ವೋಟರ್ ಐಡಿ ಪ್ರಕರಣ ಬೆನ್ನಲ್ಲೇ ಕಾಂಗ್ರೆಸ್​ ವಿರುದ್ಧ ವೋಟರ್ ಗೇಟ್ ಆರೋಪ; ಎಲ್ಲಿ, ಏನಾಯ್ತು?

JDS Congress
Published on

ರಾಮನಗರ: ವೋಟರ್ ಐಡಿ ಪ್ರಕರಣ ಬೆನ್ನಲ್ಲೇ ಕಾಂಗ್ರೆಸ್​ ವಿರುದ್ಧ ವೋಟರ್​ ಗೇಟ್​ ಆರೋಪ ಕೇಳಿಬಂದಿದ್ದು, ಮುಜುಗರಕ್ಕೀಡಾಗುವಂಥ ಪರಿಸ್ಥಿತಿ ಎದುರಾಗಿದೆ. ಏಕೆಂದರೆ ಕೆಪಿಸಿಸಿ ಅಧ್ಯಕ್ಷರ ವಿರುದ್ಧವೇ ಇಂಥದ್ದೊಂದು ಆರೋಪ ಕೇಳಿಬಂದಿದೆ.

ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿರುವ ಕನಕೋತ್ಸವದಲ್ಲಿ ಅನಿವಾಸಿ ಕನಕಪುರ ಕ್ಷೇತ್ರದ ಮತದಾರರಿಗೆ ಸನ್ಮಾನ ಮಾಡಲು ಉದ್ದೇಶಿಸಲಾಗಿದ್ದು, ಅದಕ್ಕಾಗಿ ಕಾಂಗ್ರೆಸ್​ ಮಾಹಿತಿ ಕಲೆ ಹಾಕುತ್ತಿರುವುದು ಬಹಿರಂಗಗೊಂಡಿದೆ.

ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅನಿವಾಸಿ ಕನಕಪುರ ಕ್ಷೇತ್ರದ ಮತದಾರರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮತದಾರರ ವೋಟರ್ ಐಡಿ, ಆಧಾರ್ ಸಂಖ್ಯೆ, ಮೊಬೈಲ್​ಫೋನ್​ ನಂಬರ್, ಜಾತಿ, ಉದ್ಯೋಗಗಳ ವಿವರಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಲೆ ಹಾಕುತ್ತಿದ್ದಾರೆಂದು ಆರೋಪ ಕೇಳಿಬಂದಿದೆ.

ಖಾಸಗಿ ಮಾಹಿತಿಗಳನ್ನು ಕಲೆಹಾಕುವುದಾಗಲಿ, ಅದನ್ನು ನಿಮ್ಮ ಚುನಾವಣೆ ಅಥವಾ ನಿಮ್ಮ ಪ್ರಾಯೋಜಿತ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುವುದು ನಾಚಿಕೆಗೇಡು ಹಾಗೂ ಅಪರಾಧವೆಂದು ಜೆಡಿಎಸ್ ಮುಖಂಡರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಮಾತ್ರವಲ್ಲ, ವೋಟರ್ ಗೇಟ್ ಪ್ರಕರಣದಲ್ಲಿ ಬೊಬ್ಬೆ ಹೊಡಿಯುತ್ತೀರಿ, ಆದರೆ ನೀವು ಖಾಸಗಿ ಮಾಹಿತಿ ಸಂಗ್ರಹ ಮಾಡುತ್ತಿರುವುದು ಅಪರಾಧವಲ್ಲವೇ? ಈ ಅಧಿಕಾರವನ್ನು ನಿಮಗೆ ನಿಮ್ಮ ಕಾರ್ಯಕರ್ತರಿಗೆ ಕೊಟ್ಟಿದ್ದು ಯಾರು? ಎಂದೂ ಅವರು ಪ್ರಶ್ನೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net