ದುಬೈನ ದುಬಾರಿ ಚಹಾದ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ; ಈ ‘ಟೀ’ ಖರೀದಿಗೆ EMI ಮೊರೆ ಹೋಗಲೆಬೇಕು | Dubai

Untitled design - 2024-11-25T183822.416
Published on

ದುಬೈ: ಪ್ರಪಂಚದಲ್ಲಿ ಒಂದೊಂದು ವಸ್ತುವಿಗೆ ಒಂದೊಂದು ಬೆಲೆ ಇರುತ್ತದೆ. ಯಾವ ವಸ್ತುವಿಗೆ ಎಷ್ಟು ಬೆಲೆ ಕೊಡಬಹುದು ಎಂದು ಜನರು ಸುಲಭವಾಗು ಊಹಿಸುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗುತ್ತಿದೆ. ಈ ವಿಡಿಯೋದಲ್ಲಿನ ಮಾಹಿತಿಯು ಚಹಾ ಪ್ರಿಯರ ಹುಬ್ಬೆರುವಂತೆ ಮಾಡಿದೆ. ಹೌದು ದುಬೈನ(Dubai) ಕೆಫೆಯೊಂದರಲ್ಲಿನ ಚಹಾದ ಮೊತ್ತ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.

ವೈರಲ್​ ವಿಡಿಯೋದಲ್ಲಿ ಬೋಹೊ ಕೆಫೆ ಮತ್ತು ರೆಸ್ಟೋರೆಂಟ್‌ ನೀವು ವಿಶ್ವದ ಅತ್ಯಂತ ಐಷಾರಾಮಿ ಬೆಲೆಯ ಚಹಾವನ್ನು ಕುಡಿಯಬಹುದಾದ ಏಕೈಕ ಸ್ಥಳವಾಗಿದೆ ಎಂದು ವಿವರಿಸುತ್ತಾರೆ. ಈ ಚಹಾವನ್ನು ಬಡಿಸಲು, ಬೆಳ್ಳಿಯಿಂದ ಮಾಡಿದ ತಟ್ಟೆಗಳು ಮತ್ತು ಕಪ್​​ಗಳನ್ನು ಬಳಸಲಾಗುತ್ತದೆ. ಕಪ್‌ನಲ್ಲಿ ಬರುವ ಚಹಾವನ್ನು 24-ಕ್ಯಾರಟ್ ಚಿನ್ನದ ಹಾಳೆಯಿಂದ ಮುಚ್ಚಲಾಗುತ್ತದೆ. ಈ ಚಹಾದೊಂದಿಗೆ ನೀವು ಚಿನ್ನದ ಧೂಳಿನ ಕ್ರೋಸೆಂಟ್ ಅನ್ನು ಸಹ ತಿನ್ನಬಹುದು. ಈ ಕೆಫೆಯಲ್ಲಿ ಚಿನ್ನದ ಚಹಾದ ಬೆಲೆ 1 ಲಕ್ಷ ರೂಪಾಯಿ ಎಂದು ತೋರಿಸುವುದನ್ನು ನೀವು ನೋಡಬಹುದು.

ಈ ಕೆಫೆಯಲ್ಲಿ ಚಹಾ ಕುಡಿಯುವ ವಿಶೇಷತೆಯೆಂದರೆ ಚಹಾದೊಂದಿಗೆ ಬರುವ ಬೆಳ್ಳಿಯ ಕಪ್ ಅನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಬಹುದು. ನಿಮಗೆ ಚಹಾ ಇಷ್ಟವಿಲ್ಲದಿದ್ದರೆ ನೀವು ಅದೇ ದರದಲ್ಲಿ ಇತರ ಕಾಫಿಗಳನ್ನು ಆರ್ಡರ್ ಮಾಡಬಹುದು ಎಂದು ಹೇಳುತ್ತಾರೆ. ಬೋಹೊ ಕೆಫೆಯ 'ಗೋಲ್ಡ್ ಕ್ಯಾರೆಟ್​​​​’ ಚಹಾವು ಭಾರತೀಯ ಮೂಲದ ಸುಚೇತಾ ಶರ್ಮಾ ಅವರ ಮೆದುಳಿನ ಕೂಸು. DIFCನಲ್ಲಿರುವ ಎಮಿರೇಟ್ಸ್ ಫೈನಾನ್ಶಿಯಲ್ ಟವರ್ಸ್‌ನಲ್ಲಿ ಕೆಫೆಯನ್ನು ಅಕ್ಟೋಬರ್ 2024ರಲ್ಲಿ ತೆರೆಯಲಾಯಿತು. ಈ ಕೆಫೆಯ ಐಷಾರಾಮಿಯು ಎಲ್ಲರನ್ನೂ ಅಚ್ಚರಿಗೊಳಿಸುತ್ತಿದೆ. ಕೆಫೆಯಲ್ಲಿ ದೊರೆಯುವ ಚಿನ್ನದ ಲೇಪಿತ ಕ್ರೋಸೆಂಟ್ಸ್ ಮತ್ತು ಗೋಲ್ಡ್ ಲೀಫ್ ಟೀ ಈ ರೆಸ್ಟೋರೆಂಟ್‌ನ ವಿಶೇಷ ಆಕರ್ಷಣೆಗಳಾಗಿವೆ.

1 ಲಕ್ಷ ರೂಪಾಯಿ ಮೌಲ್ಯದ ಚಹಾದ ಈ ವೀಡಿಯೋಗೆ ನೆಟ್ಟಿಗರು ದಂಗಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಅಣ್ಣ ನೀವು ಚಹಾ ಕುಡಿಯಲು EMI ತೆಗೆದುಕೊಳ್ಳಬೇಕಾಗುತ್ತದೆ, ನಾನು ಕನಸಿನಲ್ಲಿಯೂ ಯೋಚಿಸಿರಲಿಲ್ಲ, ಇದು ನಿಜವಾಗಿಯೂ ತುಂಬಾ ಐಷಾರಾಮಿಯಾಗಿ ಕಾಣುತ್ತದೆ, 1 ಲಕ್ಷ ರೂಪಾಯಿ ಟೀ ಕುಡಿಯುತ್ತಿದ್ದಾರೆ, ಅವರು ತಮ್ಮ ಹಣವನ್ನು ಸ್ಪಷ್ಟವಾಗಿ ಪರಿಗಣಿಸುವುದಿಲ್ಲ, ಇದು ಹಣದ ವ್ಯರ್ಥ, ನಮ್ಮ ದೇಶದಲ್ಲಿ 10 ರೂಪಾಯಿಗೆ ಸಿಗುವ ಟ್ಯಾಪ್ರಿ ಟೀ ನಮಗೆ ಖುಷಿ ತಂದಿದೆ ಎಂದು ಕಾಮೆಂಟ್​ ಮಾಡಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net