ಅಂಗಡಿಯಿಂದ ಉಡುಪುಗಳನ್ನು ಎತ್ತಿಕೊಂಡು ಹೋದ ವಿತರಕ! - ಹಣ ಕೊಡೆ ಸತಾಯಿಸಿದ ಮಾಲೀಕನಿಗೆ ಪಾಠ

Published on

ವಿಟ್ಲ: ಉಡುಪುಗಳನ್ನು ತರಿಸಿಕೊಂಡು ಹಣ ನೀಡದೆ ಸತಾಯಿಸಿ ಜವುಳಿ ಅಂಗಡಿಯಿಂದ ವಿತರಣೆ ಮಾಡಿದಾತ ವಿತರಣೆ ಮಾಡಿದ ಉಡುಪುಗಳನ್ನೇ ತೆಗೆದುಕೊಂಡು ಹೋಗಿರುವ ಘಟನೆ ವಿಟ್ಲದಲ್ಲಿ ಮಂಗಳವಾರ ನಡೆದಿದೆ.

ಉಡುಪುಗಳನ್ನು ಅಂಗಡಿಗೆ ವಿತರಣೆ ಮಾಡಿ ಹಣವನ್ನು ತಿಂಗಳ ಮೊನೆಯಲ್ಲಿ ಪಡೆಯುವುದು ನಡೆದುಕೊಂಡ ಬಂದ ವಾಡಿಕೆ. ಇತ್ತೀಚೆಗೆ ಪೊಲೀಸ್ ಠಾಣೆ ಪಕ್ಕದಲ್ಲಿ ನೂತನವಾಗಿ ಪ್ರಾರಂಭಗೊಂಡ ಬಟ್ಟೆ ಅಂಗಡಿಯಲ್ಲಿಯೂ ಇದೇ ಸಂಪ್ರದಾಯ ಚಾಲ್ತಿಯಲ್ಲಿತ್ತು. ಮಾಲೀಕ ಸುಮಾರು ಎರಡು ತಿಂಗಳಿಂದ ಬಟ್ಟೆ ವಿತರಣೆ ಮಾಡಿದವನಿಗೆ ಹಣ ನೀಡದೆ ಸತಾಯಿಸುತ್ತಿದ್ದು, ಕರೆ ಮಾಡುವ ಸಂದರ್ಭದಲ್ಲಿ ದೂರವಾಣಿ ಸ್ವೀಕರಿಸಿದೆ, ಸ್ವಿಚ್‌ಆ- ಮಾಡಿ ಇಡುವುದು ಸೇರಿ ವಿವಿಧ ಆಟಗಳನ್ನು ತೋರಿಸಿದ್ದಾನೆ.

ಬೇಸ್ತು ಬಿದ್ದ ವಿತರಣೆ ಮಾಡಿದಾತ ಮಂಗಳವಾರ ಕಾರಿನಲ್ಲಿ ಬಂದು ಅಂಗಡಿಯಲ್ಲಿ ತಾನು ವಿತರಿಸಿದ ಬಟ್ಟೆಯನ್ನು ಹಿಂಪಡೆದು ಕಾರಿನಲ್ಲಿ ತುಂಬಿಕೊಂಡು ತೆರಳಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಬಟ್ಟೆ ಅಂಗಡಿಯಿಂದ ದರೋಡೆ ನಡೆದಿದೆ ಎಂಬ ರೀತಿಯಲ್ಲಿ ಸಿಸಿ ಟಿವಿ ಚಿತ್ರಣಗಳನ್ನು ಹಾಕಿ ಸುದ್ದಿ ಹಬ್ಬಿಸಲಾಗಿದೆ. ನೈಜವಾಗಿ ನೋಡಿದ ೫,೫೦೦ರೂ ಬಟ್ಟೆ ಹಣವನ್ನು ನೀಡದಿದ್ದಕ್ಕೆ ಬಟ್ಟೆಯನ್ನೇ ಪಡೆದು ತೆರಳಲಾಗಿದೆ. ಈ ಬಗ್ಗೆ ಎರಡು ಕಡೆಯವರೂ ವಿಟ್ಲ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net