ಅಮೆರಿಕದಲ್ಲಿ ಮೋದಿ: ವೀಸಾ ಸ್ಥಿತಿ ಸುಧಾರಣೆ

Nataraj
Published on

| ಕರ್ನಲ್ ನಟರಾಜ್ ಕೋಟೆ

ವಿಶ್ವ ಸಂಸ್ಥೆಯ 76ನೇ ಅಧಿವೇಶನದಲ್ಲಿ 193 ರಾಷ್ಟ್ರಗಳು ಭಾಗವಹಿಸುವ ಸಾಧ್ಯತೆಯಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ಮಾಡಲಿದ್ದಾರೆ. ಮೋದಿಯವರ ಚತುಮುಖ (ಟ್ಠಿಚಛ) ಸಭೆ,(ಐಛಟಕಚ್ಚಜ್ಛಿಜ್ಚಿ) ಭಾರತ, ಅಮೇರಿಕ, ಜಪಾನ್, ಆಸ್ಟ್ರೇಲಿಯ ದೇಶಗಳನ್ನೊಳಗೊಂಡಿದ್ದು, ದೇಶದ ಸರ್ವತೋಮುಖ ಕಲ್ಯಾಣಕ್ಕೆ ಇದು ಬುನಾದಿಯಾಗುವ ಮುನ್ಸೂಚನೆಯಿದೆ.

ಅಮೆರಿಕದ 258 ಶ್ರೇಷ್ಠ ವಿದ್ಯಾಸಂಸ್ಥೆಗಳ ಸ್ನಾತಕೋತ್ತರ ಹಾಗೂ ಡಾಕ್ಟರೇಟ್ ವಿಭಾಗಗಳು ಭಾರತೀಯ ವಿದ್ಯಾರ್ಥಿಗಳಿಗಾಗಿ ಹಾತೊರೆಯುತ್ತಿವೆ. ಸುಮಾರು ಐದು ಲಕ್ಷದ ಇಪ್ಪತೆôದು ಸಾವಿರಕ್ಕೂ ಹೆಚ್ಚು ಇರುವ ಸಾಫ್ಟ್​ವೇರ್ ಸಂಸ್ಥೆಗಳಲ್ಲಿ ಭಾರತದ ಪ್ರತಿಭಾನ್ವಿತ ಅಭ್ಯರ್ಥಿಗಳನ್ನು ನೇಮಕ ಮಾಡಲು ಕಾದಿದ್ದಾರೆ. ಈ ನಿಟ್ಟಿನಲ್ಲಿ ಸೆ.24 ರಂದು ನರೇಂದ್ರ ಮೋದಿ ಹಾಗೂ ಜೋ ಬೈಡನ್ ನಡುವಿನ ದ್ವಿಪಕ್ಷೀಯ ಸಭೆ ಮತ್ತು ಚರ್ಚೆ, ಭಾರತೀಯರ ವೀಸಾ ಸ್ಥಿತಿಗೆ ಸಹಾಯಕಾರಿ ಸುಧಾರಣೆ ತರಲಿದೆ ಎಂಬ ಆಲೋಚನೆ ಇದೆ. ಒಟ್ಟಿನಲ್ಲಿ ಈ ಪ್ರವಾಸ, ದೇಶದ ಆರ್ಥಿಕ, ವ್ಯಾವಹಾರಿಕ, ಸಾಮಾಜಿಕ ಪ್ರಗತಿಗೆ ಪೂರಕವಾಗಲಿದೆ ಎಂದು ಭಾವಿಸೋಣ.

(ಅಮೆರಿಕದಲ್ಲಿ ಹಾಸ್ಪಿಟಾಲಿಟಿ ಉದ್ಯಮಿ, ಕನ್ನಡ ಕಾರ್ಯಕರ್ತ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net