800 ವರ್ಷಗಳಿಗಿಂತ ಹಳೆಯದಾದ ಕುತುಬ್ ಮಿನಾರ್ ನಿರ್ಮಾಣ ಹೇಗಿರಬಹುದು?; Viral ಆಯ್ತು AI Video

Untitled design (36)
Published on

ಕುತುಬ್ ಮಿನಾರ್ 833 ವರ್ಷಗಳ ಹಿಂದೆ ಪೂರ್ಣಗೊಂಡಿತು. ಇದರ ನಿರ್ಮಾಣವನ್ನು 1192ರಲ್ಲಿ ಕುತುಬುದ್ದೀನ್ ಐಬಕ್ ಪ್ರಾರಂಭಿಸಿದರು. ನಂತರ ಇದನ್ನು ಅವರ ಉತ್ತರಾಧಿಕಾರಿ ಇಲ್ತುಮಿಶ್ ಮತ್ತು ಅವರ ನಂತರ ಫಿರೋಜ್ ಷಾ ತುಘಲಕ್ ಪೂರ್ಣಗೊಳಿಸಿದರು. ಈ ಕಟ್ಟಡದ ಎತ್ತರ ಸುಮಾರು 240 ಅಡಿ (73 ಮೀಟರ್). ಇದನ್ನು ನಿರ್ಮಿಸಲು ಕೆಂಪು ಮರಳುಗಲ್ಲು ಮತ್ತು ಅಮೃತಶಿಲೆಯನ್ನು ಬಳಸಲಾಗಿದೆ.(Viral Video)

ದೆಹಲಿಯ ಮೆಹ್ರೌಲಿಯಲ್ಲಿರುವ ಕುತುಬ್ ಮಿನಾರ್ ಹಿಂದಿನ ಘಟನೆಗಳಿಗೆ ಸಾಕ್ಷಿಯಾಗಿದೆ. ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣದಲ್ಲಿಯೂ ಸೇರಿಸಲಾಗಿದೆ. ಕುತುಬ್ ಮಿನಾರ್ ಬಗ್ಗೆ ತುಂಬಾ ತಿಳಿದಿದ್ದೀರಿ ಆದರೆ ಅದರ ನಿರ್ಮಾಣದ AI ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಈ AI ವಿಡಿಯೋ '1192ರಲ್ಲಿ ಕುತುಬ್ ಮಿನಾರ್ ನಿರ್ಮಾಣದ ಸಮಯದಲ್ಲಿ ಕಾರ್ಮಿಕನಾಗಿದ್ದನ್ನು ಕಲ್ಪಿಸಿಕೊಳ್ಳಿ' ಎಂದು ಹೇಳುವ ಪದಗಳ ಮೂಲಕ ಪ್ರಾರಂಭವಾಗುತ್ತದೆ. ಈ ಕ್ಲಿಪ್‌ನಲ್ಲಿ ಕಾರ್ಮಿಕರು AI ಸಹಾಯದಿಂದ ಕಲ್ಲುಗಳನ್ನು ಒಡೆಯುವುದನ್ನು ಸಹ ತೋರಿಸಲಾಗಿದೆ. ಇದಲ್ಲದೆ ಈ ಕೆಲಸದಲ್ಲಿ ಆನೆಗಳು ಮತ್ತು ಹೇಸರಗತ್ತೆಗಳು ಸರಕುಗಳನ್ನು ಸಾಗಿಸುವುದನ್ನು ಸಹ ಕಾಣಬಹುದು. ಕುತುಬ್ ಮಿನಾರ್ ನಿರ್ಮಾಣದಲ್ಲಿ ತೊಡಗಿರುವ ನೂರಾರು ಕಾರ್ಮಿಕರು AI ಸಹಾಯದಿಂದ ಕೆಲಸ ಮಾಡುವುದನ್ನು ತೋರಿಸಲಾಗಿದೆ.

ಈ AI ವಿಡಿಯೋದಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆದಾರರು ನಕ್ಷೆಯನ್ನು ನೋಡುತ್ತಿರುವುದನ್ನು ತೋರಿಸಲಾಗಿದೆ ಮತ್ತು ಕಾರ್ಮಿಕರು ರಾತ್ರಿಯೂ ಸಹ ಕೆಲಸ ಮಾಡುವುದನ್ನು ತೋರಿಸಲಾಗಿದೆ. ಕ್ಲಿಪ್‌ನ ಕೊನೆಯಲ್ಲಿ ಕುತುಬ್ ಮಿನಾರ್ ಬಹುತೇಕ ಪೂರ್ಣಗೊಂಡಂತೆ ಕಾಣುವ ರಾತ್ರಿಯ ದೃಶ್ಯವನ್ನು ಕಾಣಬಹುದು. ಇದರೊಂದಿಗೆ ಸುಮಾರು 70 ಸೆಕೆಂಡುಗಳ ವಿಡಿಯೋ ಕೊನೆಗೊಳ್ಳುತ್ತದೆ.

ಈ ವಿಡಿಯೋವನ್ನು ಇದುವರೆಗೂ 12 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ಅದ್ಭುತ! ನಿಮ್ಮ ನೆಚ್ಚಿನ AI ಪ್ಲಾಟ್‌ಫಾರ್ಮ್‌ಗಳು ಯಾವುವು?, ಈ ವಿಡಿಯೋವನ್ನು ರಚಿಸಲು ಯಾವ AI ಪರಿಕರವನ್ನು ಬಳಸಲಾಗಿದೆ, ಅತ್ಯುತ್ತಮ ಕೆಲಸ, ನಮ್ಮ ದೆಹಲಿಯ ಕುತುಬ್ ಮಿನಾರ್ ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net