

ಮುಂಡರಗಿ: ವಿಶ್ವಕರ್ಮರು ಒಂದೇ ಸಮಾಜಕ್ಕೆ ಸೀಮಿತರಲ್ಲ. ಎಲ್ಲ ಸಮಾಜದವರು ಕೂಡಿ ಜಯಂತಿಯನ್ನು ಆಚರಿಸಬೇಕು. ವಿಶ್ವವನ್ನು ಸೃಷ್ಟಿ ಮಾಡಿದವರು ವಿಶ್ವಕರ್ಮ. ಶ್ರೀಕೃಷ್ಣನ ದ್ವಾರಕ ನಗರವನ್ನು ಸಹ ಸೃಷ್ಟಿ ಮಾಡಿದರು. ವಿಶ್ವಕರ್ಮರು ಹಿಂದು ಧರ್ಮಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ವಿಶ್ವಕರ್ಮ ಸಮಾಜ ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದವರಾಗಿದ್ದು, ಪ್ರತಿಯೊಬ್ಬರು ಮುಂದೆ ಬರಬೇಕು ಎಂದು ಶಿಲ್ಪಿ ವೆಂಕಟೇಶ ಸುತಾರ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ವಿಶ್ವಕರ್ಮ ಸಮಾಜದವರು ರೈತರಿಗೆ ಕೃಷಿ ಕಾಯಕಕ್ಕೆ ಪೂರಕವಾಗಿರುವ ಸಲಕರಣೆ ತಯಾರಿಸಿ ಕೊಡುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರು ಪಿಎಂ ವಿಶ್ವಕರ್ಮ ಯೋಜನೆ ಜಾರಿಗೊಳಿಸಿ ಅವರ ಕಾಯಕಕ್ಕೆ ಉತ್ತೇಜ ನೀಡಿದ್ದಾರೆ. ಜಕಣಾಚಾರಿ ವಿಶ್ವಕರ್ಮರ ಆಶಾಕಿರಣವಾಗಿದ್ದು, ಅವರು ಸಹ ದೈವಿ ಪುರುಷರಾಗಿದ್ದು ಅನೇಕ ದೇವಾಲಯಗಳನ್ನು ನಿರ್ಮಿಸಿದ್ದಾರೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರೇಡ್-2 ತಹಸೀಲ್ದಾರ್ ರಾಧಾ ಕೆ. ಮಾತನಾಡಿದರು. ರೈತ ಸಂಘದ ಪ್ರ.ಕಾರ್ಯದರ್ಶಿ ಶಿವಾನಂದ ಇಟಗಿ, ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ, ವಿ.ಎಸ್.ಗಟ್ಟಿ, ಎಂ.ಎಚ್.ಬೆಟಗೇರಿ, ಮೌನೇಶ ಪತ್ತಾರ, ಬಾಳಪ್ಪ ಬಡಿಗೇರ ಮಾತನಾಡಿದರು. ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ರಾಘವೇಂದ್ರ ಕಮ್ಮಾರ, ಪಾಂಡಪ್ಪ ಪತ್ತಾರ, ಈಶಣ್ಣ ಬಡಿಗೇರ, ಭೀಮಣ್ಣ ಕಮ್ಮಾರ, ಶ್ರೀಕಾಂತ ಬಡಿಗೇರ, ಧ್ರುವಕುಮಾರ ಹೂಗಾರ, ಈರಪ್ಪ ಕಕ್ಕೂರ, ದೇವಪ್ಪ ಬಡಿಗೇರ, ಮೌನೇಶ ಹಕ್ಕಂಡಿ, ಮೌನೇಶ ಕ್ಯಾಸಲಾಪೂರ, ಬಾಳಪ್ಪ ಬಡಿಗೇರ, ಶಿವಪ್ಪ ಬರದೂರ, ಮಂಜುನಾಥ ಕಲಕೇರಿ, ಶಿವಪುತ್ರಪ್ಪ ಬಡಿಗೇರ, ಮಂಜು ಬಡಿಗೇರ, ಮುತ್ತು ಬರದೂರ, ವೀರೇಶ ಬಡಿಗೇರ, ಮೋಹನ ಹಂಪಿ, ಶ್ರೀಧರ ಬಡಿಗೇರ, ನಾಗರಾಜ ಕುಲಕರ್ಣಿ ಇತರರು ಇದ್ದರು.