ನನಗೆ ಕಸ ಕೊಡಿ ಎಂದು ಅಳುತ್ತಿರುವ ಡಸ್ಟ್​ಬಿನ್​​​; Viral Video ನೋಡಿ ನೆಟ್ಟಿಗರು ಶಾಕ್​​

Untitled design - 2024-12-14T122151.656
Published on

ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹಲವು ವಿಡಿಯೋಗಳು ವೈರಲ್​ ಆಗುತ್ತಿರುತ್ತವೆ. ಹಲವು ವಿಡಿಯೋಗಳು ಜನರನ್ನು ಆಕರ್ಷಿಸುತ್ತದೆ. ಅದೇ ರೀತಿಯ ವಿಡಿಯೋವೊಂದು ಸದ್ಯ ಜಾಲತಾಣದಲ್ಲಿ ಹರಿದಾಡುತ್ತಿದ್ದು(Viral Video). ವಿಡಿಯೋದಲ್ಲಿ ಡಸ್ಟ್​​ಬಿನ್​​​ ಜನರ ಬಳಿಗೆ ಹೋಗಿ ಕಸ ಕೇಳುತ್ತಿದೆ. ಡಸ್ಟ್​ಬಿನ್​​ ವರ್ತಿಸುವ ರೀತಿ ನೋಡಿ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಹಾಂಗ್​​ಕಾಂಗ್​​ನಿಂದ ಬಂದಿದೆ ಎನ್ನಲಾಗಿದೆ.

ವೈರಲ್​ ವಿಡಿಯೋದಲ್ಲಿ ಚಲಿಸುವ ಡಸ್ಟ್​​ಬಿನ್​​​ ಜನರ ಬಳಿಗೆ ಹೋಗಿ ಕಸ ಕೇಳುವುದನ್ನು ನೋಡಬಹುದು. ಈ ​ ಸ್ವಯಂಚಾಲಿತ ಡಸ್ಟ್​ಬಿನ್​​​ ಯಂತ್ರವು ಚಕ್ರವನ್ನು ಹೊಂದಿದೆ. ಅದು ಚಲಿಸುತ್ತಾ ಜನರ ಬಳಿಗೆ ಹೋಗಿ ನನಗೆ ಕಸ ಕೊಡಿ ತಿನ್ನಬೇಕು.. ಹತ್ತಿರದಲ್ಲಿ ಕಸವಿದೆಯೇ ಎಂದು ಕೇಳುತ್ತಿದೆ.

ಕೆಲವು ಮಹಿಳೆಯರ ಮುಂದೆ ಡಸ್ಟ್​ಬಿನ್​ ಹೋಗಿ ನಿಂತ ಕ್ಷಣ.. ಒಬ್ಬ ಮಹಿಳೆ ಕಸ ಹಾಕುವುದನ್ನು ಕಾಣಬಹುದು. ಕಸ ಒಳಗೆ ಹೋದ ತಕ್ಷಣ ಜೋರಾಗಿ ನಗುತ್ತಾ ಯಮ್ಮ್...ಯಮ್ಮ್ಮ್ ಎಂಬ ಶಬ್ದಗಳು ಕೇಳಿ ಬರುವುದನ್ನು ನೀವು ಕೇಳಬಹುದು. ವಿಡಿಯೋದಲ್ಲಿ ಡಸ್ಟ್​ಬಿನ್​ ನೋಡಲು ಅನೇಕ ಜನರು ನಿಂತಿರುವುದನ್ನು ನೋಡಬಹುದು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. 50 ವರ್ಷಗಳ ನಂತರ ಇಂತಹ ವಿಷಯಗಳನ್ನು ಭಾರತದಲ್ಲಿಯೂ ಕಾಣಬಹುದು, ಉಫ್ ಇದು ತುಂಬಾ ಮುದ್ದಾಗಿದೆ, ಭಾರತಕ್ಕೆ ಬನ್ನಿ ಹಬೀಬಿ ನಿಮಗೆ ರಾಜಮರ್ಯಾದೆ ಸಿಗುತ್ತದೆ ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net