ಮೊದಲ ಸ್ವದೇಶಿ ಉಪಗ್ರಹ ಉಡಾವಣೆ ಮಾಡಿದ ಪಾಕ್​; Viral Post ನೋಡಿ ‘ವಾಟರ್ ಟ್ಯಾಂಕ್’ ಎಂದ ನೆಟ್ಟಿಗರು

Untitled design - 2025-01-19T191239.884
Published on

ಪಾಕಿಸ್ತಾನ ತನ್ನ ಮೊದಲ ಸ್ವದೇಶಿ ಉಪಗ್ರಹದ ವಿನ್ಯಾಸದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲಿಂಗ್‌ಗೆ ಬಲಿಯಾಗಿದೆ. ವಾಸ್ತವವಾಗಿ ಶುಕ್ರವಾರ(ಜನವರಿ 17) ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಸಾಮಾಜಿಕ ಜಾಲತಾಣದ ಪ್ಲಾಟ್​ಫಾರ್ಮ್​​ ಎಕ್ಸ್​​ನಲ್ಲಿ ಪೋಸ್ಟ್ ಮೂಲಕ ಪಾಕ್​ ತನ್ನ ಮೊದಲ ಸ್ಥಳೀಯ ಎಲೆಕ್ಟ್ರೋ-ಆಪ್ಟಿಕಲ್ (EO-1) ಉಪಗ್ರಹವನ್ನು ಚೀನಾದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ ಎಂದು ಹೇಳಿದ್ದಾರೆ(Viral Post).

ಆದರೆ ಒಂದು ಕಡೆ ಜನರು ಈ ಯಶಸ್ಸಿಗೆ ಪಾಕಿಸ್ತಾನವನ್ನು ಅಭಿನಂದಿಸಿದರೆ, ಮತ್ತೊಂದೆಡೆ ಅನೇಕರು ಉಪಗ್ರಹದ ವಿನ್ಯಾಸದ ಬಗ್ಗೆ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿರುವುದು ಕಂಡುಬಂದಿದೆ. ಹೆಚ್ಚಿನ ಬಳಕೆದಾರರು ಪಾಕ್ ಉಪಗ್ರಹವನ್ನು ಬಿಳಿ ನೀರಿನ ಟ್ಯಾಂಕ್‌ನೊಂದಿಗೆ ಹೋಲಿಸಿದ್ದಾರೆ.

2025 ಜೂನ್ 17ರಂದು ಅಧಿಕೃತವಾಗಿ ಪೋಸ್ಟ್​ ಅನ್ನು ಹಂಚಿಕೊಂಡಿದೆ. ಪೋಸ್ಟ್ ಮಾಡುವಾಗ ಶೀರ್ಷಿಕೆಯಲ್ಲಿ, ಪಾಕಿಸ್ತಾನವು ಎತ್ತರವನ್ನು ಮುಟ್ಟುತ್ತಿದೆ! ನಮ್ಮ ದೇಶಕ್ಕೆ ಹೆಮ್ಮೆಯ ಕ್ಷಣ, ಏಕೆಂದರೆ ಪಾಕಿಸ್ತಾನ ತನ್ನ ಮೊದಲ ಸ್ಥಳೀಯ ಎಲೆಕ್ಟ್ರೋ-ಆಪ್ಟಿಕಲ್ (EO-1) ಉಪಗ್ರಹವನ್ನು ಚೀನಾದ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ ಎಂದು ಬರೆದಿದೆ.

ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, 6 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 1.7 ಸಾವಿರ ರೀ-ಪೋಸ್ಟ್ ಮಾಡಲಾಗಿದ್ದು, ಅನೇಕರು ಮಿಮ್ಸೇನಾ ಮೂಲಕ ಪಾಕಿಸ್ತಾನದ ಉಪಗ್ರಹ ವಿನ್ಯಾಸವನ್ನು ಡಿಗ್ ತೆಗೆದುಕೊಂಡು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ವಾಟರ್​ ಟ್ಯಾಂಕ್​, ನೀರಿನ ಬಾಟಲಿ ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net