾಡುತ್ತಿರುವ ವಿಡಿಯೋ ಮತ್ತು ಒಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಕಲ್ಲಿ ಸಖತ್​ ವೈರಲ್​ ಆಗಿವೆ.

ವೈರಲ್​​ ವಿಡಿಯೋದಲ್ಲಿ ಪ್ರಾಚೀನ ಕಾಲದ ಮನುಷ್ಯನಂತೆ ಉದ್ದನೆಯ ಕೂದಲು, ಗಡ್ಡ ಮತ್ತು ಗೋಣಿಚೀಲಕ್ಕೆ ಹೊಲುವ ಬಟ್ಟೆಗಳನ್ನು ಧರಿಸಿ ಬೀದಿಗಳಲ್ಲಿ ಅಲೆದಾಡುತ್ತಿದ್ದಾನೆ. ಅಲ್ಲದೆ, ಇತನನ್ನೂ ತಕ್ಷಣ ನೋಡಿದರೆ ಯಾರು ಮುಂದೆ ಬರುವುದಿಲ್ಲ ಎಂದೇ ಹೇಳಬಹುದು. ಅಷ್ಟೊಂದು ವಿಕೃತಿ ಕಾಣುತ್ತಿದ್ದಾನೆ. ಆದರೆ, ಇತ ಬೇರೆ ಯಾರು ಅಲ್ಲ, ಬಾಲಿವುಡ್​ ಸೂಪರ್​ಸ್ಟಾರ್​ ಅಮೀರ್​ ಖಾನ್​​ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:ಮಹಾಕುಂಭ ಮೇಳದಿಂದ ವಾಪಸ್​ ಆಗುವಾಗ Heart Attack; ಬೆಳಗಾವಿ ಮೂಲದ ವ್ಯಕ್ತಿ ಸಾವು ಹೌದು, ಮುಂದಿನ ಸಿನಿಮಾಕ್ಕಾಗಿ ಅಮೀರ್​ ಇಂತಹ ಸಾಹಸಕ್ಕೆ ಕೈ ಹಾಕಿದ್ದಾರೆ ಎನ್ನಲಾಗಿದೆ. ಈ ವಿಶೇಷ ಪಾತ್ರಕ್ಕಾಗಿ ಹೊಸ ಲುಕ್​ನಲ್ಲಿ ಕಾಣಿಸುವ ಉದ್ದೇಶದಿಂದ ಯಾರಿಗೂ ತಿಳಿಯದಂತೆ ಶೂಟ್​ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ಸಾಮಾಜಿಕ ವೇದಿಕೆಯಲ್ಲಿ ತಮ್ಮ ಹೊಸ ಲುಕ್​ ಅನ್ನು ರೀವಿಲ್​ ಮಾಡಿದ್ದಾರೆ.

1800 ಕೋಟಿ ರೂ. ಒಡೆಯ

ವರದಿಗಳ ಪ್ರಕಾರ, ನಟ ಅಮೀರ್​ ಖಾನ್​ 1,862 ಕೋಟಿ ರೂ. ನಿವ್ವಳ ಆಸ್ತಿ ಹೊಂದಿದ್ದಾರೆ. ತಮ್ಮ ಪ್ರೋಡಕ್ಷನ್​ ಹೌಸ್​ನಲ್ಲಿ ಸಿನಿಮಾಗಳು ತಯಾರುತ್ತಿವೆ. ಹೀಗಾಗಿ, 1800 ಕೋಟಿ ರೂ. ಎಂದು ಅಂದಾಜಿಸಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net