Cobra ವರ್ಸಸ್​​ Cobra.. 2 ಹಾವುಗಳ ನಡುವಿನ ಕಾದಾಟ; ಕೊನೆಯಲ್ಲಿ ಗೆದ್ದವರ್ಯಾರು? | Viral Video

Untitled design (32)
Published on

ಕಳೆದ ಕೆಲವು ದಿನಗಳಲ್ಲಿ ಹಾವುಗಳ ಕಾದಾಟದ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ( Viral Video) ಆಗಿವೆ. ಇತ್ತೀಚಿನ ದಿನಗಳಲ್ಲಿ ಕೇವಲ 4 ಅಡಿ ಉದ್ದದ ಹೆಬ್ಬಾವು ಒಂದು ಕಾಳಗದಲ್ಲಿ ರಾಜ ನಾಗರಹಾವನ್ನು ಸೋಲಿಸಿದ ಘಟನೆಯನ್ನೇ ತೆಗೆದುಕೊಳ್ಳಿ. ಇದೇ ರೀತಿಯ ಮತ್ತೊಂದು ವಿಡಿಯೋ ಸದ್ಯ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಎರಡು ನಾಗರಹಾವುಗಳು ಪರಸ್ಪರ ಜಗಳವಾಡುತ್ತಿರುವುದನ್ನು ಕಾಣಬಹುದು.

ವೈರಲ್​ ವಿಡಿಯೋದಲ್ಲಿ ಕೋಬ್ರಾ vs ಕೋಬ್ರಾ ನಡುವಿನ ಜಗಳವನ್ನು ನೋಡಬಹುದು. ಈ ವಿಡಿಯೋದ ಅಂತ್ಯವನ್ನು ನೋಡುವುದು ತುಂಬಾ ಆಸಕ್ತಿದಾಯಕವಾಗಿದೆ. ಎರಡು ನಾಗರಹಾವುಗಳು ತಮ್ಮ ಹೆಡೆಗಳನ್ನು ಹರಡಿ ಮತ್ತು ನಾಲಿಗೆಯನ್ನು ಸಿಳ್ಳೆ ಹೊಡೆಯುವ ಮೂಲಕ ಪರಸ್ಪರ ಸವಾಲು ಹಾಕುವುದರೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ ಮತ್ತು ನಂತರ ಇದ್ದಕ್ಕಿದ್ದಂತೆ ಅವು ಜಗಳವಾಡಲು ಪ್ರಾರಂಭಿಸುತ್ತವೆ. ನಂತರ ದೊಡ್ಡದಾಗಿ ಕಾಣುವ ನಾಗರಹಾವು ಚಿಕ್ಕದಾಗಿರುವ ನಾಗರಹಾವನ್ನು ಆವರಿಸುತ್ತದೆ.

ಅದನ್ನು ಸುತ್ತು ತಿರುಗಿಸಿದ ನಂತರ ದೊಡ್ಡ ನಾಗರಹಾವು ಚಿಕ್ಕ ನಾಗರಹಾವನ್ನು ತನ್ನ ದೇಹದಿಂದ ರೋಲ್​ ಮಾಡುತ್ತದೆ. ಆದರೆ ಕೊನೆಗೆ ಇನ್ನೊಂದು ಹಾವು ತಾನು ದೊಡ್ಡ ಹಾವಿನೊಂದಿಗೆ ಅನಗತ್ಯವಾಗಿ ಜಗಳವಾಡುತ್ತಿದ್ದೇನೆಂದು ಅರಿತುಕೊಳ್ಳುತ್ತದೆ. ತಕ್ಷಣ ಭಯದಿಂದ ಅಲ್ಲಿಂದ ಓಡಿಹೋಗುತ್ತದೆ. ಇದರೊಂದಿಗೆ 15 ಸೆಕೆಂಡುಗಳ ಕ್ಲಿಪ್ ಮುಕ್ತಾಯವಾಗುತ್ತದೆ.

ಇದುವರೆಗೂ ಈ ವೈರಲ್​ ವಿಡಿಯೋವನ್ನು 34 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ನಾಗರಹಾವುಗಳು ತಮ್ಮ ವಿಷದಿಂದ ಪರಸ್ಪರ ವಿಷ ಸೇವಿಸಬಹುದೇ ಅಥವಾ ಅವು ಬದುಕಬಲ್ಲವೇ?, ಪಾಪ ಬಡಪಾಯಿ ಭಯದಿಂದ ಓಡಿಹೋಯಿತು ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net