ವಾಘ್ ಬಕ್ರಿ ಚಹಾ ಸಂಸ್ಥೆ ಮಾಲೀಕ ಪರಾಗ್ ದೇಸಾಯಿ ನಿಧನ!

Untitled design - 2023-10-23T132655.869
Published on

ಮಹಾರಾಷ್ಟ್ರ: ವಾಘ್ ಬಕ್ರಿ ಟೀ ಗ್ರೂಪ್‌ನ ಮಾಲೀಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಪರಾಗ್ ದೇಸಾಯಿ ಅವರು ಕಳೆದ ವಾರ ಬೀದಿ ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳುವಾಗ ಎಡವಿ ಬಿದ್ದಿದ್ದರು. ತೀವ್ರ ಮೆದುಳಿನ ರಕ್ತಸ್ರಾವದಿಂದ ಕೆಲವು ದಿನಗಳ ಕಾಲ ವೆಂಟಿಲೇಟರ್‌ನಲ್ಲಿದ್ದ ಅವರು ಭಾನುವಾರ (ಅ.22) ಸಂಜೆ ಮೃತಪಟ್ಟಿದ್ದಾರೆ.

ಕಳೆದ ವಾರ ಸಂಜೆ ವೇಳೆ ನಡೆದುಕೊಂಡು ಹೋಗುವಾಗ ಬೀದಿನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದರು. ಆಯಾ ತಪ್ಪಿ ಎಡವಿ ಬಿದ್ದ ಪರಿಣಾಮ ದೇಸಾಯಿ ಅವರ ತಲೆಗೆ ಗಂಭೀರವಾಗಿ ಪೆಟ್ಟಾಗಿತ್ತು. ತೀವ್ರ ಮೆದುಳು ರಕ್ತಸ್ರಾವಕ್ಕೆ ಒಳಗಾದ ಪರಿಣಾಮ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಒಂದು ವಾರದಿಂದ ವೆಂಟಿಲೇಟರ್​ನಲ್ಲಿ ಇರಿಸಲಾಗಿತ್ತು.

ಭಾನುವಾರ ಸಂಜೆ ಚಿಕಿತ್ಸೆ ಫಲಿಸದೆ ತಮ್ಮ 49ನೇ ವಯಸ್ಸಿಗೆ ಪರಾಗ್​ ದೇಸಾಯಿ ಮೃತಪಟ್ಟಿದ್ದಾರೆ. ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ವಾಘ್ ಬಕ್ರಿ ಟೀ ಗ್ರೂಪ್ ಅನ್ನು 1892 ರಲ್ಲಿ ನಾರಂದಾಸ್ ದೇಸಾಯಿ ಸ್ಥಾಪಿಸಿದರು. ಇಂದು ಈ ಸಂಸ್ಥೆ 2,000 ಕೋಟಿ ರೂ. ವಹಿವಾಟು ನಡೆಸುತ್ತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net