

ಕೋಟ: ಕೋಟ ಶ್ರೀ ವಿರಾಡ್ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮ ಆಶ್ರಯದಲ್ಲಿ ವಿಶ್ವಕರ್ಮ ಕಲಾವೃಂದ ಸಾಲಿಗ್ರಾಮ ನೇತೃತ್ವದಲ್ಲಿ ವಿಶ್ವಜ್ಯೋತಿ ಮಹಿಳಾ ಬಳಗ ಸಾಲಿಗ್ರಾಮ ಸಹಯೋಗದೊಂದಿಗೆ ಚೇಂಪಿಯ ವಿಶ್ವಕರ್ಮ ಸಾಂಸ್ಕೃತಿಕ ಸಭಾಭವನದಲ್ಲಿ ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ಸೋಮವಾರ ಜರುಗಿತು.
ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಎಂ.ಸುಬ್ರಾಯ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಒಎನ್‌ಜಿ.ಸಿ ಮುಂಬೈ ನಿವೃತ್ತ ಜನರಲ್ ಮ್ಯಾನೇಜರ್ ಬನ್ನಾಡಿ ನಾರಾಯಣ ಆಚಾರ್ ಶುಭಾಶಂಸನೆಗೈದರು. ಮುಖ್ಯ ಅಭ್ಯಾಗತರಾಗಿ ಉಡುಪಿ ಕೆನರಾ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಪಾರಂಪಳ್ಳಿ ಶ್ರೀಕಾಂತ್ ಆಚಾರ್, ವಿಶ್ವಜ್ಯೋತಿ ಬಳಗದ ಉಪಾಧ್ಯಕ್ಷೆ ಲಿಲಾವತಿ ಆನಂದ್ ಆಚಾರ್ ಉಪಸ್ಥಿತರಿದ್ದರು.
ಕೋಶಾಧಿಕಾರಿ ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಜತೆ ಕಾರ್ಯದರ್ಶಿ ರಮೇಶ್ ಆಚಾರ್ ಚೇಂಪಿ, ಕಲಾವೃಂದದ ಪ್ರಮುಖರಾದ ಗಜೇಂದ್ರ ಆಚಾರ್, ನವೀನ್ ಆಚಾರ್, ಜಗದೀಶ್ ಆಚಾರ್ ಸನ್ಮಾನ ಪತ್ರ ವಾಚಿಸಿದರು. ವಿರಾಡ್ವಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಗೌರವಾಧ್ಯಕ್ಷ ಜನಾರ್ದನ ಆಚಾರ್ ಪ್ರಾಸ್ತಾವನೆ ಸಲ್ಲಿಸಿದರು. ವಿಶ್ಚಕರ್ಮ ಕಲಾವೃಂದದ ಅಧ್ಯಕ್ಷ ವೆಂಕಟೇಶ ಆಚಾರ್ ಸ್ವಾಗತಿಸಿ, ಕಲಾವೃಂದದ ಮಾಜಿ ಕಾರ್ಯದರ್ಶಿ ಅಜಿತ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು.
ಸಾಲಿಗ್ರಾಮ, ಶ್ರೀ ವಿರಾಡ್ವಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಕಾರ್ಯದರ್ಶಿ ಕೇಶವ ಆಚಾರ್ ವಂದಿಸಿದರು. ಕಲಾವೃಂದದ ಕಾರ್ಯದರ್ಶಿ ನಿತ್ಯಾನಂದ ಆಚಾರ್ ಕೋಟ, ಕೋಶಾಧಿಕಾರಿ ರಾಘವೇಂದ್ರ ಆಚಾರ್ ಚೇಂಪಿ ಸಹಕರಿಸಿದರು.
ವಿಶ್ವಕರ್ಮ ಕುಲಕಸುಬಿನ ಹಿರಿಯ ಸಾಧಕ ಗಿಳಿಯಾರು ಕೊಗ್ಗ ಆಚಾರ್ ದಂಪತಿ, ಪಾರಂಪಳ್ಳಿ ಸಂಜೀವ ಆಚಾರ್ ದಂಪತಿ, ವಡ್ಡರ್ಸೆ ನೀರ್ಕೋಡ್ಲು ರುದ್ರಯ್ಯ ಆಚಾರ್ ದಂಪತಿ, ಕ್ರೀಡಾಸಾಧಕಿ ಸಂಜನಾ ಆಚಾರ್ ಅವರನ್ನು ಸನ್ಮಾನಿಸಲಾಯಿತು. ವಿಶ್ವಕರ್ಮ ಸಮಾಜದ ಯುವ ಸಾಧಕರಾದ ಚೇಂಪಿ ದಿನೇಶ್ ಆಚಾರ್, ಅಜಿತ್ ಆಚಾರ್, ಕುಶ ಆಚಾರ್ ಬನ್ನಾಡಿ, ಸೃಷ್ಟಿ ಜೆ.ಆಚಾರ್ ಗುಂಡ್ಮಿ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ರ‌್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕಾರ್ಕಡ ಗೋಪಾಲಕೃಷ್ಣ ಆಚಾರ್ ಸ್ಮರಣಾರ್ಥ ದತ್ತಿನಿಧಿ ವಿತರಿಸಲಾಯಿತು. ಸಮುದಾಯದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ನಿವೃತ್ತ ಶಿಕ್ಷಕ ನಾರಾಯಣ ಆಚಾರ್ ಹಾಗೂ ಕಾರ್ಕಡ ರಮೇಶ್ ಆಚಾರ್ ಅವರನ್ನು ಗೌರವಿಸಲಾಯಿತು.