

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಪರಂಪರಾ ಸಂಗೀತ ಪ್ರತಿಷ್ಠಾನದ ವತಿಯಿಂದ ಭಾರತರತ್ನ ಭೀಮಸೇನ ಜೋಶಿ ಅವರ ಶಿಷ್ಯ ಹಾಗೂ ಹಿಂದುಸ್ತಾನಿ ಖ್ಯಾತ ಗಾಯಕರಾಗಿದ್ದ ಕೀರ್ತಿಶೇಷ ಪಂ. ಶ್ರೀಪತಿ ಪಾಡಿಗಾರ ಅವರ ಸ್ಮರಣಾರ್ಥ ಜೂ. 29 ರಂದು ಸಂಜೆ 4ಕ್ಕೆ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಹಳೇ ಹುಬ್ಬಳ್ಳಿ ಶ್ರೀ ಕೃಷ್ಣೇಂದ್ರಸ್ವಾಮಿ ಮಠ ಸಭಾಗ್ರಹದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಗಡಿ ಆನಂದವನದ ಶ್ರೀ ವಿಶ್ವನಾಥ ಚಕ್ರವರ್ತಿ ಸಾನ್ನಿಧ್ಯ ವಹಿಸುವರು. ಕುಂದಗೋಳದ ಶ್ರೀಮಂತ ಅರ್ಜುನ ನಾಡಿಗೀರ, ಧಾರವಾಡದ ಡಾ. ಉದಯಕುಮಾರ ದೇಸಾಯಿ, ನಾರಾಯಣ ದೇಸಾಯಿ, ರಾಣೆಬೆನ್ನೂರಿನ ಶ್ರೀಪಾದ ದೇಸಾಯಿ, ಕುಂದಗೋಳ ಪಪಂ ಅಧ್ಯಕ್ಷ ಶ್ಯಾಮರಾವ ದೇಸಾಯಿ, ಖ್ಯಾತ ಗಾಯಕ ಕೃಷ್ಣೇಂದ್ರ ವಾಡೀಕರ ಆಗಮಿಸಲಿದ್ದಾರೆ.
ಖ್ಯಾತ ಸಿತಾರವಾದಕ ಶಫಿಖಾನ್, ಐಶ್ವರ್ಯ ದೇಸಾಯಿ, ಹರೀಶ ಅರಬಟ್ಟಿ, ಹಾಗೂ ಕೃಷ್ಣೇಂದ್ರ ವಾಡಿಕರ ಅವರಿಂದ ಗಾಯನ ನಡೆಯಲಿದೆ. ವೀಣಾ ಮಠ ಅವರಿಂದ ವಯೋಲಿನ್ ವಾದನ, ಬಾಲ ಪ್ರತಿಭೆ ರೋಹಿತ್ ಪೂಜಾರ ಗಾಯನ, ವೆಂಕಟೇಶ ಜೋಶಿ ದಾಸವಾಣಿ ಪ್ರಸ್ತುತ ಪಡಿಸುವರು. ತಬಲಾದಲ್ಲಿ ಶಾಂತಲಿಂಗ ದೇಸಾಯಿ. ನಿಸ್ಸಾರ್ ಅಹ್ಮದ, ಪ್ರಸಾದ ಮಡಿವಾಳರ, ಶ್ರೀಧರ ಮಾಂಡ್ರೆ, ಜಯತೀರ್ಥ ಪಂಚಮುಖಿ, ಹಾರ್ವೇನಿಯಂನಲ್ಲಿ ಪ್ರಶಾಂತ ಮಲ್ಲನಗೌಡರ, ಕಿರಣ ಆಯಾಚಿತ್, ತಾಳದಲ್ಲಿ ಸುಧೀಂದ್ರ ಆಚಾರ್ಯ ಸಾಥ್ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.