

ಮೂರು ದಶಕಗಳ ಹಿಂದಿನವರಿಗೆ ಮಿಕ್ಕಿ ಮೌಸ್ ಹಾಗೂ ಮಿನ್ನಿ ಮೌಸ್ ಪಾತ್ರಗಳು ಚಿರಪರಿಚಿತ. ಬಹಳ ಮೃದು ಮಾತಿನವಳು ಎನಿಸಿದ ಮಿನ್ನಿ ಮೌಸ್ ಎಲ್ಲರಿಗೂ ಅಚ್ಚುಮೆಚ್ಚು.
ಆದರೆ ಇತ್ತೀಚೆಗೆ ಮಿನ್ನಿ ಮೌಸ್ ಪಾತ್ರಧಾರಿ ಮಹಿಳೆಯೊಬ್ಬಳು ಲಾಸ್ವೆಗಾಸ್ನಲ್ಲಿ ಭದ್ರತಾ ಸಿಬ್ಬಂದಿಯ ಬಗ್ಗೆ ಕೋಪ ಮಾಡಿಕೊಂಡು ಅವರೊಡನೆ ಜಗಳಕ್ಕೆ ಮುಂದಾಗಿದ್ದಳು. ಕೊನೆಗೆ ಪಕ್ಕದಲ್ಲೇ ಇದ್ದ ಮಿಕ್ಕಿ ಮೌಸ್ ಹಾಗೂ ಗೂಫಿ ಪಾತ್ರಧಾರಿಗಳು ಆಗಮಿಸಿ ಈ ಮಿನ್ನಿ ಮೌಸ್ ಪಾತ್ರಧಾರಿ ಮಹಿಳೆಯನ್ನು ಸಂತೈಸಬೇಕಾಯಿತು. ಇದರ ವಿಡಿಯೋ ವೈರಲ್ ಆಗಿದೆ.