ಶೋರೂಮ್ ಮುಂದೆ ಸುತ್ತಿಗೆಯಿಂದ ಸ್ಕೂಟರ್‌ ಒಡೆದು ಹಾಕಿದ ಗ್ರಾಹಕ; ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ.. | Viral Video

Untitled design - 2024-11-24T182908.253
Published on

ಮಧ್ಯಮ ವರ್ಗದ ಕುಟುಂಬದವರು ದುಡಿದ ಹಣದ ಪ್ರತಿ ಪೈಸೆ ಅಥವಾ EMI ಯಲ್ಲಿ ಹಣ ಕಟ್ಟುವ ಮೂಲಕ ಕಾರು ಅಥವಾ ಸ್ಕೂಟರ್​​​ ಅನ್ನು ಖರೀದಿಸುತ್ತಾರೆ. ಹೀಗಿರುವಾಗ ಅವರ ಹೊಸ ಸ್ಕೂಟರ್​​ನ ಮೊದಲ ಸರ್ವೀಸ್​​​ ಸಮಯದಲ್ಲಿ ಕಹಿ ಅನುಭವ ಎದುರಾಗದರೆ ಏನಾಗಬಹುದು. ಇದಕ್ಕೆ ನಿದರ್ಶನವೆಂಬಂತೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​(Viral Video) ಆಗುತ್ತಿದೆ.

ವೈರಲ್​ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ತಮ್ಮ ಸ್ಕೂಟರ್​ ಅನ್ನು ಸುತ್ತಿಗೆಯಿಂದ ಒಡೆದು ಹಾಕುತ್ತಿರುವುದನ್ನು ಕಾಣಬಹುದು. ಯಾರೊ ಒಬ್ಬರು ಹೀಗೆ ಮಾಡುತ್ತಿರುವುದು ಏಕೆ ಎಂದು ಕೇಳುತ್ತಾರೆ. ಅದಕ್ಕೆ ಆ ವ್ಯಕ್ತಿ ತಾನು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒಂದು ತಿಂಗಳ ಹಿಂದೆ ಖರೀದಿಸಿದ್ದಾಗಿ ಹೇಳುತ್ತಾರೆ. ಈಗ ಕಂಪನಿ ತನ್ನ ಸ್ಕೂಟರ್​ನ ಮೊದಲ ಸರ್ವೀಸ್​​ನಲ್ಲಿ 90 ಸಾವಿರ ರೂಪಾಯಿ ಬ್ಯಾಟರಿ ಹಾಳಾಗಿದೆ ಎಂದು ಹೇಳುತ್ತಿದ್ದಾರೆ. ಇದನ್ನು ಕೇಳಿದ ಕೆಲವರು ಆ ವ್ಯಕ್ತಿಗೆ ಸ್ಕೂಟರ್‌ಗೆ ಬೆಂಕಿ ಹಚ್ಚುವಂತೆ ಸಲಹೆಯನ್ನೂ ನೀಡುತ್ತಿರುವುದನ್ನು ನೋಡಬಹುದು.

ಗ್ರಾಹಕ ಕೋಪವನ್ನು ಸುತ್ತಿಗೆಯ ಮೂಲಕ ಸ್ಕೂಟರ್ ಮೇಲೆ ಹೊರಹಾಕಲಾಗುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಓಲಾ ಎಲೆಕ್ಟ್ರಿಕ್​​​ ಸ್ಕೂಟರ್‌ಗಳ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಇತ್ತೀಚೆಗೆ ಹಾಸ್ಯನಟ ಕುನಾಲ್ ಕಮ್ರಾ ಅವರು ಓಲಾ ಸ್ಕೂಟರ್‌ಗಳ ಗುಣಮಟ್ಟದ ಬಗ್ಗೆ ಓಲಾ ಮಾಲೀಕ ಭವಿಶ್ ಅಗರ್ವಾಲ್ ಅವರೊಂದಿಗೆ ಚರ್ಚೆ ನಡೆಸಿದ್ದು ಗೊತ್ತೆ ಇದೆ.

ಈ ವಿಡಿಯೋವನ್ನು ಇದುವರೆಗೂ ಸುಮಾರು 4 ಲಕ್ಷ ಮಂದಿ ವೀಕ್ಷಿಸಿದ್ದಾರೆ. 5 ಸಾವಿರಕ್ಕೂ ಹೆಚ್ಚು ಮಂದಿ ಲೈಕ್​​​ ನೀಡಿದ್ದು 400ಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದಾರೆ. ಇದರಲ್ಲಿ ಕೆಲವರು ಗ್ರಾಹಕರ ಕೋಪವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ, ಮತ್ತೆಕೆಲವರು ಕಂಪನಿಯಿಂದ ಪೂರ್ಣ ಮರುಪಾವತಿಗೆ ಒತ್ತಾಯಿಸುತ್ತಿದ್ದಾರೆ.

ಇದನ್ನು ಮಾಡುವ ಬದಲು ನೀವು ಕಂಪನಿಯ ವಿರುದ್ಧ ಪೊಲೀಸ್​​​ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಬೇಕು, ಗ್ರಾಹಕರ ವೇದಿಕೆಯಲ್ಲಿ ನಿಮ್ಮ ಪ್ರಕರಣವನ್ನು ನೀವು ಹೋರಾಡಬಹುದು, ಇದು ನಿಮಗೆ ಮಾತ್ರ ಹಾನಿಯನ್ನುಂಟುಮಾಡುತ್ತದೆ, ಪೆಟ್ರೋಲ್‌ನಿಂದ ಓಡುವ ವಾಹನಗಳಲ್ಲಿ ಕನಿಷ್ಠ ಅಂತಹ ಸಮಸ್ಯೆಗಳು ಉಂಟಾಗುವುದಿಲ್ಲ, ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕರು ಮೋಸಗಾರರು, ಎಲ್ಲರ ಸೇವೆ ಸಂಪೂರ್ಣ ಕಳಪೆಯಾಗಿದೆ, ಗ್ರಾಹಕರು ಕಂಪನಿಯಿಂದ ಸಂಪೂರ್ಣ ಮರುಪಾವತಿಯನ್ನು ಕೇಳಬೇಕು ಎಂದು ಕಾಮೆಂಟ್​ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net