ದೇಶದ ಹಿತಕ್ಕಾಗಿ ಯೋಚಿಸಿ ಮತ ಚಲಾಯಿಸಿ: ವಿಶ್ವ ಹಿಂದು ಪರಿಷತ್​ ಮನವಿ

Vote
Published on

ಬೆಂಗಳೂರು: ಕಾಂಗ್ರೆಸ್​ನ ಹಿಂದುವಿರೋಧಿ ರಾಜಕಾರಣವನ್ನು ಧಿಕ್ಕರಿಸಿ, ದೇಶದ ಭದ್ರತೆ, ಅಭಿವೃದ್ಧಿಗಾಗಿ ಕೆಲಸ ಮಾಡುವ ಪಕ್ಷ ಕೇಂದ್ರದಲ್ಲಿ ಆಡಳಿತಕ್ಕೆ ಬರಬೇಕಿದೆ. ಹೀಗಾಗಿ ಹಿಂದುಗಳು ಪೂರ್ಣಪ್ರಮಾಣದಲ್ಲಿ ಮತದಾನ ಮಾಡಬೇಕು ವಿಶ್ವ ಹಿಂದು ಪರಿಷತ್​ ವಿನಂತಿಸಿದೆ.

ಲೋಕಸಭಾ ಚುನಾವಣೆ ಸಂಧರ್ಭದಲ್ಲಿ ಕರ್ನಾಟಕ ಸರ್ಕಾರ ಮೀಸಲು ನೀಡುವ ಸಲುವಾಗಿ ಮುಸ್ಲಿಂ ಸಮುದಾಯವನ್ನು ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಿಸಿರುವುದು ಆತಂಕಕಾರಿಯಾಗಿದೆ. ಮತಕ್ಕಾಗಿ ಬಹುಸಂಖ್ಯಾತರಾದ ಹಿಂದುಗಳ ಹಕ್ಕನ್ನು ಕಸಿದುಕೊಳ್ಳುವ ಸಾಧ್ಯತೆ ಇದೆ. ಇದರಿಂದ ಸರ್ಕಾರಿ ಕೆಲಸ ಸೇರಿ ವಿವಿಧ ಉದ್ಯೋಗ ನೇಮಕಾತಿಯಲ್ಲಿ ಮುಸ್ಲಿಮರಿಗೆ ಮುಕ್ತ ಅವಕಾಶ ಸಿಕ್ಕಂತಾಗುತ್ತದೆ. ಪರಿಣಾಮ ಹಿಂದುಳಿದ ವರ್ಗದ ಹಿಂದುಗಳಿಗೆ ಅನ್ಯಾಯವಾಗಲಿದೆ ಎಂದು ಪರಿಷತ್​ನ ಪ್ರಾಂತ ಸಹ ಕಾರ್ಯದರ್ಶಿ ಶರಣ್​ ಪಂಪುವೆಲ್​ ತಿಳಿಸಿದ್ದಾರೆ.

ರಾಹುಲ್​ ಹೇಳಿಕೆಗೆ ವಿರೋಧ

ಕೇಂದ್ರದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದ ಎಲ್ಲ ವರ್ಗದವರ ಸಂಪತ್ತನ್ನು ಸರ್ವೇ ಮಾಡಿ ಹಂಚಲಾಗುವುದು ಎಂದು ಕಾಂಗ್ರೆಸ್​ ನಾಯಕನ ಹೇಳಿಕೆ ಗಂಭೀರವಾಗಿದೆ. ಇದು ಶೇ.80 ಇರುವ ಹಿಂದುಗಳ ಆಸ್ತಿ ಕಸಿದುಕೊಂಡು, ಮುಸ್ಲಿಮರಿಗೆ ನೀಡುವ ಉದ್ದೇಶವಾಗಿದೆ. ಇದರ ವಿರುದ್ಧ ಹಿಂದುಗಳು ಎಚ್ಚೆತ್ತುಕೊಂಡು, ಕಾಂಗ್ರೆಸ್​ನ ಮತ ಬ್ಯಾಂಕ್​ ರಾಜಕೀಯವನ್ನು ತಿರಸ್ಕರಿಸಬೇಕಾಗಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net