

ರಾಣೆಬೆನ್ನೂರ: ಜಿಲ್ಲಾಡಳಿತ, ಜಿಪಂ, ಇಲ್ಲಿಯ ನಗರಸಭೆ ವತಿಯಿಂದ ಶುಕ್ರವಾರ ನಗರಸಭೆ ವ್ಯಾಪ್ತಿಯಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮತದಾನ ಜಾಗೃತಿ ಜಾಥಾ ನಡೆಯಿತು.
ಕಂದಾಯ ನಿರೀಕ್ಷಕ ಪಿ. ವಸಂತ, ಪ್ರಮುಖರಾದ ಎಂ.ಎಸ್. ಗುಡಿಸಲಮನಿ, ಪ್ರಭುದೇವ ಬಾಲೆಹೊಸೂರು, ಮಾಧವ ಸಾತೇನಹಳ್ಳಿ, ಮಾರುತಿ ಪಾಟೀಲ, ಅಬ್ದುಲ್ ಗಫಾರ್, ಏಳುಕೋಟೆಪ್ಪ ಗೋಣಿಬಸಮ್ಮನವರ, ಹರೀಶ ಉದಗಟ್ಟಿ, ಗಣೇಶ ಪಾಸೀಗಾರ, ಆರೋಗ್ಯ ನಿರೀಕ್ಷಕಿ ಶೃತಿ, ಮಧು ಕಂಬಳಿ, ರಾಘವೇಂದ್ರ ಗಾವಡೆ ಮತ್ತಿತರರು ಉಪಸ್ಥಿತರಿದ್ದರು.