ಸ್ಮಶಾನದಲ್ಲಿ ಕುಳಿತು ಬಿರಿಯಾನಿ ಆರ್ಡರ್ ಮಾಡಿದ ಮಹಿಳೆ​! ಗೇಟ್​ ಬಳಿ ಬಂದ ಡೆಲಿವರಿ ಬಾಯ್​ಗೆ ಕಾದಿತ್ತು ಶಾಕ್​... | Viral Video

ವೈರಲ್ ವಿಡಿಯೋ ದೃಶ್ಯ
ವೈರಲ್ ವಿಡಿಯೋ ದೃಶ್ಯ
Published on

ಪ್ರಮುಖ ಮುಖ್ಯಾಂಶಗಳು

  • ಸ್ಮಶಾನದಲ್ಲಿ ಕುಳಿತು ಬಿರಿಯಾನಿ ಆರ್ಡರ್​ ಮಾಡಿದ ಮಹಿಳೆ
  • ಫುಡ್​ ಡೆಲಿವರಿಗೆ ಹೋದ ಯುವಕ ಫುಲ್​ ಗಾಬರಿ
  • ಗೇಟ್​ ಬಳಿ ಹೋದ ಡೆಲಿವರಿ ಬಾಯ್ ಮುಂದೆ ಮಾಡಿದ್ದೇನು? ​
Viral Video: ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್​, ವಿಡಿಯೋಗಳನ್ನು ಮಾಡೋದು, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಮೂಲಕ ಅಧಿಕ ಲೈಕ್ಸ್​, ವೀವ್ಸ್​, ಫಾಲೋವರ್ಸ್​ ಪಡೆಯೋದು ಹಲವರಿಗೆ ಹುಚ್ಚಾಟ ಆಗೋಗಿದೆ. ಇದರಿಂದ ಅನ್ಯರಿಗೆ ಕಿರಿಕಿರಿ, ಸಮಸ್ಯೆ ಕೆಲವೊಮ್ಮೆ ಪ್ರಾಣಕ್ಕೆ ಕುತ್ತು ತರುತ್ತದೆ ಎಂಬುದರ ಕಿಂಚಿತ್ತು ಅರಿವು ಅಂಥವರಿಗೆ ಇರುವುದಿಲ್ಲ ಎಂಬುದೇ ನಿಜಕ್ಕೂ ದೊಡ್ಡ ದುರಂತ.

ವೀವ್ಸ್​, ಲೈಕ್ಸ್ ಹುಚ್ಚು!

ಕೆಲವರು ವೀವ್ಸ್​ ಹುಚ್ಚಿನಿಂದ ಯಾವ ಹಂತಕ್ಕೆ ಹೋಗ್ತಾರೆ ಎಂಬುದನ್ನು ಊಹಿಸಲು ಅಸಾಧ್ಯ. ಅದಕ್ಕೆ ಉತ್ತಮ ಉದಾಹರಣೆ, ಇತ್ತೀಚೆಗಷ್ಟೇ, ಕೇರಳದಲ್ಲಿ ಯುವತಿಯೊಬ್ಬಳು ಲೈಕ್ಸ್​, ನೆಟ್ಟಿಗರ ಗಮನ ಸೆಳೆಯಲು ತನಗೆ ಬಸ್ಸಿನಲ್ಲಿ ಅಸಭ್ಯವಾಗಿ ಒಬ್ಬ ವ್ಯಕ್ತಿ ವರ್ತಿಸಿದ ಎಂದು ಸುಖಾಸುಮ್ಮನೆ ವಿಡಿಯೋ ಮಾಡಿ, ಅದನ್ನು ಹರಿಬಿಟ್ಟು ಇಂದು ಆತನ ದುರಂತ ಅಂತ್ಯಕ್ಕೆ ಕಾರಣವಾಗಿದ್ದಾಳೆ. ಸದ್ಯ ಇಲ್ಲೊಬ್ಬಳು ಮಹಿಳೆ ಕೂಡ ವೀವ್ಸ್​, ಲೈಕ್ಸ್ ಹಿಂದೆ ಹೋಗಿರುವುದು ಆಕೆ ಮಾಡಿದ ಬಿರಿಯಾನಿ ಆರ್ಡರ್​ ಮೂಲಕ ಸ್ಪಷ್ಟವಾಗಿದೆ.
ಸ್ಮಶಾನದಲ್ಲಿ ಕುಳಿತು ಬಿರಿಯಾನಿ ಆರ್ಡರ್ ಮಾಡಿದ ಮಹಿಳೆಗೆ, ಊಟ ತಲುಪಿಸಲು ಆಕೆಯಿದ್ದ ಸ್ಥಳಕ್ಕೆ ಬಂದ ಡೆಲಿವರಿ ಬಾಯ್​ಗೆ ಆಗಿದ್ದು ಮಾತ್ರ ಭಯಾನಕ ಅನುಭವ. ಕಾರಣ, ಡೆಲಿವರಿಗೆ ಆತ ನಿಂತಿದ್ದು ಸ್ಮಶಾನದ ಗೇಟ್​ ಮುಂಭಾಗದಲ್ಲಿ. ಒಂದು ನಿಮಿಷ ಏನು ಮಾಡಬೇಕೆಂದು ತಿಳಿಯದೆ, ಭಯದಲ್ಲಿ ಒಳಗೆ ಹೋಗದ ಆತ, ಆರ್ಡರ್​ ಮಾಡಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದಾನೆ. ಆಗ, ಆಕೆ ಆಡಿದ ಮಾತುಗಳನ್ನು ಕೇಳಿ ಡೆಲಿವರಿ ಬಾಯ್​ಗೆ ಬೆವರಿಳಿದಿದೆ.

ಇಬ್ಬರ ನಡುವಿನ ಸಂಭಾಷಣೆ ಏನು?

ಡೆಲಿವರಿ ಬಾಯ್​: ಮೇಡಂ, ನಾನು ಕೊಟ್ಟಿರುವ ಲೋಕೋಷನ್ ಅಲ್ಲಿದ್ದೀನಿ. ಈಗ ಎಲ್ಲಿಗೆ ಬರಬೇಕು?
ಮಹಿಳೆ: ನೇರವಾಗಿ ಬನ್ನಿ, ಅಲ್ಲಿ ನಾಯಿಯೊಂದು ಕುಳಿತಿದೆ. ಕಾಣಿಸುತ್ತ?
ಡೆಲಿವರಿ ಬಾಯ್​: ಮೇಡಂ, ಇದು ಸ್ಮಶಾನ.
ಮಹಿಳೆ: ನಿಮಗೆ ನಾಯಿ ಕಾಣಿಸ್ತಾ? ಹಾಗೆ ನೇರವಾಗಿ ಸ್ಮಶಾನದ ಗೇಟ್ ಒಳಗೆ ಬನ್ನಿ
ಡೆಲಿವರಿ ಬಾಯ್​: ನೀವು ಸ್ಮಶಾನದಿಂದ ಫುಡ್​ ಆರ್ಡರ್ ಮಾಡಿದ್ದೀರಾ? ನೀವೇ ಹೊರಬಂದು ತೆಗೆದುಕೊಳ್ಳಿ. ಇಲ್ಲವಾದ್ರೆ ಆರ್ಡರ್​ ಕ್ಯಾನ್ಸಲ್​ ಮಾಡ್ತೀನಿ
ಮಹಿಳೆ: ಭಯಪಡಬೇಡಿ, ನಾನಿಲ್ಲೇ ಇದ್ದೀನಿ. ನಿಮಗೆ ದೆವ್ವಗಳು ಎಂದ್ರೆ ಭಯವೇ? ಎಂದು ನಗುತ್ತಾ ಕೇಳುತ್ತಾಳೆ.
ಸ್ಮಶಾನದಿಂದ ಮಾತನಾಡುತ್ತಿರುವ ಮಹಿಳೆಯ ಧ್ವನಿಯಲ್ಲಿ ಯಾವುದೇ ಭಯವಿಲ್ಲ ಹಾಗೂ ತುಂಬಾ ಶಾಂತವಾಗಿ ಮಾತನಾಡುತ್ತಿರುವುದು ಸದ್ಯ ಹಲವರನ್ನು ಬೆದರಿಸಿದೆ. ಕೆಲವರು ಈ ವಿಡಿಯೋ ಸುಮ್ಮನೆ ಭಯ ಹುಟ್ಟಿಸಲು ಮಾಡಿರುವುದೇ ಅಥವಾ ಸ್ನೇಹಿತರ ಜತೆಗೂಡಿ ವೀವ್ಸ್​ ಹುಚ್ಚಾಟಕ್ಕೆ ಹೀಗೆ ಮಾಡಿದಳೇ? ಎಂದು ಕೇಳಿದ್ದಾರೆ. ಸದ್ಯ ಈ ವಿಡಿಯೋ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net