ಆರ್ಥಿಕ ಅಭಿವೃದ್ಧಿಗೆ ಶಿಕ್ಷಣವೇ ಪ್ರಧಾನ

09HDK 01
Published on

ಎಚ್.ಡಿ.ಕೋಟೆ : ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಶಿಕ್ಷಣ ಪ್ರಧಾನ ಪಾತ್ರ ವಹಿಸಲಿದೆ ಎಂದು ವಿಶ್ವಕರ್ಮ ಮಹಾಸಂಸ್ಥಾನದ ಶ್ರೀ ಸುಜ್ಞಾನ ತೀರ್ಥ ಸ್ವಾಮೀಜಿ ಹೇಳಿದರು.ಮುಸ್ಕೆರೆ ಗ್ರಾಮದ ವಿಶ್ವಕರ್ಮ ಕಾಲನಿಯಲ್ಲಿ ಸೋಮವಾರ ಎಚ್.ಡಿ.ಕೋಟೆ ಮತ್ತು ಸರಗೂರು ವಿಶ್ವಕರ್ಮ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಕರ್ಮ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಹಣ ಗಳಿಕೆಯಿಂದ ಮಾಡುವ ಸಾಧನೆಗಿಂತ ವಿದ್ಯೆಯಿಂದ ದೊಡ್ಡ ದೊಡ್ಡ ಸಾಧನೆ ಮಾಡಬಹುದು. ಹಾಗಾಗಿ ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಯತ್ನ ಮಾಡಬೇಕು ಎಂದರು. ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಜಿ.ಎಸ್. ನಾಗರಾಜಪ್ಪ, ಪ್ರಧಾನ ಕಾರ್ಯದರ್ಶಿ ಕಲ್ಲಂಬಾಳು ಮೂರ್ತಿ, ಉಪಾಧ್ಯಕ್ಷ ಕೆಂಚನಹಳ್ಳಿ ಮಾದೇವಸ್ವಾಮಿ, ಜಿಪಂ ಮಾಜಿ ಸದಸ್ಯ ರವಿ, ಭೀಮನಹಳ್ಳಿ ಗ್ರಾಪಂ ಅಧ್ಯಕ್ಷೆ ಭಾಗ್ಯಾ, ಡಾ. ನಂಜುಂಡಸ್ವಾಮಿ, ಮುಖಂಡರಾದ ಮಾದೇಗೌಡ, ಕೀರ್ತಿ, ಗಾಯತ್ರಮ್ಮ, ವಿನೋದಮ್ಮ, ಶ್ರೀಕಂಠಾಚಾರ್, ದಯಾನಂದ, ಚಂದ್ರಾಚಾರ್, ಸುಬ್ಬಣ್ಣ, ಗಂಗಾಧರ, ಶ್ರೀಕಂಠಾಚಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net