ಒಂದೇ ಫ್ರೇಮ್​ನಲ್ಲಿ ಎರಡು ಅದ್ಭುತ; ವಿಶ್ವದ ಅತ್ಯಂತ ಎತ್ತರ & ಗಿಡ್ಡ ಮಹಿಳೆ ಇವರೇ ನೋಡಿ | Viral Video

Untitled design - 2024-11-22T191634.690
Published on

ಲಂಡನ್​​ : ವಿಶ್ವದ ಅತಿ ಎತ್ತರದ ಮಹಿಳೆ ರುಮೇಸಾ ಗೆಲ್ಗಿ ಮತ್ತು ಅತ್ಯಂತ ಕುಳ್ಳ ಮಹಿಳೆ ಜ್ಯೋತಿ ಅಮ್ಗೆ ಲಂಡನ್‌ನಲ್ಲಿ ಭೇಟಿಯಾಗಿದ್ದಾರೆ. ಲಂಡನ್‌ನ ಐಕಾನಿಕ್ ಸವೊಯ್ ಹೋಟೆಲ್‌ನಲ್ಲಿ ಈ ಎರಡು ಅದ್ಭುತ ವ್ಯಕ್ತಿಗಳು ಭೇಟಿಯಾಗಿದ್ದಾರೆ. ಅವರ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ (Viral Video)ಆಗುತ್ತಿದೆ. ವಿಡಿಯೋ ನೋಡಿದ ಮಂದಿ ಅವರನ್ನು ಹೊಗಳುತ್ತಾ ಆನಂದಿಸುತ್ತಿದ್ದಾರೆ.

27 ವರ್ಷದ ರುಮೆಸಾ ಗೆಲ್ಗಿ ಟರ್ಕಿಯ ನಿವಾಸಿಯಾಗಿದ್ದು, ವೃತ್ತಿಯಲ್ಲಿ ವೆಬ್ ಡೆವಲಪರ್ ಆಗಿದ್ದಾರೆ. ಅವರ ಎತ್ತರ 7 ಅಡಿ 1 ಇಂಚು. ಜ್ಯೋತಿ ಅಮ್ಗೆ ಭಾರತೀಯ ಕಲಾವಿದೆ, ಅವರ ಎತ್ತರ 2 ಅಡಿ 1 ಇಂಚು. ಇವರಿಬ್ಬರ ಭೇಟಿಯನ್ನು ಗಿನ್ನಿಸ್ ವಿಶ್ವ ದಾಖಲೆಯು ಕ್ಯಾಮೆರಾದಲ್ಲಿ ಸೆರೆಹಿಡಿದು ಹಂಚಿಕೊಂಡಿದ್ದಾರೆ. ರುಮೇಸಾ ಮತ್ತು ಜ್ಯೋತಿ ಒಬ್ಬರನ್ನೊಬ್ಬರು ಭೇಟಿಯಾದ ನಂತರ ತುಂಬಾ ಸಂತೋಷದಿಂದ ಕಾಣುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಈ ಇಬ್ಬರೂ ತಮ್ಮ ತಮ್ಮಲ್ಲೇ ಹಲವು ಸ್ವಾರಸ್ಯಕರ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅವರು ತಮ್ಮ ಇಷ್ಟ ಮತ್ತು ಇಷ್ಟಪಡದಿರುವಿಕೆಗಳು, ಮೇಕ್ಅಪ್, ಸೆಲ್ಫ್ ಕೇರ್ ಮತ್ತು ನೇಲ್ ಆರ್ಟ್ ಬಗ್ಗೆ ಚರ್ಚಿಸಿದ್ದಾರೆ. ಅಲ್ಲದೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​​​ನಿಂದ ಪ್ರಶಸ್ತಿ ನೀಡಿ ಈ ಇಬ್ಬರನ್ನು ಗೌರವಿಸಲಾಯಿತು. ಅವರ ಭೇಟಿಯ ಈ ವಿಡಿಯೋ ನಿಜಕ್ಕೂ ತುಂಬಾ ಮುದ್ದಾಗಿದೆ.

ಈ ವಿಡಿಯೋವನ್ನು ಇದುವರೆಗೂ 60.1 ಮಿಲಿಯನ್​ ಮಂದಿ ವೀಕ್ಷಿಸಿದ್ದಾರೆ. 23 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್​ ಮಾಡಿದ್ದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಇಬ್ಬರೂ ತುಂಬಾ ಸುಂದರ ಮಹಿಳೆಯರು, ಜ್ಯೋತಿ ಅವರ ಮುಖದಲ್ಲಿ ಯಾವಾಗಲೂ ನಗು ಇರುತ್ತದೆ ಅವರ ಈ ಅಭ್ಯಾಸ ತುಂಬಾ ಒಳ್ಳೆಯದು, ಆಕಾಶ ಮತ್ತು ಭೂಮಿ ಭೇಟಿಯಾಗುತ್ತಿರುವಂತೆ ತೋರುತ್ತದೆ, ಪ್ರಕೃತಿ ತುಂಬಾ ಅದ್ಭುತವಾಗಿದೆ, ಇವೆರಡನ್ನೂ ಒಟ್ಟಿಗೆ ನೋಡಿದಾಗ ಬಾಹ್ಯ ಸೌಂದರ್ಯವಲ್ಲ ಆತ್ಮ ಮತ್ತು ಹೃದಯ ಸುಂದರವಾಗಿರಬೇಕು ಎಂದು ತೋರುತ್ತದೆ ಎಂದು ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net