'ಚೆಹ್ರೆ' ತೋರಲಿದೆಯೇ ಬಿಗ್​ ಬಿ ಹೊಸ ಮುಖ ?!

BigB
Published on

ಮುಂಬೈ: "ಕೆಲವು ಮುಖಗಳು, ಸಾವಿರಾರು ರಹಸ್ಯಗಳು" ಎನ್ನುತ್ತಾ ತಮ್ಮ ಹೊಸ ಚಿತ್ರ 'ಚೆಹ್ರೆ'ಯ ಪೋಸ್ಟರ್​ಅನ್ನು, ಅಮಿತಾಭ್ ಬಚ್ಚನ್, ತಮ್ಮ ಇನ್ಸ್​​ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಚಿತ್ರದ ಟೀಸರ್ ಮಾರ್ಚ್ 11 ರಂದು ಹೊರಬೀಳಲಿದ್ದು, ಏಪ್ರಿಲ್ 30 ಕ್ಕೆ ಸಾರ್ವಜನಿಕ ವೀಕ್ಷಣೆಗೆ ಚಿತ್ರ ಬಿಡುಗಡೆಯಾಗಲಿದೆ ಎಂದು ಬಿಗ್​ ಬಿ ತಿಳಿಸಿದ್ದಾರೆ.

ಮುಖಗಳು ಎಂಬ ಅರ್ಥ ಕೊಡುವ 'ಚೆಹ್ರೆ' ಶೀರ್ಷಿಕೆಯ ಹೊಸ ಪೋಸ್ಟರ್‌ನಲ್ಲಿ ಬಚ್ಚನ್​ರೊಂದಿಗೆ ಸಹನಟರಾದ ಎಮ್ರಾನ್ ಹಶ್ಮಿ, ಕ್ರಿಸ್ಟಲ್ ಡಿಸೋಜ, ಮತ್ತು ಅನ್ನೂ ಕಪೂರ್ ಇದ್ದಾರೆ. ಇದನ್ನು ಶೇರ್​ ಮಾಡಿರುವ ಬಚ್ಚನ್, "ಚಂದ್ ಚೆಹ್ರೆ, ಹಜಾರೋ ರಾಜ್. ಹರ್ ಚೆಹ್ರಾ ಕುಚ್ ಕೆಹ್ತಾ ಹೇ ಔರ್ ಬಹುತ್ ಕುಚ್ ಚುಪಾತಾ ಹೇ. ಮುಖಗಳ ಹಿಂದಿನ ನಿಜವಾದ ಮುಖಗಳನ್ನು (ಚೆಹ್ರೆ) ಚಿತ್ರಮಂದಿರಗಳಲ್ಲಿ 2021 ರ ಏಪ್ರಿಲ್ 30 ರಂದು ಅನಾವರಣಗೊಳಿಸಿ" ಎಂದು ಆಕರ್ಷಕ ಟಿಪ್ಪಣಿ ಬರೆದಿದ್ದಾರೆ.

ರೂಮಿ ಜಾಫ್ರಿ ನಿರ್ದೇಶಿಸಿರುವ ಬಹುನಿರೀಕ್ಷಿತ ಮಿಸ್ಟರಿ ಥ್ರಿಲ್ಲರ್, 'ಚೆಹ್ರೆ' ಚಿತ್ರದಲ್ಲಿ ರಘುಬೀರ್ ಯಾದವ್, ಸಿದ್ಧಾಂತ್ ಕಪೂರ್ ಕೂಡ ನಟಿಸಿದ್ದಾರೆ. ಈ ಮುನ್ನ ರಿಯಾ ಚಕ್ರಬೋರ್ತಿ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ ಎಂದು ಕೇಳಿಬರುತ್ತಿತ್ತು. ಆದರೆ ಈವರೆಗೆ ಬಂದಿರುವ ಪೋಸ್ಟರ್​ಗಳಲ್ಲಿ ಅವರ ಮುಖ ಅಥವಾ ಹೆಸರು ಕಂಡುಬಂದಿಲ್ಲ. ಹೀಗಾಗಿ 'ಚೆಹ್ರೆ'ನಲ್ಲಿ ಯಾವ ಯಾವ ಮುಖಗಳನ್ನು ನೋಡಬಹುದು ಎಂಬುದನ್ನೂ ಕಾದು ನೋಡಬೇಕಿದೆ.(ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net