

Shivanna: ಚಾಮರಾಜನಗರ ಜಿಲ್ಲೆಯ ಗಡಿಯಲ್ಲಿರುವ ತಮಿಳುನಾಡಿನ ತಾಳವಾಡಿ ಸಮೀಪದ ಗಾಜನೂರಿಗೆ ಚಿತ್ರನಟ ಡಾ.ಶಿವರಾಜ್‌ಕುಮಾರ್ ಮತ್ತು ಗೀತಾ ಶಿವರಾಜ್‌ಕುಮಾರ್ ಬುಧವಾರ ಭೇಟಿ ನೀಡಿದರು.
ಗಾಜನೂರಿನಲ್ಲಿರುವ ಮನೆಗೆ ಆಗಮಿಸಿ ಸೋದರ ಅತ್ತೆ ನಾಗಮ್ಮ ಅವರ ಆರೋಗ್ಯ ವಿಚಾರಿಸಿದರು. ಈ ವೇಳೆ ನಾಗಮ್ಮ ಶಿವರಾಜ್‌ಕುಮಾರ್ ಮತ್ತು ಗೀತಾ ಅವರ ಕೈ ಹಿಡಿದು ಮಾತನಾಡಿ ಅಕ್ಕರೆ ತೋರಿ ಆಶೀರ್ವಾದ ಮಾಡಿದರು. ಸಂಜೆ ವೇಳೆಗೆ ಗಾಜನೂರಿನಿಂದ ಶಿವರಾಜ್‌ಕುಮಾರ್ ಮತ್ತು ಗೀತಾ ಹೊರಟರು.
2024ರ ಡಿಸೆಂಬರ್ 24ರಂದು ಅಮೆರಿಕಾದ ಮಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನಟ ಶಿವರಾಜ್‌ಕುಮಾರ್, ಕ್ಯಾನ್ಸರ್ನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.