

ಪೂರಿ ಆಕಾರ ರೌಂಡಾಗಿ ಇರಬೇಕು. ಹೀಗೆ ವೃತ್ತಾಕಾರದಲ್ಲಿ ಪೂರಿ ಲಟಿಸುವುದು ಒಂದು ಕೆಲ. ಬಾಲ್ಯದಿಂದಲೂ ತಾಯಿ ಮಾಡಿದ ಪೂರಿ-ಸಾಗು ತಿನ್ನುತ್ತಿರುವವರಿಗೆ ಇಂದಿಗೂ ಆ ರುಚಿ ಬೇರೆಲ್ಲಿಯೂ ಸಿಗುವುದಿಲ್ಲ. ರೌಂಡಾಗಿ ಪೂರಿ ಮಾಡಲು ಅನೇಕರಿಗೆ ಬರುವುದಿಲ್ಲ, ಅದರಲ್ಲೂ ಹುಡುಗರು ಪೂರಿ ಮಾಡುವುದು ಸ್ವಲ್ಪ ಕಷ್ಟ. ಆದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್(Viral Video) ಆಗುತ್ತಿದೆ. ಅದರಲ್ಲಿ ವ್ಯಕ್ತಿಯೊಬ್ಬ ದುಂಡಗಿನ ಪೂರಿ ಮಾಡುವುದು ಹೇಗೆ ಎಂಬುದನ್ನು ತೋರಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ವಿದ್ಯುತ್ ಇಂಡಕ್ಷನ್ ಸ್ಟೌವ್ ಮೇಲೆ ಪ್ಯಾನ್ ಇಟ್ಟು ಪೂರಿ ತಯಾರಿಸುವುದನ್ನು ಕಾಣಬಹುದು. ವಿಡಿಯೋದಲ್ಲಿ ಪೂರಿಗಳು ಈಗಾಗಲೇ ಪ್ಯಾನ್ ಒಳಗೆ ಕಾಣಿಸುತ್ತಿವೆ. ಅದೇ ಸಮಯದಲ್ಲಿ ಆ ವ್ಯಕ್ತಿಯು ಆ ದುಂಡಗಿನ ಪೂರಿಗಳನ್ನು ಮಾಡುವ ರಹಸ್ಯವನ್ನು ಸಹ ಬಹಿರಂಗಪಡಿಸಿದ್ದಾರೆ. ಆತ ಪೂರಿ ತಯಾರಿಸಲು ಹಿಟ್ಟನ್ನು ಬೆರೆಸಿದ ಅದೇ ಪಾತ್ರೆಯಲ್ಲಿ ಪೂರಿಗಳನ್ನು ಮಾಡಲು ಪ್ರಾರಂಭಿಸುತ್ತಾನೆ. ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ ಚೌಕದ ಮೇಲೆ ಇಡುತ್ತಾನೆ. ನಂತರ ಅವನು ಪಾತ್ರೆಯನ್ನು ಅದರ ಮೇಲೆ ಇಟ್ಟು ಗಟ್ಟಿಯಾಗಿ ಒತ್ತುತ್ತಾನೆ. ಈ ಸರಳ ಪ್ರಕ್ರಿಯೆಯಿಂದ ದುಂಡಗಿನ ಪೂರಿಗಳು ಸಿದ್ಧವಾಗಿವೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಜನರನ್ನು ಆಕರ್ಷಿಸುತ್ತಿದೆ. ಇದುವರೆಗೂ 1 ಕೋಟಿ 84 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ಹೇ ಬ್ರದರ್ ನಿಮ್ಮ ಮೆದುಳಿನಲ್ಲಿ ಇಂಥಾ ಐಡಿಯಾ ಎಲ್ಲಿಂದ ಬರುತ್ತದೆ, ನನಗೆ ಈ ಹ್ಯಾಕ್ ಬೇಕು, ಇದು ನಮಗೆ ಮೊದಲೇ ತಿಳಿದಿದೆ, ಸಹೋದರನಿಗೆ ಅದ್ಭುತ ಪ್ರತಿಭೆ ಇದೆ, ನಿಮಗೆ 21 ಗನ್ ಸೆಲ್ಯೂಟ್ ನೀಡಬೇಕಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.