

ಹಾವೇರಿ: ರಾಜ್ಯ ಸರ್ಕಾರ ಆಥಿರ್ಕ ಹೊರೆ ನೆಪವೊಡ್ಡಿ ರಾಜ್ಯದ ನೂತನ 9 ವಿಶ್ವವಿದ್ಯಾಲಯಗಳನ್ನು ಬಂದ್ ಮಾಡುವ ನಿರ್ಧಾರ ಹಿಂಪಡೆದು ನೂತನ ವಿಶ್ವವಿದ್ಯಾಲಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾಟಿರ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಜಿಲಾನಿ ಮೇದೂರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ನೂತನ 9 ವಿಶ್ವವಿದ್ಯಾಲಯಗಳಲ್ಲಿ ಹಾವೇರಿ ವಿಶ್ವವಿದ್ಯಾಲಯವು ಸೇರಿದ್ದು, ವಿಶ್ವವಿದ್ಯಾಲಯ ಬಂದ್ ಮಾಡುವುದರಿಂದ ಜಿಲ್ಲೆಯ ಬಡ ವಿದ್ಯಾಥಿರ್ಗಳಿಗೆ ತೊಂದರೆಯಾಗಲಿದೆ. ಪ್ರಸ್ತುತ ಹಾವೇರಿ ವಿಶ್ವವಿದ್ಯಾಲಯದಲ್ಲಿ 6 ಸ್ನಾತಕೋತ್ತರ ಪದವಿಗಳು ನಡೆಯುತ್ತಿದ್ದು, 42 ಪದವಿ ಕಾಲೇಜುಗಳು ವಿಶ್ವವಿದ್ಯಾಲಯೊಂದಿಗೆ ಸಂಯೋಜಿತಗೊಂಡಿವೆ. ವಿದ್ಯಾಥಿರ್ಗಳ ಭವಿಷ್ಯದ ದೃಷ್ಠಿಯಿಂದ ಸರ್ಕಾರ ವಿಶ್ವವಿದ್ಯಾಲಯ ಮುಚ್ಚುವ ನಿರ್ಧಾರ ಹಿಂಪಡೆದು ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಹೆರಿಗೆ ಆಸ್ಪತ್ರೆಗಳಲ್ಲಿ ಅನುಭವಿ ಸ್ತ್ರೀರೋಗ ತಜ್ಞ ವೈದ್ಯರು, ದಾದಿಯರನ್ನು ನೇಮಿಸಿ 24*7 ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು. ಇತ್ತೀಚಿಗೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಎಲ್ಲ ತಾಲೂಕು ಕೇಂದ್ರಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಹೃದ್ರೋಗ ತಜ್ಞ ವೈದ್ಯರನ್ನು ನೇಮಿಸಬೇಕು. ಜೊತೆಗೆ ಯಂತ್ರೋಪಕರಣಗಳು ಹಾಗೂ ತುರ್ತು ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಎನ್ಎಸ್ಪಿ ಅಂತಹ ರಾಷ್ಟ್ರೀಯ ವಿದ್ಯಾಥಿರ್ ವೇತನದ ಮಾದರಿಯಲ್ಲಿ ರಾಜ್ಯ ಸರ್ಕಾರವು ರಾಜ್ಯದಲ್ಲಿ ಅಲ್ಪಸಂಖ್ಯಾತ ವಿದ್ಯಾಥಿರ್ಗಳಿಗೆ ವಿದ್ಯಾಥಿರ್ ವೇತನ ಘೋಷಿಸಿ ಜಾರಿಗೊಳಿಸಬೇಕು. ಜೊತೆಗೆ ಉನ್ನತ ವ್ಯಾಸಾಂಗ ಮಾಡುವ ಅಲ್ಪಸಂಖ್ಯಾತ ವಿದ್ಯಾಥಿರ್ಗಳಿಗೆ ವಿಶೇಷ ವಿದ್ಯಾಥಿರ್ ವೇತನ ನೀಡಬೇಕು. ರಾಜ್ಯದಲ್ಲಿ ಸಾಮಾನ್ಯವಾಗಿ ಉರ್ದು ಪ್ರಾಥಮಿಕ ಶಾಲೆಗಳಿದ್ದು, ಮಕ್ಕಳಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಉರ್ದು ಪ್ರೌಢಶಾಲೆ, ಕಾಲೇಜುಗಳನ್ನು ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಖಾಸೀಂ ರಬ್ಬಾನಿ, ಅಕ್ಬರ್ಅಲಿ ಪರಂಡೆ, ಜಬಿವುಲ್ಲಾ ಹಿರೇಕೆರೂರ, ವಾಜಿದ್ ತುಮ್ಮಿನಕಟ್ಟಿ, ಅತಾವುಲ್ಲಾ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.