ಇಸ್ಲಾಂ ಧರ್ಮದ ದೂಷಣೆ; ಹುಡುಗಿ ಪ್ರಶ್ನೆಗೆ Zakir Naik ಕಿಡಿ

Untitled-design-2024-10-07T181305.232
Published on

ಇಸ್ಲಾಮಾಬಾದ್: ಭಾರತದ ಮೋಸ್ಟ್ ವಾಂಟೆಡ್ ಇಸ್ಲಾಮಿಕ್ ಬೋಧಕ ಜಾಕಿರ್ ನಾಯ್ಕ್ ಅಕ್ಟೋಬರ್ 28ರವರೆಗೆ ಪಾಕಿಸ್ತಾನ ಪ್ರವಾಸದಲ್ಲಿದ್ದಾನೆ. ಜಾಕಿರ್ ನಾಯ್ಕ್(Zakir Naik) ಮತ್ತು ಹುಡುಗಿಯೊಬ್ಬಳ ನಡುವೆ ನಡೆಯುವ ಮಾತಿನ ಘರ್ಷಣೆಯು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಕಾರ್ಯಕ್ರಮದ ವಿಡಿಯೋ ವೈರಲ್​ ಆಗುತ್ತಿದೆ. ವಿಡಿಯೋದಲ್ಲಿ ಇಸ್ಲಾಮಿಕ್ ಸಮಾಜಗಳಲ್ಲಿ ಇಸ್ಲಾಮಿಕ್ ಸಮಾಜಗಳಲ್ಲಿ ಪೀಡೋಫಿಲಿಯಾ ಸೇರಿದಂತೆ ಹಲವು ಸಾಮಾಜಿಕ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವುದನ್ನು ನೋಡಬಹುದು. ಇದಕ್ಕೆ ಉತ್ತರಿಸದೆ ಜಾಕಿರ್​ ನಾಯ್ಕ್​ ಪ್ರಶ್ನಿಸಿದ ಹುಡುಗಿ ವಿರುದ್ಧ ಕೆಂಡಾಮಂಡಲವಾಗುತ್ತಾನೆ.

ಪಶ್ತೂನ್ ಹುಡುಗಿಯೊಬ್ಬಳು, ನಾನು ಎಲ್ಲಿಂದ ಬಂದಿದ್ದೇನೆ, ಅದು ಸಂಪೂರ್ಣವಾಗಿ ಇಸ್ಲಾಮಿಕ್ ಸಮಾಜವಾಗಿದೆ. ಅಲ್ಲಿ ಮಹಿಳೆಯರು ಯಾವುದೇ ಕಾರಣವಿಲ್ಲದೆ ಮನೆಯಿಂದ ಹೊರಗೆ ಬರುವಂತಿಲ್ಲ. ಪ್ರತಿ ಜುಮ್ಮಾ (ಶುಕ್ರವಾರ) ತಬ್ಲೀಘಿ ಜಮಾತ್‌ನ ಜನರ ಹೇಳಿಕೆ ಇರುತ್ತದೆ. ಸ್ವಲ್ಪ ಸಮಯದ ಹಿಂದೆ ದೊಡ್ಡ ತಬ್ಲೀಘಿ ಇಜ್ತಿಮಾ ಕೂಡ ಅಲ್ಲಿ ನಡೆಯಿತು. ನಮ್ಮ ಪ್ರದೇಶದ ಜನರು ತುಂಬಾ ಧಾರ್ಮಿಕರು. ಆದರೆ ಮಾದಕ ವ್ಯಸನ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ (ಪೀಡೋಫಿಲ್), ಬಡ್ಡಿ ಮುಂತಾದ ದುಶ್ಚಟಗಳು ಅಲ್ಲಿ ಪ್ರಚಲಿತವಾಗಿರಲು ಕಾರಣ ಏನಿರಬಹುದು. ಅಲ್ಲಿ ಸಮಾಜ ಏಕೆ ಛಿದ್ರವಾಗುತ್ತಿದೆ? ಮಕ್ಕಳನ್ನು ಚುಡಾಯಿಸುವವರಿಗೆ ಉಲೇಮಾಗಳು ಏಕೆ ವಿವರಿಸುವುದಿಲ್ಲ? ಎಂದು ಪ್ರಶ್ನಿಸಿದಳು.

ಹುಡುಗಿಯ ಈ ಪ್ರಶ್ನೆಗೆ ಸಿಟ್ಟಿಗೆದ್ದ ಜಾಕೀರ್ ನಾಯ್ಕ್, 'ನೀವು ಕೇಳಿದ ಪ್ರಶ್ನೆಯಲ್ಲಿ ವೈರುಧ್ಯವಿದೆ. ಇಸ್ಲಾಮಿಕ್ ಪರಿಸರದಲ್ಲಿ ಯಾರೂ ಶಿಶುಕಾಮಿಯಾಗಲು ಸಾಧ್ಯವಿಲ್ಲ. ಇದು ಸಾಧ್ಯವೇ ಇಲ್ಲ. ಆದ್ದರಿಂದ ನಿಮ್ಮ ಪ್ರಶ್ನೆ ತಪ್ಪಾಗಿದೆ. ಇನ್ನೊಬ್ಬರ ವಿರುದ್ಧ ಆರೋಪ ಮಾಡುವ ಮೊದಲು ನೀವು 10 ಬಾರಿ ಯೋಚಿಸಬೇಕು ಎಂದು ಹೇಳಿದನು.

ತನ್ನ ಪ್ರಶ್ನೆಯನ್ನು ಹುಡುಗಿ ಸಮರ್ಥಿಸಿಕೊಂಡಾಗ, ನೀವು ಇಸ್ಲಾಂ ಧರ್ಮವನ್ನು ದೂಷಿಸುತ್ತಿದ್ದೀರಿ ಮತ್ತು ಕ್ಷಮೆ ಕೇಳಲು ಸಹ ಸಿದ್ಧರಿಲ್ಲ. ನೀವು ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಬೇಕು ಎಂದು ಜಾಕೀರ್ ನಾಯ್ಕ್ ಹೇಳಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಒಳಗಾಗಿದೆ.

ಪ್ರಧಾನಿ ಶಹಬಾಜ್ ಷರೀಫ್ ಅವರ ಸರ್ಕಾರದ ಆಹ್ವಾನದ ಮೇರೆಗೆ ಇಸ್ಲಾಮಿಕ್ ಭಾಷಣ ಮಾಡಲು ಜಾಕಿರ್ ನಾಯ್ಕ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಪಾಕಿಸ್ತಾನದಲ್ಲಿ ವಾಸಿಸುವ ಮೂಲಕ ಸ್ವರ್ಗಕ್ಕೆ ಹೋಗುವ ಸಾಧ್ಯತೆಗಳು ಅಮೆರಿಕಕ್ಕಿಂತ ನೂರಾರು ಪಟ್ಟು ಹೆಚ್ಚು ಎಂದು ಹೇಳಿದ್ದಾರೆ. ಇದಷ್ಟೇ ಅಲ್ಲ ಜಾಕಿರ್ ನಾಯ್ಕ್ ಸಾಕಷ್ಟು ವಿವಾದಾತ್ಮಕ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net