ಬೀದಿನಾಯಿಗೆ ನೀರು ಕುಡಿಸಿದ ವೃದ್ಧ

VIRAL
Published on

ಸಾಮಾನ್ಯವಾಗಿ ಬೀದಿನಾಯಿಗಳ ಬಗ್ಗೆ ಕರುಣೆ ತೋರಿ ಬಿಸ್ಕತ್, ಬ್ರೆಡ್ ಹಾಕುವವರಿರುತ್ತಾರೆ. ಇತ್ತೀಚೆಗೆ ವೃದ್ಧರೊಬ್ಬರು ಬಾಯಾರಿದ್ದ ಬೀದಿನಾಯಿಗೆ ಕೈಯಲ್ಲಿ ನೀರು ತುಂಬಿಸಿ ಕುಡಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫುಟ್​ಪಾತ್ ಬಳಿಯಿದ್ದ ನಲ್ಲಿಯಿಂದ ಕೈಯಲ್ಲಿ ನೀರು ತುಂಬಿಸಿಕೊಂಡ ವೃದ್ಧ ಬಾಯಾರಿದ್ದ ನಾಯಿಗೆ ಕುಡಿಸಿದ್ದಾರೆ.

ಆ ಸಂದರ್ಭದಲ್ಲಿ ಯಾರೋ ಅದರ ವಿಡಿಯೋ ಮಾಡಿದ್ದಾರೆ. ಸುಶಾಂತ್ ನಂದಾ ಎನ್ನುವವರು ಟ್ವಿಟರ್​ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಜತೆಗೆ, ‘ಏನನ್ನೂ ಬಯಸದೆ ಇತರರಿಗೆ ಸಹಾಯ ಮಾಡಿ’ ಎಂಬ ಟಿಪ್ಪಣಿಯನ್ನೂ ಸೇರಿಸಿದ್ದಾರೆ. ಈ ವೈರಲ್ ವಿಡಿಯೋವನ್ನು ಸಾವಿರಾರು ಜನ ಮೆಚ್ಚಿ, ಶೇರ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net