ರಷ್ಯಾ ಅಧ್ಯಕ್ಷ 'ಪುಟಿನ್'​ ಕಾರು ಸ್ಪೋಟ! ಹತ್ಯೆಗೆ ಯತ್ನ? Aladimir putin

car blast
Published on

ಮಾಸ್ಕೋ | ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಅವರ ಐಷಾರಾಮಿ 'ಲಿಮೋಸಿನ್' ಕಾರು ಸ್ಫೋಟಗೊಂಡು ಬೆಂಕಿಗಾಹುತಿಯಾಗಿದೆ. ಮಾಸ್ಕೋದಲ್ಲಿರುವ ಎಫ್‌ಎಸ್‌ಬಿ ಪ್ರಧಾನ ಕಚೇರಿಯ ಹೊರಗೆ ಈ ಸ್ಫೋಟ ಸಂಭವಿಸಿದೆ. ದೊಡ್ಡ ಪ್ರಮಾಣದಲ್ಲಿ ಸ್ಪೋಟ ಸಂಭವಿಸಿದ್ದು, ನಂತರ ಕಾರಿನ ಎಂಜಿನ್​ನಿಂದ ಹೊತ್ತಿದ ಬೆಂಕಿ, ಸಂಪೂರ್ಣ ಕಾರನ್ನು ಆವರಿಸಿದ ಪರಿಣಾಮ ಇಡೀ ಕಾರು ಹಾನಿಗೊಳಗಾಗಿದೆ.

ಲಿಮೋಸಿನ್ ಕಾರು ಐಷಾರಾಮಿ ಹಾಗೂ ಉದ್ದವಾದ ಚಕ್ರ ಹೊಂದಿರುವ ವಾಹನವಾಗಿದ್ದು,  ಈ ಕಾರನ್ನು ಹಲವು ದೇಶಗಳ ಅಧ್ಯಕ್ಷರು  ಬಳಸುತ್ತಾರೆ. ಇದು ಪ್ರಯಾಣಿಕ ಹಾಗೂ ಚಾಲಕರ ನಡುವೆ ವಿಭಜನೆಯನ್ನು ಹೊಂದಿರುತ್ತದೆ. ಆರಾಮದಾಯಕ ಮತ್ತು ಐಷಾರಾಮಿ ಪ್ರಯಾಣಕ್ಕಾಗಿ ಈ ಕಾರನ್ನ ವಿನ್ಯಾಸ ಮಾಡಲಾಗಿದೆ. ವಿಶೇಷ ಸಂದರ್ಭಗಳಲ್ಲಿ ಅಥವಾ ಕಾರ್ಪೊರೇಟ್ ಕಾರ್ಯಕ್ರಮಗಳಲ್ಲಿ ಮಾತ್ರ ಈ ಕಾರನ್ನು ಬಳಕೆ ಮಾಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net