

ಸಿಂಧನೂರು: ವಕ್ಫ್ ಹೆಸರಲ್ಲಿ ಆಸ್ತಿ ಕಬಳಿಕೆಗೆ ಅವಕಾಶ ನೀಡದಿರಲು ಒತ್ತಾಯಿಸಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದಿಂದ ತಹಸೀಲ್ದಾರ್ ಅರುಣ್ ದೇಸಾಯಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ವಕ್ಫ್ ಹೆಸರಿನಲ್ಲಿ ರೈತರ ಜಮೀನು, ಮಠ, ಮಂದಿರಗಳ ಆಸ್ತಿ ಮತ್ತು ಸರ್ಕಾರದ ಆಸ್ತಿಯನ್ನು ಕಬಳಿಸಲಾಗಿದೆ. ವಕ್ಫ್ ಬೋರ್ಡ್ ವಿಚಾರವಾಗಿ ಉಂಟಾಗಿರುವ ಗೊಂದಲ ಸರಿಪಡಿಸಬೇಕು. ನಮ್ಮ ಆಸ್ತಿ ನಮ್ಮ ಹಕ್ಕಾಗಿದ್ದು, ಯಾರೇ ಕಣ್ಣು ಹಾಕಿದರೂ ಸುಮ್ಮನೆ ಕೂರುವುದಿಲ್ಲ. ಯಾರಿಗೂ ಅನ್ಯಾಯವಾಗದಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ತಾಲೂಕ ಬಜರಂಗ ದಳ ಸಂಚಾಲಕ ಮನೋಹರ ಹಿರೇಮಠ, ವೆಂಕಟಗಿರಿಕ್ಯಾಂಪ್ ಸಿದ್ದಾಶ್ರಮದ ಸದಾನಂದ ಶರಣರು, ಈರೇಶ ಇಲ್ಲೂರು, ಬಜರಂಗದಳ ಜಿಲ್ಲಾ ಸಂಚಾಲಕ ಬಸವರಾಜ ಸಾಲಗುಂದಾ, ವಿಶ್ವ ಹಿಂದು ಪರಿಷತ್ ತಾಲೂಕ ಕಾರ್ಯದರ್ಶಿ ನಾಗೇಶ ಪವಾರ, ಶಿವಕುಮಾರ ಎಸ್.ಆರ್.ಕೆ., ಬಿಜೆಪಿ ನಗರ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಜೀನೂರು, ಮುಖಂಡರಾದ ಶಶಿಧರ ಹಿರೇಮಠ, ಪ್ರಹ್ಲಾದ್ ಕೆಂಗಲ್, ಸಿದ್ದಲಿಂಗಯ್ಯಸ್ವಾಮಿ ವಕೀಲ, ರವಿ ಹಿರೇಮಠ, ಅವಿನಾಶಗೌಡ, ಮಹಾದೇವ ನಾಯಕ, ಯಲ್ಲುಸಾ ಬದಿ ಇತರರು ಇದ್ದರು.