ನೀತಿ ಸಂಹಿತೆ ಉಲ್ಲಂಘನೆ; ಒಂದೇ ದಿನ 6.13 ಕೋಟಿ ನಗದು ವಶ

Dr Cash
Published on

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲಿ ವಿವಿಧ ತಂಡಗಳು ಶುಕ್ರವಾರ ಒಂದೇ ದಿನ 6.13 ಕೋಟಿ ರೂ. ನಗದು ವಶಪಡಿಸಿಕೊಂಡಿವೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ 15,78,61,211 ರೂ. ನಗದು ವಶಕ್ಕೆ ಪಡೆಯಲಾಗಿದೆ.

ಶುಕ್ರವಾರ 6,13,70,148 ರೂ. ನಗದು, 34,27,500 ರೂ. ಮೌಲ್ಯದ ಉಚಿತ ಉಡುಗೊರೆ, 1,68,140 ರೂ. ಮೌಲ್ಯದ ಗೋಡೆ ಗಡಿಯಾರ, 52,51,715 ರೂ. ಬೆಲೆಯ ಮದ್ಯ, 12,34,230 ರೂ. ಬೆಲೆಯ ಡ್ರಗ್ಸ್, ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ ನಗದು ಸೇರಿದಂತೆ 43,62,73,267 ರೂ. ಬೆಲೆಯ ಫ್ರೀಬೀಸ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಇಒ ಕಚೇರಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net