ಮನುಷ್ಯನನ್ನು ಅಪ್ಪಿಕೊಂಡು ಮಲಗಿದ ಬಿಳಿ ಸಿಂಹ! ವಿಡಿಯೋ ವೈರಲ್

Viral video captures unlikely bond between man and lioness
Published on

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತಿವೆ. ಸಿಂಹವೊಂದು ಮನುಷ್ಯನೊಂದಿಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಿರುವ ವಿಡಿಯೋ ನೋಡಿದರೆ.. ನಿಜಕ್ಕೂ ವಾವ್ ಎನ್ನುತ್ತೀರಿ.

ಸಿಂಹದಲ್ಲಿ ಎರಡು ವಿಧಗಳಿವೆ. ಕೆಲವು ಸಿಂಹಗಳು ಕಂದು ಬಣ್ಣದ್ದಾಗಿದ್ದರೆ ಇನ್ನು ಕೆಲವು ಬಿಳಿ ಬಣ್ಣದಲ್ಲಿರುತ್ತವೆ. ಒಬ್ಬ ವ್ಯಕ್ತಿಯು ಈ ಎತ್ತರದ ಬಿಳಿ ಸಿಂಹದೊಂದಿಗೆ ಕಾಡಿನಲ್ಲಿ ವಾಸಿಸುತ್ತಾನೆ. ಕಾಡಿನಲ್ಲಿ ಬೆಟ್ಟದ ಮೇಲೆ ಕುಳಿತು ಹವಾಮಾನವನ್ನು ಆನಂದಿಸುತ್ತಿದ್ದಾನೆ.

ಪಕ್ಕದಲ್ಲಿದ್ದ ಸಿಂಹ.. ಅವನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿ ನಾಲಿಗೆಯಿಂದ ನೆಕ್ಕುತ್ತದೆ. ವ್ಯಕ್ತಿಯು ಮಲಗಿದರೆ, ಸಿಂಹವೂ ಅವನನ್ನು ತಬ್ಬಿಕೊಂಡು ಮಲಗುತ್ತದೆ. ಇದು ನೋಡಲು ನಿಜವಾಗಿಯೂ ಮುದ್ದಾಗಿದೆ.

ಈ ವಿಡಿಯೋಗೆ ನೆಟಿಜನ್‌ಗಳು ಕೂಡ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಸದಾ ಉಗ್ರವಾದ ಈ ಪ್ರಾಣಿ ಶಾಂತವಾಗಿರುವುದನ್ನ ನೋಡುವುದು ತುಂಬಾ ವಿಷೇಶವಾಗಿದೆ. ಇಲ್ಲಿಯವರೆಗೆ ಈ ವೀಡಿಯೊ 1.9 ಮಿಲಿಯನ್ ಜನ ವಿಡಿಯೋ ನೋಡಿದ್ದಾರೆ. ಸಾಕಷ್ಟು ಜನ ಮೆಚ್ಚುಗೆ ಸೂಚಿಸಿ ಕಾಮೆಂಟ್​​ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net