ಮಕ್ಕಳಿಗೆ ಹುಷಾರಿಲ್ಲದಿದ್ದರೆ ರಜೆ ನೀಡಲಾಗುವುದಿಲ್ಲ; ಕಂಪನಿಯ ಹೊಸ ರೂಲ್ಸ್​ಗೆ ನೆಟ್ಟಿಗರು ಗರಂ

Untitled-design-2024-09-10T151122.087-1
Published on

ಕೆಲವೊಮ್ಮೆ ನಮಗೆ ಅನಾರೋಗ್ಯವಾದರೂ ಕೆಲಸಕ್ಕೆ ಹೋಗುತ್ತೇವೆ. ಆದರೆ ಮಕ್ಕಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಪಾಲಕರು ಸಹಿಸುವುದಿಲ್ಲ. ತಂದೆ ಮತ್ತು ತಾಯಿ ಇಬ್ಬರು ಉದ್ಯೋಗದಲ್ಲಿದ್ದರೆ ಅವರು ಕೂಡ ಕೆಲಸಕ್ಕೆ ರಜೆ ಹಾಕಿ ಮಕ್ಕಳ ಆರೈಕೆ ಮಾಡುತ್ತಾರೆ. ಆದರೆ ಇದರಕ್ಕೆ ವ್ಯತಿರಿಕ್ತವಾದ ಪೋಸ್ಟ್​ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ಪೋಸ್ಟ್​​ ನೋಡಿ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ವೈರಲ್​ ಆಗುತ್ತಿರುವ ಪೋಸ್ಟ್​ನಲ್ಲಿ ಮಕ್ಕಳಿಗೆ ಹುಷಾರಿಲ್ಲ ಎಂಬ ಕಾರಣಕ್ಕೆ ಉದ್ಯೋಗಿಗಳಿಗೆ ರಜೆ ನೀಡಲಾಗುವುದಿಲ್ಲ ಎಂದು ಕಂಪನಿಯೊಂದು ತನ್ನ ನೌಕರರಿಗೆ ನೀಡಿರುವ ನೋಟಿಸ್ ಪ್ರತಿ ಇದೆ. ಅಷ್ಟೂ ಮಾತ್ರ ಹೇಳದೆ ಮುಂದುವರಿದು ಕಂಪನಿಯು ನಿಮ್ಮ ಮಕ್ಕಳನ್ನು ನೇಮಿಸಿಕೊಂಡಿಲ್ಲ. ಅವರು ಅನಾರೋಗ್ಯಗೊಂಡರೆ ಕೆಲಸಕ್ಕೆ ರಜೆ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಈ ರೀತಿ ಮೆಮೋ ಯಾವ ಕಂಪನಿಯಿಂದ ಬಂದಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಈ ಪೋಸ್ಟ್ ಅನ್ನು ಇದುವರೆಗೂ ಒಂದೂವರೆ ಸಾವಿರಕ್ಕೂ ಹೆಚ್ಚು ಜನರು ನೋಡಿದ್ದು ಕೋಪದಿಂದ ಪ್ರತಿಕ್ರಿಯಿಸಿದ್ದಾರೆ.

ಮೆಮೋಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಗದ್ದಲ ಉಂಟಾಗಿದೆ. ನಮ್ಮ ಮಕ್ಕಳಿಗೆ ಕೆಲಸ ನೀಡದಿದ್ದರೆ ಪರವಾಗಿಲ್ಲ. ಕುಟುಂಬದವರನ್ನು ನೇಮಿಸಿಕೊಳ್ಳದಿದ್ದರೂ ಅವರಿಗೆ ಅನಾರೋಗ್ಯವಾದಾಗ ಮನೆಯವರಿಗೆ ಅವರ ಅಗತ್ಯವಿರುತ್ತದೆ, ಇದು ಅತ್ಯಂತ ಅಸಂಬದ್ಧ ನಿರ್ಧಾರ, ಅನಾರೋಗ್ಯದಿಂದ ಬಳಲುವ ಮಕ್ಕಳನ್ನು ನಿಮ್ಮೊಂದಿಗೆ ಕೆಲಸಕ್ಕೆ ಕರೆತರಲು ಅವರು ಬಯಸುತ್ತಾರೆ ಎಂದೆನ್ನಿಸುತ್ತದೆ ಎಂದು ಕಾಮೆಂಟ್​ ಮಾಡಿದ್ದಾರೆ.

ಅಂದ್ಹಾಗೆ ಇತ್ತೀಚೆಗೆ ಥೈಲ್ಯಾಂಡ್ ಸಂಸ್ಥೆಯೊಂದು ವಿಚಿತ್ರವಾದ ಕಾರಣಕ್ಕೆ ರಜೆ ನೀಡುವುದಾಗಿ ಹೇಳಿಕೊಂಡಿತ್ತು. ಅನಾರೋಗ್ಯ ಹಾಗೂ ವಾರ್ಷಿಕ ರಜೆಯಂತೆಯೇ ಡೇಟಿಂಗ್​ನಲ್ಲಿ ತಮ್ಮ ಸಂಗಾತಿಗಳೊಂದಿಗೆ ಸಮಯ ಕಳೆಯುವವರಿಗಾಗಿ ರಜೆ ನೀಡಲು ಟಿಂಡರ್​​ ರಜೆ ಎಂದು ಕರೆಯಲ್ಪಡುವ ರಜೆಯನ್ನು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net