

ಇಸ್ಲಾಮಾಬಾದ್: ಕಷ್ಟಪಟ್ಟು ದುಡಿದ ಹಣವನ್ನು ಅಥವಾ ಪೈಸೆ ಪೈಸೆ ಕೂಡಿಟ್ಟ ಹಣವನ್ನು ವ್ಯರ್ಥ ಮಾಡುವುದು ಸುಲಭದ ಮಾತಲ್ಲ. ಯಾವುದೇ ಸಂತೋಷದ ಕ್ಷಣವಿದ್ದರೂ ಅದು ಮಗನ ಮದುವೆ ಅಥವಾ ಮಗಳ ಮದುವೆಯಾದರೂ ಅವಶ್ಯಕತೆ ಇರವಷ್ಟು ಹಣವನ್ನು ವ್ಯಯಿಸಬೇಕು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್(Viral Video) ಆಗುತ್ತಿದೆ. ಅದರಲ್ಲಿ ವಿಮಾನದಿಂದ ಹಣವನ್ನು ಎರಚುತ್ತಿರುವುದನ್ನು ನೋಡಬಹುದು.
ವೈರಲ್ ವಿಡಿಯೋದಲ್ಲಿ ಮದುವೆ ಮನೆಯ ಮೇಲೆ ವಿಮಾನವೊಂದು ಹಣ ಹಾರಿಸುತ್ತಿರುವುದು ಕಂಡು ಬಂದಿದೆ. ಮದುವೆಯ ಅತಿಥಿಗಳು ಮತ್ತು ಕೆಳಗೆ ನಿಂತಿರುವ ಇತರ ಜನರು ಹಣ ಹಾರುವುದನ್ನು ನೋಡಲು ಕಾಯುತ್ತಿರುವುದನ್ನು ನೋಡಬಹುದು. ಕೆಲವರು ಆ ಸಮಯದಲ್ಲಿ ಬಹಳ ಉತ್ಸಾಹದಿಂದ ಡ್ರಮ್ ಬಾರಿಸುತ್ತಿದ್ದಾರೆ. ಸುಮಾರು 70 ಸೆಕೆಂಡುಗಳ ಈ ವಿಡಿಯೋದಲ್ಲಿ ಗಾಳಿಯಲ್ಲಿ ಹಾರುವ ವಿಮಾನವು ಹಣದ ಮಳೆಯ ನಂತರ ಹೊರಡುತ್ತದೆ.
ಪ್ರತಿಯೊಬ್ಬರೂ ತಮ್ಮ ವರ್ಷಗಳ ಗಳಿಕೆಯನ್ನು ಈ ರೀತಿ ವಿಮಾನದಲ್ಲಿ ಕಳೆಯಲು ಸಾಧ್ಯವಿಲ್ಲ. ತಂದೆಯೊಬ್ಬ ತನ್ನ ಮಗನ ಮದುವೆಗೆ ವಿಮಾನ ಕಾಯ್ದಿರಿಸುವ ಮೂಲಕ ತನ್ನ ಹಣವನ್ನು ವ್ಯರ್ಥ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋ ಪಾಕಿಸ್ತಾನದ್ದು ಎನ್ನಲಾಗಿದೆ.
ವಿಡಿಯೋ ನೋಡಿದ ಅನೇಕರು ಪ್ರತಿಕ್ರಿಯಿಸಿದ್ದಾಎರ. ಹೆಚ್ಚಿನ ಜನರು ಕುರುಡಾಗಿ ಈ ರೀತಿ ಖರ್ಚು ಮಾಡುತ್ತಾರೆ, ಬಡವರಗಿ ದಾನ ಮಾಡಬಹುದಿತ್ತು, ಇದೊಂದು ಶೋ-ಆಫ್, ವ್ಯರ್ಥ ಖರ್ಚು, ಕಪ್ಪುಹಣವನ್ನು ಬಿಳಿಯಾಗಿ ಪರಿವರ್ತಿಸುವ ಸಾಧನ ಮದುವೆ, ಐಎಂಎಫ್ ಪಾಕಿಸ್ತಾನಕ್ಕೆ ನೀಡುತ್ತಿರುವ ಧನಸಹಾಯವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)