ಮತದಾರ ಅಧಿಕಾರ ಯಾತ್ರೆ: ರಾಹುಲ್ ಗಾಂಧಿಗೆ ಜೊತೆಯಾದ ಸಿಎಂ ರೇವಂತ್ ರೆಡ್ಡಿ, ಪ್ರಿಯಾಂಕಾ ಗಾಂಧಿ | Voter Adhikar Yatra

Rahul Gandhi-Priyanaka Gandhi
Published on

Voter Adhikar Yatra: ಬಿಹಾರದಲ್ಲಿ ಚುನಾವಣಾ ಆಯೋಗದ ಮತಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಮತದಾರರ ಅಧಿಕಾರ ಯಾತ್ರೆಗೆ ಸುಪೌಲ್​ನಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಇಂದು ಮಂಗಳವಾರ(ಆಗಸ್ಟ್ 26) ಸೇರಿಕೊಂಡರು.

ಈ ಯಾತ್ರೆಯು ಇಂಡಿಯಾ ಮೈತ್ರಿಕೂಟದ ರಾಜ್ಯವ್ಯಾಪಿ ಅಭಿಯಾನದ ಭಾಗವಾಗಿದೆ. ಮತದಾರರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು, ಚುನಾವಣೆಗಳಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ವಿರುದ್ಧ ಹೋರಾಟವಾಗಿದೆ. ಇಂದು ಸುಪೌಲ್​ನಲ್ಲಿ ತೆರಳುತ್ತಿರುವ ಯಾತ್ರೆಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ರೇವಂತ್ ರೆಡ್ಡಿ, ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿ ಅನೇಕ ನಾಯಕರು ಭಾಗವಹಿಸಿದ್ದರು.

ಆಗಸ್ಟ್ 17ರಂದು ಸಾಸಾರಾಮ್‌ನಿಂದ ಆರಂಭವಾಗಿರುವ ಈ ಯಾತ್ರೆ 1,300 ಕಿಮೀಗಿಂತಲೂ ಹೆಚ್ಚು ದೂರವನ್ನು ಸಾಗಿ ಸೆಪ್ಟೆಂಬರ್ 1ರಂದು ಪಾಟ್ನಾದಲ್ಲಿ ಭವ್ಯ ರ‍್ಯಾಲಿಯೊಂದಿಗೆ ಕೊನೆಗೊಳ್ಳಲಿದೆ. ಗಯಾಜಿ, ನವಾಡಾ, ಶೇಖ್‌ಪುರ, ಲಖೀಸರಾಯ್, ಮುಂಗೇರ್, ಕಟಿಹಾರ್ ಮತ್ತು ಪುರ್ನಿಯಾ ಜಿಲ್ಲೆಗಳನ್ನು ಈಗಾಗಲೇ ಒಳಗೊಂಡಿದೆ. ಇದು ಮುಂದೆ ಮಧುಬನಿ, ದರ್ಭಾಂಗ, ಸೀತಾಮರ್ಹಿ, ಪಶ್ಚಿಮ ಚಂಪಾರಣ, ಸಾರಣ, ಭೋಜ್‌ಪುರ ಮತ್ತು ಪಾಟ್ನಾ ಜಿಲ್ಲೆಗಳ ಮೂಲಕ ಸಾಗಲಿದೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಇಂದು ಮತ್ತು ನಾಳೆ ಬಿಹಾರದಲ್ಲಿರಲಿದ್ದಾರೆ. ಸುಪೌಲ್‌ನಲ್ಲಿ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನಾಳೆ ಸೀತಾಮರ್ಹಿಯ ಜಾನಕಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net