ವೀರಶೈವಾಗಮ

Untitled design
Published on

ಪುರಾತನಕೃತಾಚಾರಸದೃಶಂ ಕುರ್ವೀತಿ ಸ್ಪುಟಂ | ಉಪಮಾದೀಕ್ಷಯಾದಿಶ್ಯ ಶಿಷ್ಯಪಾಪಾಪನುತ್ತಯೇ ||

ದೀಕ್ಷೆಯನ್ನು ಪಡೆಯುವ ಶಿಷ್ಯನಿಗೆ ಪುರಾತನರು ನಡೆಸುತ್ತಿದ್ದಂತಹ ಆಚರಣೆಗಳಿಗೆ ಸಮಾನವಾದ ಆಚರಣೆಗಳನ್ನೇ ಮಾಡಬೇಕು ಎಂದು ಸ್ಪಷ್ಟವಾಗಿ ಉಪದೇಶ ಮಾಡುವುದೇ ಉಪಮಾದೀಕ್ಷಾ. ಗತಾನುಗತಿಕೋ ಲೋಕಃ ಎಂಬ ಉಕ್ತಿಯಂತೆ ಮನುಷ್ಯನು ಅನುಕರಣ ಸ್ವಭಾವದವನಾಗಿರುವುದರಿಂದ ಇನ್ನೊಬ್ಬರ ಜೀವನದ ಘಟನೆಗಳನ್ನು ನೋಡಿ ತಾನು ಹೆಜ್ಜೆ ಹಾಕುತ್ತಾನೆ. ಕಾರಣ ಗುರುವು ಶಿಷ್ಯನನ್ನು ಸದಾಚರಣೆಯಲ್ಲಿ ಮುನ್ನಡೆಸಲು ಪುರಾತನರಾದ ಸಂತ, ಶಿವಯೋಗಿ, ಶಿವಾಚಾರ್ಯ, ಶಿವಶರಣರ ಜೀವನದ ಘಟನೆಗಳನ್ನು ದೃಷ್ಟಾಂತಗಳ ರೂಪದಲ್ಲಿ ಮನಸ್ಸಿಗೆ ಖಾತ್ರಿಯಾಗುವಂತೆ ತಿಳಿಸಿ ಹೇಳುವುದು ಉಪಮಾ ದೀಕ್ಷೆ

| ಕಾರಣಾಗಮ (ಕ್ರಿ. ಪಾ. 1.45) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net