ಸ್ವಂತ ಕಂಪನಿಯಲ್ಲೇ ಡೆಲಿವರಿ ಬಾಯ್​ ಕೆಲಸ ಮಾಡಿದ ಸಿಇಒ; ಮಾರ್ಕೆಟಿಂಗ್​ ಗಿಮಿಕ್​ ಎಂದ ನೆಟ್ಟಿಗರು | Viral Video

Untitled-design-2024-10-05T173826.317
Published on

ಚಂಡೀಗಢ: ಆನ್​ಲೈನ್​ನಲ್ಲಿ ಫುಡ್​ ಆರ್ಡರ್​​ ಮಾಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಅದು ಬ್ಯಾಚುಲರ್​ ಲೈಫ್​, ವಿಭಕ್ತ ಕುಟುಂಬ, ವರ್ಕಿಂಗ್​​ ಪೇರೆಂಟ್ ಹೀಗೆ ಹಲವು ಕಾರಣಗಳಿರಬಹುದು. ಆನ್​ಲೈನ್​ನಲ್ಲಿ ಪುಡ್​ ಆರ್ಡರ್​ ಆ್ಯಪ್​​ ಝೊಮಾಟೊ ಯಾರಿಗೆ ಗೊತ್ತಿಲ್ಲ ಹೇಳಿ. ಈ ಕಂಪನಿಯ ಸಿಇಒ ದೀಪಿಂದರ್ ಗೋಯಲ್​ ಮತ್ತು ಅವರ ಪತ್ನಿ ಗ್ರೀಸಿಯಾ ಮುನೋಜ್​​ ಅವರು ಫೋಟೋ ಮತ್ತು ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ (Viral Video) ಆಗಿವೆ.

ಸಿಇಒ ದೀಪಿಂದರ್​ ಗೋಯಲ್​ ಅವರೆ ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಒಂದೆರಡು ದಿನಗಳ ಹಿಂದೆ ಗ್ರೀಸಿಯಾ ಮುನೋಜ್​​ ಜತೆಗೂಡಿ ಆರ್ಡರ್​ಗಳನ್ನು ತಲುಪಿಸಲು ಹೊರಟ್ಟಿದ್ದು ಎಂಬ ಶೀರ್ಷಿಕೆಯಡಿ ಪೋಸ್ಟ್​ ಅನ್ನು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ದೀಪಿಂದರ್ ಗೋಯಲ್ ಮತ್ತು ಅವರ ಪತ್ನಿ, ಕಂಪನಿಯ ಟೀಶರ್ಟ್‌ಗಳನ್ನು ಧರಿಸಿ ಫುಡ್​ ಡೆಲಿವರಿಗೆ ಹೊರಟಿರುವುದನ್ನು ಕಾಣಬುಹುದಾಗಿದೆ. ಗ್ರಾಹಕರ ಜತೆ ದಂಪತಿ ಹರಟೆ ಹೊಡೆಯುತ್ತಿರುವ ದೃಶ್ಯಗಳನ್ನು ಕಾಣಬಹುದಾಗಿದೆ.

ಈ ಪೋಸ್ಟ್​ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ನಾನು ನಿಮ್ಮ ಕೆಲಸವನ್ನು ಮೆಚ್ಚುತ್ತೇನೆ ಮತ್ತು ಗೌರವಿಸುತ್ತೇನೆ, ಡೆಲಿವರಿ ಏಜೆಂಟ್‌ಗಳ ನೋವನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ, ಅವರ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ನೀವು ಕೆಲಸ ಮಾಡುತ್ತೀರಿ ಎಂದು ಭಾವಿಸುತ್ತೇವೆ, ಇದೆಲ್ಲ ಮಾರ್ಕೆಟಿಂಗ್​ ತಂತ್ರ ಎಂದು ಕಾಮೆಂಟ್​ ಮಾಡಿದ್ದಾರೆ. ಗೋಯಲ್ 2008ರಲ್ಲಿ ಝೊಮಾಟೊವನ್ನು ಸ್ಥಾಪಿಸಿದರು. ಫೋರ್ಬ್ಸ್ ಪ್ರಕಾರ ಅವರ ಪ್ರಸ್ತುತ ನಿವ್ವಳ ಮೌಲ್ಯವು $1.7 ಬಿಲಿಯನ್ ಎಂದು ಅಂದಾಜಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಅವರು ಮೆಕ್ಸಿಕನ್ ಮಾಡೆಲ್ ಗಿಯಾ ಗೋಯಲ್ ಅವರನ್ನು ವಿವಾಹವಾದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net