ಸುಂಟಿಕೊಪ್ಪದಲ್ಲಿ ವಿಶು ಸೌರಮಾನ ಯುಗಾದಿ ಸಂಭ್ರಮ

14sunti01
Published on

ಸುಂಟಿಕೊಪ್ಪ: ಕೊಡಗಿನಲ್ಲಿ ನೆಲೆ ನಿಂತಿರುವ ಮಲಯಾಳಿ ಸಮಾಜದವರು ವಿಶು ಸೌರಮಾನ ಯುಗಾದಿಯನ್ನು ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಿದರು. ವಿಶು ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಹೊಡೆದು ಸಂಭ್ರಮಿಸುವುದು ವಾಡಿಕೆ. ಅದರಂತೆ ಮಲಯಾಳಿಗಳು ಮನೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹಬ್ಬದ (ಕೊನ್ನಪೂ) ಹೊನ್ನೆಹೂ, ವಿಶು ಕಣಿಗಳಾದ (ಅಡ) ತಿಂಡಿ, ವಿವಿಧ ಬಗೆಯ ಹಣ್ಣು ಹಂಪಲು, ತರಕಾರಿ, ದವಸಧ್ಯಾನ್ಯ, ಬಾಳೆಹಣ್ಣು, ಹಲಸಿನಗುಜೆ, ಚಿನ್ನಾಭರಣ, ನಗದು ಹಣವನ್ನು ದೇವರ ಮುಂದಿಟ್ಟು ಹೊಸವರ್ಷದಲ್ಲಿ ಐಶ್ವರ್ಯ, ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಬಳಿಕ ಬಗೆಯ ಸಸ್ಯಾಹಾರಿ ಭೋಜನ ತಯಾರಿಸುವ ಮೂಲಕ ಮನೆಯವರೆಲ್ಲ ಸವಿದು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net