VIDEO| ಕರೊನಾ ವೈರಸ್​ ಹಾವಳಿಯಿಂದ ರಕ್ಷಣೆ ಪಡೆಯುವ ಸಂದೇಶ ಹೊತ್ತ ಸ್ಯಾಂಡ್​ ವೈಪರ್​ ದೃಶ್ಯ ವೈರಲ್​

sand vipar
Published on

ಕರೊನಾ ವೈರಸ್ ಹಾವಳಿ ಸಂದರ್ಭಕ್ಕೆ ಪರಿಣಾಮ ಬೀರುವ ಮರಳು ಹಾವು (ಸ್ಯಾಂಡ್​ ವೈಪರ್​) ವಿಡಿಯೋ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಹಾವು ಮರಳಿನಲ್ಲಿ ಅಡಗಿಕೊಳ್ಳುವ ಈ ವಿಡಿಯೋವನ್ನು ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಪ್ರತಿಕ್ರಿಯೆ ಕೂಡ ನೀಡಿದ್ದಾರೆ.

ಕರೊನಾ ವೈರಸ್​ ಹಾವಳಿ ಹಿನ್ನೆಲೆಯಲ್ಲಿ ಎಲ್ಲರೂ ಸುರಕ್ಷಿತವಾಗಿ ಮನೆಯಲ್ಲಿ ಇರಿ ಎಂಬ ಸಂದೇಶವನ್ನು ಈ ವಿಡಿಯೋ ಹೇಳುತ್ತದೆ. ಹೀಗಾಗಿ ಹೆಚ್ಚು ವೈರಲ್​ ಆಗಿದೆ.

ಭಾರತೀಯ ಅರಣ್ಯ ಸೇವೆ ಅಧಿಕಾರಿ (ಐಎಎಸ್​) ಪರ್ವೀನ್ ಕಸ್ವಾನ್ ಅವರು ಈ ವಿಡಿಯೋ ಅಪ್​ಲೋಡ್​ ಮಾಡಿದ್ದಾರೆ.

ಸ್ಯಾಂಡ್​ ವೈಪರ್​ ಬೇಟೆಯಾಡಲು ಹೊಂಚು ಹಾಕಿ ಮರಳಿನಲ್ಲಿ ಅಡಗಿಕೊಳ್ಳುತ್ತದೆ. ಮನೆಯಲ್ಲೇ ನೀವು ಕೂಡ ಈ ರೀತಿ ಇರಿ ಎಂದು ಅವರು ಶೀರ್ಷಿಕೆ ಬರೆದು ವಿಡಿಯೋ ಅಪ್​ಲೋಡ್​ ಮಾಡಿದ್ದಾರೆ.

ಮರಳು ಹಾವು ಸ್ಪಲ್ಪ ದೂರ ಚಲಿಸುತ್ತದೆ. ನಂತರ ದಿಢೀರ್​ ಅಡಗಿಕೊಳ್ಳುತ್ತದೆ. ಮರಳಿನಲ್ಲಿ ಹುದುಗಿ ಅದು ಚಲಿಸುತ್ತಿರುತ್ತದೆ.

ಕೆಲವು ವರ್ಷಗಳ ಹಿಂದೆ ವಜ್ಯಜೀವಿ ಛಾಯಾಗ್ರಾಹಕ ಜೇವಿಯರ್​ ಅಜ್ನರ್​ ಅವರು ಇದನ್ನು ಚಿತ್ರೀಕರಿಸಿದ್ದರು. ಕರೊನಾ ವೈರಸ್​ ಹಾವಳಿ ಹಿನ್ನೆಲೆಯಲ್ಲಿ ಈ ವಿಡಿಯೋ ಈಗ ಮುನ್ನೆಲೆಗೆ ಬಂದಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net