ಸೀರೆಯುಟ್ಟ ಮಹಿಳೆಯಿಂದ ವೇಟ್‌ಲಿಫ್ಟಿಂಗ್; Viral Video ನೋಡಿ ಹೊಗಳಿದ ನೆಟ್ಟಿಗರು

Untitled design - 2025-02-04T191326.903
Published on

ಜಿಮ್‌ನಿಂದ ಹಿಡಿದು ಕ್ರೀಡೆಗಳವರೆಗೆ ಬಟ್ಟೆಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಕ್ರೀಡೆಗೆ ಅನುಗುಣವಾದ ಬಟ್ಟೆಗಳಿಗೆ ಡ್ರೆಸ್ ಕೋಡ್ ಇದೆ, ಕ್ರಿಕೆಟ್‌ ಆಟಗಾರರು ಕಾಲರ್ ಹೊಂದಿರುವ ಟಿ-ಶರ್ಟ್‌ಗಳೊಂದಿಗೆ ಪೂರ್ಣ ಪ್ಯಾಂಟ್ ಧರಿಸುತ್ತಾರೆ. ಆದರೆ ನೀವು ಫುಟ್‌ಬಾಲ್ ಆಟಗಾರರನ್ನು ದುಂಡಗಿನ ಕುತ್ತಿಗೆಯ ಟಿ-ಶರ್ಟ್‌ಗಳು ಮತ್ತು ಅರ್ಧ ಪ್ಯಾಂಟ್‌ಗಳಲ್ಲಿ ನೋಡಿರಬೇಕು. ಆದರೆ ಮಹಿಳೆಯೊಬ್ಬರು ಸೀರೆಯಲ್ಲಿ ವೇಟ್​​ಲಿಫ್ಟಿಂಗ್​​​​ ಸ್ಫರ್ಧೆಯಲ್ಲಿ ಭಾಗವಹಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​(Viral Video) ಆಗುತ್ತಿದೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಸೀರೆಯುಟ್ಟು ಮತ್ತು ಸುರಕ್ಷತಾ ಬೆಲ್ಟ್ ಧರಿಸಿರುವುದನ್ನು ನೋಡಬಹುದು. ಜತೆಗೆ ಮಹಿಳೆ ಮುಸುಕು ಧರಿಸಿ ವೇಟ್​ಲಿಫ್ಟಿಂಗ್​​ ಎತ್ತುವಿಕೆಯನ್ನು ಪ್ರದರ್ಶಿಸುತ್ತಾರೆ. ಆಕೆಯ ಸುತ್ತ ಪುರುಷರು ಮಾತ್ರ ಕಾಣಿಸಿಕೊಂಡಿದ್ದಾರೆ, ಆದರೆ ಮಹಿಳೆ ಪೂರ್ಣ ಆತ್ಮವಿಶ್ವಾಸದಿಂದ ಮುಸುಕು ಧರಿಸಿ ಮತ್ತೆ ಮತ್ತೆ ವೇಟ್​ಲಿಫ್ಟಿಂಗ್​​ ಮಾಡುತ್ತಾರೆ.

ಈ ವಿಡಿಯೋ ವೈರಲ್​ ಆದ ಒಂದೇ ದಿನದಲ್ಲಿ 6 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ಅವರು ತುಂಬಾ ಪ್ರಭಾವಶಾಲಿ ಮಹಿಳೆ, ವಿಶ್ವದ ಅತಿ ದೊಡ್ಡ ಶಕ್ತಿ ಗೌರವ ಮತ್ತು ಘನತೆ, ಹಿಂದೆ ನಿಂತಿದ್ದ ಜನರು ಕುರ್ತಾ-ಧೋತಿ ಧರಿಸಿದ್ದರೆ ಘನತೆ ಇನ್ನಷ್ಟು ಹೆಚ್ಚಾಗುತ್ತಿತ್ತು, ಅವರ ದೇಹದ ಭಂಗಿ ತಪ್ಪಾಗಿರುವುದರಿಂದ ಗಾಯಗೊಳ್ಳಬಹುದು, ಪ್ರತಿಯೊಂದು ಕ್ರೀಡೆಗೂ ತನ್ನದೇ ಆದ ಡ್ರೆಸ್ ಕೋಡ್ ಇರುತ್ತೆ ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net