ಜಾತಿ, ಯುವಕ, ಹೊಸಮುಖ ಎಲ್ಲದರಲ್ಲೂ ವಿಎಸ್‌ಕೆ ಪಾಸ್ !

ಶಾಸಕ ವಿಜಯಾನಂದ ಕಾಶಪ್ಪನವರ
ಶಾಸಕ ವಿಜಯಾನಂದ ಕಾಶಪ್ಪನವರ
Published on
ಅಶೋಕ ಶೆಟ್ಟರ, ಬಾಗಲಕೋಟೆ:
ಇಂದಿನ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುವ ಪ್ರಬಲ ಜಾತಿ ಎನ್ನುವ ಅಸö, ರಾಹುಲ್ ಗಾಂಽ ಅವರ ಆದ್ಯತೆಯ ಯುವಕರಿಗೆ ಪ್ರಾಮುಖ್ಯತೆ, ೨೦೨೮ರ ಚುನಾವಣೆಗೆ ಎದುರಿಸಲು ಹೊಸ ಮುಖದವರಿಗೆ ಸಚಿವ ಸ್ಥಾನ ಎನ್ನುವ ಡಿಕೆಶಿ ಆಶಯ. ಜೊತೆಗೆ ಸಚಿವ ಸ್ಥಾನಕ್ಕೆ ಪಕ್ಷದ ವರಿಷ್ಠರ ಮೇಲೆ ಹಾಕುವ ಒತ್ತಡ ತಂತ್ರದಲ್ಲೂ ಯಶಸ್ವಿ.
ಈ ಎಲ್ಲ ವಿಭಾಗಗಳಲ್ಲೂ ಉತ್ತೀರ್ಣರಾಗಿದ್ದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ. ಸಿಎಂ ಡಿಕೆಶಿ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ವಿಎಸ್‌ಕೆ ಗೆ ಪೂರಕವಾದ ಅಂಶಗಳು ಇವು.
ಹೌದು, ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ನೀಡಿದ್ದ ಹುನಗುಂದ ವಿಧಾನಸಭೆ ಕ್ಷೇತ್ರಕ್ಕೆ ಕಳೆದ ಎರಡುವರೆ ದಶಕದಿಂದ ಮರೀಚಿಕೆ ಆಗಿಯೇ ಉಳಿದಿದ್ದ ಸಚಿವ ಸ್ಥಾನವನ್ನು ಜಿಲ್ಲೆಯ ಸಚಿವ ಸ್ಥಾನದ ಶಕ್ತಿ ಕೇಂದ್ರವಾಗಿದ್ದ ಮುಧೋಳವನ್ನು ಹಿಂದಿಕ್ಕಿ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅಪ್ಪನ ಬಳಿಕ ಮಂತ್ರಿಯಾದ ಪುತ್ರ:
ಬಾಗಲಕೋಟೆ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಕುಟುಂಬ ರಾಜಕಾರಣ ಹೊಸದೇನು ಅಲ್ಲ. ವಿಧಾನಸಭಾ ಕ್ಷೇತ್ರಗಳ ಪೈಕಿ ಹುನಗುಂದದಲ್ಲಿ ಕಾಶಪ್ಪನವರ, ಗುಳೇದಗುಡ್ಡದಲ್ಲಿ ನಂಜಯ್ಯನಮಠ, ಬಾದಾಮಿಯಲ್ಲಿ ಚಿಮ್ಮನಕಟ್ಟಿ, ಪಟ್ಟಣಶೆಟ್ಟಿ, ಬಾಗಲಕೋಟೆಯಲ್ಲಿ ಮೇಟಿ, ಜಮಖಂಡಿಯಲ್ಲಿ ನ್ಯಾಮಗೌಡ ಹಾಗೂ ಪರಿಷತ್‌ನಲ್ಲಿ ನಾಡಗೌಡ ಕುಟುಂಬಗಳು ತಂದೆ ಬಳಿಕ ಪುತ್ರರು ವಿಧಾನಸೌಧ ಮತ್ತು ವಿಧಾನ ಪರಿಷತ್ ಪ್ರತಿನಿಽಸಿದ್ದರು. ಆದರೆ, ತಂದೆಯ ಬಳಿಕ ಸಚಿವ ಸ್ಥಾನ ಪಡೆದ ಹೆಗ್ಗಳಿಕೆಗೂ ವಿಜಯಾನಂದ ಕಾಶಪ್ಪನವರ ಪಾತ್ರರಾಗಿ ಹೊಸ ದಾಖಲೆ ಬರೆದಿದ್ದಾರೆ.
ಅಪ್ಪ ೩ನೇ ಸಲಕ್ಕೆ ಮಂತ್ರಿ ; ಮಗ ಎರಡನೇ ಸಲಕ್ಕೆ ಸಚಿವ:
ಹುನಗುಂದ ಕ್ಷೇತ್ರದಲ್ಲಿ ದಿ. ಎಸ್.ಆರ್.ಕಾಶಪ್ಪನವರ ೧೯೮೫ರಲ್ಲಿ ಮೊದಲ ಸಲ ವಿಧಾನಸಭೆ ಸ್ಪಽðಸಿ ಸೋಲು ಕಂಡಿದ್ದರು. ಬಳಿಕ ೧೯೮೯, ೧೯೯೪ ಹಾಗೂ ೧೯೯೯ ಸತತ ಮೂರು ಸಲ ಗೆದ್ದು ಹ್ಯಾಟ್ರಿಕ್ ಗೆಲುವು ಸಾಽಸಿದ್ದರು. ೩ನೇ ಸಲ ಶಾಸಕರಾಗಿದ್ದ ವೇಳೆ ೧೯೯೯ರಲ್ಲಿ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಸಣ್ಣ ಕೈಗಾರಿಕೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ, ೨ ವರ್ಷ ಸಚಿವರಾಗಿದ್ದರು. ಬಳಿಕ ಅ-Àಘಾತದಲ್ಲಿ ನಿಧನರಾದ ಬಳಿಕ ಎದುರಾದ ಉಪ ಚುನಾವಣೆಯಲ್ಲಿ ಗೌರಮ್ಮ ಅವರು ಶಾಸಕಿಯಾಗಿ ವಿಧಾನಸಭೆ ಪ್ರವೇಶಿಸಿದ್ದರು. ಮುಂದೆ ೨೦೦೮ರಲ್ಲಿ ವಿಧಾನಸಭೆ ಚುನಾವಣೆಗೆ ಹುನಗುಂದ ಕ್ಷೇತ್ರದಿಂದ ವಿಜಯಾನಂದ ಮೊದಲ ಸಲ ಸ್ಪರ್ಧೆ ಮಾಡಿದಾಗ ಅವರ ತಂದೆಯAತೆ ಸೋಲಿನ ರುಚಿ ಕಂಡಿದ್ದರು. ೨೦೧೩ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ ಆಗಿದ್ದ ಅವರು, ೨೦೧೮ರಲ್ಲಿ ಮತ್ತೆ ಸೋಲು ಕಂಡು, ೨೦೨೩ರಲ್ಲಿ ೨ನೇ ಸಲ ವಿಧಾನಸಭೆ ಪ್ರವೇಶಿಸಿದ್ದರು. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಲು ಸಾಕಷ್ಟು ಪ್ರಯತ್ನ ನಡೆಸಿದ್ದರೂ ಆಸೆ ಕೈಗೂಡಿದೇ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮೂರು ವರ್ಷ ಇದ್ದರು. ಇದೀಗ ಡಿ.ಕೆ.ಶಿವಕುಮಾರ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಪಡೆದಿದ್ದಾರೆ. ಅಪ್ಪ ಎಸ್.ಆರ್.ಕೆ. ಅವರು ೩ನೇ ಸಲ ಶಾಸಕರಾಗಿದ್ದಾಗ ಸಚಿವರಾಗಿದ್ದರೆ ಅವರ ಪುತ್ರ ವಿಜಯಾನಂದ ಅವರು ೨ನೇ ಸಲ ಶಾಸಕರಾಗಿ ಸಚಿವರಾಗಿದ್ದಾರೆ.

ಹುನಗುಂದ ಪ್ರತಿನಿಽಸಿದ ೫ನೇ ಸಚಿವ:

ಇನ್ನು ಬಾಗಲಕೋಟೆ ಜಿಲ್ಲೆ ಹುನಗುಂದ ಕ್ಷೇತ್ರದಿಂದ ಆಯ್ಕೆಯಾದ ಶಾಸಕರ ಪೈಕಿ ವಿಜಯಾನಂದ ಕಾಶಪ್ಪನವರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ೫ನೇ ವ್ಯಕ್ತಿ ಎನ್ನುವ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಈ ಪೈಕಿ ನಾಲ್ವರು ವಿಧಾನಸಭೆ ಹಾಗೂ ಓರ್ವರು ವಿಧಾನ ಪರಿಷತ್ ಪ್ರತಿನಿಽಸಿದ್ದಾರೆ.
ಹುನಗುಂದ ಕ್ಷೇತ್ರ ಪ್ರತಿನಿಽಸಿದ್ದ ಎಸ್.ಆರ್.ಕಂಠಿ ಅವರು ಸಚಿವರಾಗಿದಲ್ಲದೇ ಅಲ್ಪಕಾಲ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದರು. ವಿಧಾನ ಪರಿಷತ್ ಸದಸ್ಯರಾಗಿದ್ದ ಹುನಗುಂದ ತಾಲೂಕಿನ ಪಿ.ಎಂ.ನಾಡಗೌಡ ಹಾಗೂ ಶಾಸಕರಾಗಿದ್ದ ಎಸ್.ಬಿ.ನಾಗರಾಳ ಮತ್ತು ಎಸ್.ಆರ್.ಕಾಶಪ್ಪನವರ ಸಹ ಮಂತ್ರಿ ಆಗಿದ್ದು, ಈಗ ವಿಜಯಾನಂದ ಕಾಶಪ್ಪನವರ ಸಚಿವರಾಗಿದ್ದಾರೆ. ಹಾಗೆಯೇ ಸಚಿವ ಶಿವರಾಜ ತಂಗಡಗಿ ಸಹ ಮೂಲತಃ ಹುನಗುಂದ ತಾಲೂಕಿನವರಾಗಿದ್ದು, ಹುನಗುಂದ ಕ್ಷೇತ್ರದಿಂದ ಶಾಸಕರಾಗಿಲ್ಲ.

ಮುಧೋಳ ಕ್ಷೇತ್ರಕ್ಕೆ ಕೈತಪ್ಪಿದ ಸಚಿವ ಸ್ಥಾನ:

ಜಿಲ್ಲೆಯಲ್ಲಿ ಇತ್ತೀಚಿನ ಎರಡು ದಶಕಗಳಿಂದ ರಾಜ್ಯದಲ್ಲಿ ಯಾವುದೇ ಸರ್ಕಾರ ಇದ್ದರೂ ಮುಧೋಳ ಮೀಸಲು ಕ್ಷೇತ್ರಕ್ಕೆ ಸಚಿವ ಸ್ಥಾನ ಫಿಕ್ಸ್ ಎನ್ನುವ ವಾತಾವರಣ ಇತ್ತು. ಆದರೆ, ಇದೀಗ ಆ ಹೆಗ್ಗಳಿಕೆಯಿಂದ ಹೊರಬಂದಿದೆ. ೧೯೯೯ರ ಎಸ್.ಎಂ.ಕೃಷ್ಣಾ ಸರ್ಕಾರದಲ್ಲಿ ಆರ್.ಬಿ.ತಿಮ್ಮಾಪುರ ಸಚಿವರಾಗಿದ್ದರು. ೨೦೦೪ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಽಯಲ್ಲಿ ಮುಧೋಳದಲ್ಲಿ ಬಿಜೆಪಿ ಶಾಸಕರು ಇದ್ದಿದ್ದರಿಂದ ಸಚಿವ ಸ್ಥಾನ ಸಿಕ್ಕಿರಲಿಲ್ಲ.
೨೦೦೬ರ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಹಾಗೂ ೨೦೦೮ ರಿಂದ ೨೦೧೩ರ ವರೆಗಿನ ಬಿಜೆಪಿ ಸರ್ಕಾರದಲ್ಲಿ ಮುಧೋಳ ಕ್ಷೇತ್ರದ ಬಿಜೆಪಿ ಶಾಸಕ ಗೋವಿಂದ ಕಾರಜೋಳ ಸಚಿವರಾಗಿದ್ದರು. ೨೦೧೩ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಮುಧೋಳ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಇದ್ದಿದ್ದರಿಂದ ಸಚಿವ ಸ್ಥಾನ ಸಿಕ್ಕಿರಲಿಲ್ಲ. ೨೦೧೭ರಲ್ಲಿ ಆರ್.ಬಿ.ತಿಮ್ಮಾಪುರ ಪರಿಷತ್‌ಗೆ ನೇಮಕವಾದ ಬಳಿಕ ಅವರನ್ನು ಸಚಿವರನ್ನಾಗಿ ಮಾಡಲಾಗಿತ್ತು. ೨೦೧೮ರ ಜೆಡಿಎಸ್-ಕಾಂಗ್ರೆಸ್ ಸರ್ಕಾರದಲ್ಲೂ ತಿಮ್ಮಾಪುರ ಅವರು ಸಚಿವರಾಗಿ ಮುಂದುವರೆದಿದ್ದರು. ೨೦೧೯ರಲ್ಲಿ ಬಿಜೆಪಿ ಸರ್ಕಾರ ಅಽಕಾರಕ್ಕೆ ಬಂದಾಗ ಮತ್ತೆ ಗೋವಿಂದ ಕಾರಜೋಳ ಸಚಿವರಾಗಿದ್ದರು. ೨೦೨೩ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ತಿಮ್ಮಾಪುರ ಅವರು ಮತ್ತೆ ಸಚಿವರಾಗಿದ್ದರು. ಈಗ ಡಿ.ಕೆ.ಶಿವಕುಮಾರ ಸರ್ಕಾರದಲ್ಲಿ ಸಚಿವ ಸ್ಥಾನ ಉಳಿಸಿಕೊಳ್ಳುವಲ್ಲಿ ತಿಮ್ಮಾಪುರ ವಿ-Àಲರಾಗಿದ್ದು, ಆಡಳಿತ ಪಕ್ಷದ ಶಾಸಕರಿದ್ದು, ಸಚಿವ ಸ್ಥಾನ ಕೈತಪ್ಪಿದೆ. ಈಗ ಸಚಿವ ಸ್ಥಾನ ಮುಧೋಳದಿಂದ ಹುನಗುಂದ ಕ್ಷೇತ್ರಕ್ಕೆ ಶಿಪ್ಟ್ ಆಗಿದೆ.

ಡಬಲ್ ದಮಾಕ ; ಉಮಾಶ್ರಿ ಉಪ ಸಭಾಪತಿ :

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸರ್ಕಾರದಲ್ಲಿ ಬಾಗಲಕೋಟೆಗೆ ಡಬಲ್ ದಮಾಕ ಎಂದರೂ ತಪ್ಪಿಲ್ಲ. ಹುನಗುಂದ ಕ್ಷೇತ್ರದ ವಿಜಯಾನಂದ ಕಾಶಪ್ಪನವರ ಸಚಿವರಾಗಿ ಪ್ರಮಾಣ ಸ್ವಿಕರಿಸಿದ್ದಾರೆ. ಹಾಗೆಯೇ ಜಿಲ್ಲೆಯ ತೇರದಾಳ ಕ್ಷೇತ್ರ ಪ್ರತಿನಿಽಸಿ ೨೦೧೩ ರಿಂದ ೨೦೧೮ ರ ಅವಽಯಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವೆಯಾಗಿದ್ದು ಉಮಾಶ್ರೀ ಅವರು. ಸದ್ಯ ಅವರು ವಿಧಾನ ಪರಿಷತ್ ಸದಸ್ಯೆಯಾಗಿದ್ದಾರೆ. ಈಗ ಅವರನ್ನು ಪರಿಷತ್‌ನ ಉಪ ಸಭಾಪತಿ ಸ್ಥಾನಕ್ಕೆ ಆಯ್ಕೆ ಆಗಿದ್ದಾರೆ. ೨೦೦೮ರಲ್ಲಿ ತೇರದಾಳ ಕ್ಷೇತ್ರದಿಂದ ಸ್ಪಽðಸಿ ಸೋಲು ಕಂಡಿದ್ದ ಅವರು, ೨೦೧೩ರಲ್ಲಿ ಗೆದ್ದು ಐದು ವರ್ಷ ಸಚಿವೆಯಾಗಿದ್ದರು. ೨೦೧೮ರಲ್ಲಿ ಸೋಲು ಕಂಡಿದ್ದ ಅವರಿಗೆ ೨೦೨೩ರ ಚುನಾವಣೆಯಲ್ಲಿ ಟಿಕೆಟ್ ಸಿಕ್ಕಿರಲಿಲ್ಲ. ಇತ್ತೀಚಿಗೆ ವಿಧಾನಸಭೆಗೆ ಆಯ್ಕೆ ಆಗಿದ್ದ ಅವರು ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿದ್ದರು. ಆದರೆ, ಮಂತ್ರಿ ಸ್ಥಾನದ ಬದಲಿಗೆ ಅವರನ್ನು ಪರಿಷತ್‌ಗೆ ಉಪ ಸಭಾಪತಿಯಾಗಿ ಆಯ್ಕೆ ಮಾಡಲಾಗಿದೆ.
=====================
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net